ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಒಂದು ವರ್ಷದಲ್ಲಿ 7,000 ಕ್ಕೂ ಹೆಚ್ಚು ನೋಂದಾಯಿತ ವಕ್ಫ್ ಆಸ್ತಿಗಳನ್ನು ಕಳೆದುಕೊಂಡಿದ್ದು, ಇದು ಮುಸ್ಲಿಮರ ವಿರುದ್ಧದ "ಹೊಸ ದಾಳಿ" ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಶುಕ್ರವಾರ ಟೀಕಿಸಿದ್ದಾರೆ.
"ದೇಶಾದ್ಯಂತ 3.55 ಲಕ್ಷಕ್ಕೂ ಹೆಚ್ಚು ವಕ್ಫ್ ಆಸ್ತಿಗಳು ಕಾಣೆಯಾಗಿವೆ. ಜಮ್ಮು ಮತ್ತು ಕಾಶ್ಮೀರ ಹೊಸ ಯುಎಂಇಇಡಿ ಡೇಟಾಬೇಸ್‌ನಲ್ಲಿ 7,240 ವಕ್ಫ್ ಆಸ್ತಿಗಳನ್ನು ಕಳೆದುಕೊಂಡಿದೆ. ಇದು ವಕ್ಫ್ ಆಸ್ತಿಗಳ ಪಾರದರ್ಶಕತೆ ಮತ್ತು ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ" ಎಂದು ಪಿಡಿಪಿ ಮುಖ್ಯಸ್ಥೆ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
"ಹಿಂಸಾಚಾರ, ಆಸ್ತಿಗಳ ಧ್ವಂಸ, ನೆಲಸಮ ಮತ್ತು ಹಕ್ಕು ನಿರಾಕರಣೆಯ ನಂತರ, ವಕ್ಫ್ ಭೂಮಿ ಕಿತ್ತುಕೊಳ್ಳುತ್ತಿರುವುದು ಮುಸ್ಲಿಮರ ವಿರುದ್ಧದ ಹೊಸ ದಾಳಿಯಂತೆ ಭಾಸವಾಗುತ್ತದೆ. ಇದು ಎಂದು ಕೊನೆಗೊಳ್ಳುತ್ತದೆ?" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮುಫ್ತಿ, ಡಿಸೆಂಬರ್ 7 ರವರೆಗೆ ದೇಶಾದ್ಯಂತ ನೋಂದಾಯಿತ ವಕ್ಫ್ ಆಸ್ತಿಗಳ ಡೇಟಾವನ್ನು ಸಹ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 9, 2024 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 32,533 ನೋಂದಾಯಿತ ಆಸ್ತಿಗಳಿದ್ದರೆ, ಈ ವರ್ಷ ಡಿಸೆಂಬರ್ 7 ರಂದು ಅದು 7,240 ರಷ್ಟು ಕಡಿಮೆಯಾಗಿ 25,293 ಕ್ಕೆ ಇಳಿಕೆಯಾಗಿದೆ.