ಹೈದರಾಬಾದಿನಲ್ಲಿ 'ಮೆಸ್ಸಿ 
ದೇಶ

GOAT India Tour: ಹೈದರಾಬಾದ್ ನಲ್ಲಿ 'ಮೆಸ್ಸಿ' ಮೇನಿಯಾ; ಸಿಎಂ ರೇವಂತ್ ರೆಡ್ಡಿ ಜೊತೆಗೆ ಆಟವಾಡಿದ ಫುಟ್ಬಾಲ್ ದಂತಕಥೆ!

ಕೋಲ್ಕತ್ತಾದಿಂದ ತನ್ನ ಬಹು ನಿರೀಕ್ಷಿತ ಭಾರತ ಭೇಟಿಯನ್ನು ಪ್ರಾರಂಭಿಸಿದ ನಂತರ, ವಿಶ್ವ ಶ್ರೇಷ್ಠ ಪುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರೀ ಉತ್ಸಾಹ ಮತ್ತು ಬಿಗಿ ಭದ್ರತೆಯ ನಡುವೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಹೈದರಾಬಾದ್: ಗೋಟ್ ಇಂಡಿಯಾ ಪ್ರವಾಸದ(GOAT India tour event) ಭಾಗವಾಗಿ ಭಾರತಕ್ಕೆ ಬಂದಿರುವ ಫುಟ್‌ಬಾಲ್ ದಂತಕಥೆ ಲಿಯೋನಲ್ ಮೆಸ್ಸಿ ಕಾಲಿಡುತ್ತಿದ್ದಂತೆ, ಮುತ್ತಿನ ನಗರಿ ಹೈದರಾಬಾದ್ ಫುಟ್‌ಬಾಲ್ ಜ್ವರಕ್ಕೆ ಸಾಕ್ಷಿಯಾಯಿತು.

ಕೋಲ್ಕತ್ತಾದಿಂದ ತನ್ನ ಬಹು ನಿರೀಕ್ಷಿತ ಭಾರತ ಭೇಟಿಯನ್ನು ಪ್ರಾರಂಭಿಸಿದ ನಂತರ, ವಿಶ್ವ ಶ್ರೇಷ್ಠ ಪುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರೀ ಉತ್ಸಾಹ ಮತ್ತು ಬಿಗಿ ಭದ್ರತೆಯ ನಡುವೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಬಳಿಕ ಮೆಸ್ಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜೊತೆಗೆ ಸ್ನೇಹಪರ ಪಂದ್ಯವನ್ನಾಡಿದರು. ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಒಂದನ್ನು ಬಾರಿಸಿದರು. ಮೆಸ್ಸಿ ಮತ್ತು ರೇವಂತ್ ರೆಡ್ಡಿ ಸ್ವಲ್ಪ ಸಮಯದವರೆಗೆ ಪಾಸ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಲೇ ಗಮನ ಸೆಳೆದರು.

ರೆಡ್ಡಿ ಅಪರ್ಣಾ ಆಲ್ ಸ್ಟಾರ್ಸ್ ವಿರುದ್ಧ 4-0 ಅಂತರದಲ್ಲಿ ಜಯಗಳಿಸುವ ಮೂಲಕ RR9ತಂಡಕ್ಕೆ ನಾಲ್ಕನೇ ಗೋಲು ಗಳಿಸಿದರು. ಬಳಿಕ ಭಾರಿ ಹರ್ಷೋದ್ಗಾರಗಳ ನಡುವೆ ಸ್ಟೇಡಿಯಂ ಒಂದು ಸುತ್ತು ಹಾಕಿದ ಮೆಸ್ಸಿ, ಫೋಟೋಗಳಿಗೆ ಫೋಸ್ ನೀಡಿದರು. ಪ್ರೇಕ್ಷಕರತ್ತ ಕೈಬೀಸಿದರು.

ಇದೇ ವೇಳೆ ಲಿನೋನೆಲ್ ಮೆಸ್ಸಿ ಅವರನ್ನು ಭೇಟಿಯಾದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಅರ್ಜೇಂಟೈನಾ ಪುಟ್ ಬಾಲ್ ಜೆರ್ಸಿಯನ್ನು ಮೆಸ್ಸಿ ನೀಡಿದ್ದಾರೆ. ತದನಂತರ ಮೂವರು ಕ್ರೀಡಾಂಗಣದಿಂದ ತೆರಳಿದರು. ಈ ಮೂಲಕ ಕಾರ್ಯಕ್ರಮ ಅಂತ್ಯವಾಯಿತು.

ಇದಕ್ಕೂ ಮುನ್ನಾ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಮೆಸ್ಸಿಯನ್ನು ಬರಮಾಡಿಕೊಂಡರು. ಇಂದು ರಾತ್ರಿ ಅವರು ರಾಯಲ್ ಫಲಕ್ನುಮಾ ಅರಮನೆಯಲ್ಲಿ ಕಳೆಯಲಿದ್ದಾರೆ. ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಿರುವ CCI ಕಾರ್ಯಕ್ರಮದಲ್ಲಿ ಮೆಸ್ಸಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!