ಡಿಕ್ಕಿಗೆ ಜಖಂಗೊಂಡ ವಾಹನಗಳು  
ದೇಶ

ಹರ್ಯಾಣ ಹೆದ್ದಾರಿಯಲ್ಲಿ ದಟ್ಟ ಮಂಜು: ಡಜನ್‌ಗೂ ಅಧಿಕ ವಾಹನಗಳ ಸರಣಿ ಡಿಕ್ಕಿ, ಹಲವರಿಗೆ ಗಾಯ; Video

ಹರ್ಯಾಣದ ಹಿಸಾರ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ 52 ರ ಧಿಕ್ತಾನಾ ಮೋಡಾದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸರಣಿ ಡಿಕ್ಕಿ ಸಂಭವಿಸಿದೆ.

ಹರಿಯಾಣದ ಹೆದ್ದಾರಿಗಳಲ್ಲಿ ಇಂದು ಭಾನುವಾರ ಮುಂಜಾನೆ ದಟ್ಟವಾದ ಮಂಜು ಕವಿದಿದ್ದರಿಂದ ಎರಡು ಪ್ರಮುಖ ಅಪಘಾತಗಳಲ್ಲಿ ಹಲವಾರು ವಾಹನಗಳು ಜಖಂಗೊಂಡಿರುವ ಘಟನೆ ನಡೆದಿದ್ದು ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹರ್ಯಾಣದ ಹಿಸಾರ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ 52 ರ ಧಿಕ್ತಾನಾ ಮೋಡಾದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸರಣಿ ಡಿಕ್ಕಿ ಸಂಭವಿಸಿದೆ. ಎರಡು ಹರ್ಯಾಣ ರಸ್ತೆ ಸಾರಿಗೆ ಬಸ್‌ಗಳು, ಒಂದು ಡಂಪರ್ ಟ್ರಕ್, ಹಲವು ಕಾರುಗಳು, ದ್ವಿಚಕ್ರ ವಾಹನಗಳು ಒಂದರ ಹಿಂದೆ ಒಂದರಂತೆ ಸತತವಾಗಿ ಡಿಕ್ಕಿ ಹೊಡೆದಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೈತಾಲ್ ರಸ್ತೆ ಸಾರಿಗೆ ಬಸ್ ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಘಟನೆ ನಡೆದಿದೆ. ನಂತರ ಹಿಂದಿನಿಂದ ಬಂದ ಮತ್ತೊಂದು ರಾಜ್ಯ ಸಾರಿಗೆ ಬಸ್ ಈಗಾಗಲೇ ಅಪಘಾತಕ್ಕೀಡಾದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ರಸ್ತೆ ಗೋಚರತೆ ತೀರಾ ಕೆಳಮಟ್ಟಕ್ಕೆ ಕುಸಿದಿದ್ದರಿಂದ ಒಂದು ಕಾರು ಮತ್ತು ನಂತರ ಒಂದು ಬೈಕ್ ಕೂಡ ಸಿಲುಕಿಕೊಂಡವು. ಅಪಘಾತದಲ್ಲಿ ನೂರಾರು ಪ್ರಯಾಣಿಕರು ಸಿಲುಕಿಕೊಂಡರು. ಆದರೆ ಸಾವು-ನೋವುಗಳಾಗದೆ ಪಾರಾಗಿದ್ದಾರೆ.

ರೇವಾರಿಯ ರಾಷ್ಟ್ರೀಯ ಹೆದ್ದಾರಿ 352 ರಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ, ಕಡಿಮೆ ಗೋಚರತೆಯಿಂದಾಗಿ ಮೂರರಿಂದ ನಾಲ್ಕು ಬಸ್‌ಗಳು ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಬಸ್‌ಗಳು ಜಖಂಗೊಂಡಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.

ಕಳೆದ ಕೆಲವು ದಿನಗಳಿಂದ ಹರಿಯಾಣದಲ್ಲಿ ತೀವ್ರ ಶೀತಗಾಳಿ ಬೀಸುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ನಿಂದ 6 ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದು, ನಿರಂತರ ದಟ್ಟವಾದ ಮಂಜು ಕವಿದು ವಾಹನ ಸವಾರರಿಗೆ ಸವಾಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

WPL 2026: ನೇರವಾಗಿ ಫೈನಲ್ ಪ್ರವೇಶಿಸಿದ ಸ್ಮೃತಿ ಮಂದಾನ ನಾಯಕತ್ವದ RCB ಪಡೆ!

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಟ್ರಂಪ್ ದಾಳಿ ಬೆದರಿಕೆ ಬೆನ್ನಲ್ಲೇ ಇರಾನ್‌ಗೆ ಶಾಕ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಉಗ್ರ ಸಂಘಟನೆ ಎಂದು ಪಟ್ಟಿ ಮಾಡಿದ EU!

ಒಟ್ಟಾರೆ 320 ಕೋಟಿ ಆಸ್ತಿ ಮುಟ್ಟುಗೋಲು: ಕರ್ನಾಟಕ Congress ಶಾಸಕ, ಸಹಚರರು ಅಕ್ರಮ ಬೆಟ್ಟಿಂಗ್ ಜಾಲದ 'ಮಾಸ್ಟರ್ ಮೈಂಡ್'; ED

Indian Armyಗೆ 2 ದೀರ್ಘ-ಶ್ರೇಣಿಯ 'Suryastra' ರಾಕೆಟ್ ಲಾಂಚರ್‌ ಸೇರ್ಪಡೆ, ಶೀಘ್ರ live-fire ಪ್ರಯೋಗ!

SCROLL FOR NEXT