ಸಂಗ್ರಹ ಚಿತ್ರ 
ದೇಶ

ಚುನಾವಣಾ ಟ್ರಸ್ಟ್‌ಗಳ ದೇಣಿಗೆ: ಬಿಜೆಪಿಗೆ ಸಿಂಹಪಾಲು; ದೇಣಿಗೆಯಲ್ಲೂ ಕುಸಿತ ಕಂಡ ಕಾಂಗ್ರೆಸ್ ಪಕ್ಷ!

2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್‌ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ.

ನವದೆಹಲಿ: ಸುಪ್ರೀಂ ಕೋರ್ಟ್ ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ 2024-25ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಮೂರು ಪಟ್ಟು ಹೆಚ್ಚಾಗಿದ್ದು, 3,811 ಕೋಟಿ ರೂ.ಗಳಿಗೆ ತಲುಪಿದೆ.

ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ, ಕಳೆದ ಹಣಕಾಸು ವರ್ಷದಲ್ಲಿ ಪಡೆದ ದೇಣಿಗೆಗಳ ಕುರಿತು ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಸಿದೆ. ಗಡುವಿಗೆ ಎರಡು ದಿನಗಳ ಮೊದಲು ಡಿಸೆಂಬರ್ 8 ರಂದು ವರದಿಯನ್ನು ಸಲ್ಲಿಸಲಾಗಿದೆ. ಈ ಮಾಹಿತಿ ಈಗ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. 2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್‌ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ.

ಇದು ಪ್ರಮುಖ ಚುನಾವಣಾ ಟ್ರಸ್ಟ್‌ಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯನ್ನಾಧರಿಸಿದ ಅಂಕಿ-ಅಂಶಗಳಾಗಿದ್ದು, ಇತರೆ ಸಣ್ಣಪುಟ್ಟ ಟ್ರಸ್ಟ್‌ಗಳು ಹಾಗೂ ನೋಂದಣಿಯಾಗದ ಮೂಲಗಳಿಂದಲೂ ರಾಜಕೀಯ ಪಕ್ಷಗಳಿಗೆ ಭಾರೀ ಪ್ರಮಾಣದ ದೇಣಿಗೆ ಹರಿದು ಬಂದಿದೆ. ಒಟ್ಟು13 ಚುನಾವಣಾ ಟ್ರಸ್ಟ್‌ಗಳಲ್ಲಿ 9 ಟ್ರಸ್ಟ್‌ಗಳು ತಮ್ಮ ದೇಣಿಗೆಯ ವಿವರವನ್ನು ಆಯೋಗಕ್ಕೆ ಸಲ್ಲಿಸಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಅವು ನೀಡಿದ ದೇಣಿಗೆ 3 ಪಟ್ಟು ಹೆಚ್ಚಾಗಿದೆ. ಕಳೆದ ಬಾರಿ ಈ ಟ್ರಸ್ಟ್‌ಗಳು 1,218 ಕೋಟಿ ರು. ನೀಡಿದ್ದವು.

2668 ಕೋಟಿ ರು. ದೇಣಿಗೆಯೊಂದಿಗೆ ಪ್ರುಡೆಂಟ್‌ ಎಲೆಕ್ಟೋರಲ್ ಟ್ರಸ್ಟ್‌ ಮೊದಲ ಸ್ಥಾನದಲ್ಲಿದೆ. ಇದರ ಬಹುಪಾಲು ದೇಣಿಗೆ ಬಿಜೆಪಿಗೆ ಹೋಗಿದೆ. ಜೊತೆಗೆ, ಕಾಂಗ್ರೆಸ್‌, ಟಿಎಂಸಿ, ಆಪ್‌, ಟಿಡಿಪಿ ಮತ್ತು ಇತರೆ ರಾಜಕೀಯ ಪಕ್ಷಗಳಿಗೂ ಹಣ ನೀಡಿದೆ. ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌, ಮೆಘಾ ಎಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟ್ರಕ್ಟರ್‌ ಲಿ., ಭಾರ್ತಿ ಏರ್‌ಟೆಲ್‌, ಅರವಿಂದೋ ಫಾರ್ಮಾ ಮತ್ತು ಟೊರೆಂಟ್‌ ಫಾರ್ಮಾಸ್ಯುಟಿಕಲ್ಸ್‌ ಈ ಟ್ರಸ್ಟ್‌ನ ಪ್ರಮುಖ ದೇಣಿಗೆದಾರರಾಗಿದ್ದಾರೆ.

ಪ್ರೋಗ್ರೆಸಿವ್‌ ಎಲೆಕ್ಟೋರಲ್‌ ಟ್ರಸ್ಟ್‌ 914.97 ಕೋಟಿ ರು. ದೇಣಿಗೆಯಾಗಿ ನೀಡಿದ್ದು, ಇದರ ಶೇ.80.82ರಷ್ಟು ಭಾಗ ಬಿಜೆಪಿಗೆ ಹೋಗಿದೆ. ಟಾಟಾ ಸ್ಟೀಲ್‌, ಟಾಟಾ ಸನ್ಸ್‌, ಟಿಸಿಎಸ್‌, ಟಾಟಾ ಮೋಟಾರ್ಸ್‌, ಟಾಟಾ ಪವರ್‌ ಮತ್ತು ಇತರೆ ಕಂಪನಿಗಳು ಈ ಟ್ರಸ್ಟ್‌ನ ದೇಣಿಗೆದಾರರಾಗಿದ್ದಾರೆ.

ಇನ್ನು ನ್ಯೂ ಡೆಮಾಕ್ರಟಿಕ್‌ ಎಲೆಕ್ಟೋರಲ್‌ ಟ್ರಸ್ಟ್‌ 160 ಕೋಟಿ ರು. ದೇಣಿಗೆ ನೀಡಿದ್ದು, ಇದರಲ್ಲಿ 150 ಕೋಟಿ ರು. ಬಿಜೆಪಿಗೆ ಹೋಗಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಗ್ರೂಪ್‌ ಕಂಪನಿಗಳು ಈ ಟ್ರಸ್ಟ್‌ನ ಪ್ರಮುಖ ದೇಣಿಗೆದಾರರು.

ಅದೇ ರೀತಿ ಹಾರ್ಮೋನಿ ಎಲೆಕ್ಟೋರಲ್‌ ಟ್ರಸ್ಟ್‌ ಬಿಜೆಪಿಗೆ 30.15 ಕೋಟಿ ದೇಣಿಗೆ ನೀಡಿದ್ದು, ಭಾರತ್‌ ಫೋರ್ಜ್‌ ಇದರ ಪ್ರಮುಖ ದೇಣಿಗೆದಾರರಾಗಿದ್ದಾರೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ಗಳನ್ನು ಅಸಾಂವಿಧಾನಿಕ ಎಂದು ಹೇಳಿ ರದ್ದು ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!