ಸೂರತ್(ಗುಜರಾತ್): ಗುಜರಾತ್ ರಾಜ್ಯದ ಸೂರತ್‌ನ ಡುಮಾಸ್ ಎಂಬಲ್ಲಿ ಸ್ಥಳೀಯ ಉದ್ಯಮಿ ದೀಪಕ್ ಇಜರ್ದಾರ್ ತಮ್ಮ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿ ವಾಹನ ಚಾಲಕರಿಗೆ ತೊಂದರೆ ಉಂಟುಮಾಡಿದ ಘಟನೆ ನಡೆದಿದೆ. ರಸ್ತೆ ಮಧ್ಯೆ ತಡೆದು ನಿಲ್ಲಿಸಿ ಪಟಾಕಿ ಹಚ್ಚುತ್ತಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದಾಗ ಪಟಾಕಿ ಹಚ್ಚಿ ಅದನ್ನು ಕಾರಿನ ಚಾಲಕರೊಬ್ಬರಿಗೆ ಸಿಟ್ಟಿನಿಂದ ತೋರಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವಾಹನಗಳು ಮುಂದೆ ಹೋಗಲು ಪ್ರಯತ್ನಿಸಿದಾಗ ಸಂಚಾರ ಸ್ಥಗಿತಗೊಂಡಿರುವುದನ್ನು ತೋರಿಸುತ್ತದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಜರ್ದಾರ್ ಟ್ರಾಫಿಕ್ ಜಾಮ್ ಉಂಟುಮಾಡಿದ್ದಲ್ಲದೆ, ಹತಾಶೆ ವ್ಯಕ್ತಪಡಿಸಿದ ವಾಹನ ಚಾಲಕರ ಕಡೆಗೆ ಉದ್ದೇಶಪೂರ್ವಕವಾಗಿ ಪಟಾಕಿಗಳನ್ನು ತೋರಿಸುತ್ತಿದ್ದಾರೆ.
ಚಾಲಕರು ರಸ್ತೆಯನ್ನು ತೆರವುಗೊಳಿಸಲು ನಿರಂತರವಾಗಿ ಹಾರ್ನ್ ಮಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಜರ್ದಾರ್ ಅವರನ್ನು ಅಪಹಾಸ್ಯ ಮಾಡಿ ಸಾರ್ವಜನಿಕ ರಸ್ತೆಯಲ್ಲೇ ಆಚರಣೆಯನ್ನು ಮುಂದುವರೆಸಿದರು, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಜವಾಬ್ದಾರಿಯ ಬಗ್ಗೆ ಇದು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದಕ್ಕೆ ದೀಪಕ್ ಇಜರ್ದಾರ್, ನಾನು ಸೆಲೆಬ್ರಿಟಿ. ನಾನು ನಿಮ್ಮನ್ನು ಐದು ನಿಮಿಷಗಳ ಕಾಲ ನಿಲ್ಲಿಸಿದರೆ ಏನು ಗಂಭೀರ ಅಪರಾಧ ಮಾಡಿದೆ?" ಎಂದು ಉಡಾಫೆ ಮಾತುಗಳನ್ನು ಹೇಳಿದರು.
ಸೂರತ್‌ನಲ್ಲಿ ಅಧಿಕಾರಿಗಳು ಇಜರ್ದಾರ್ ವಿರುದ್ಧ ಸಾರ್ವಜನಿಕ ಕಿರಿಕಿರಿ ಮತ್ತು ಸಂಬಂಧಿತ ಕಾನೂನಿನ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದರು. ಆರಂಭಿಕ ವಿಚಾರಣೆಯ ನಂತರ, ಹೆಚ್ಚಿನ ತನಿಖೆ ಬಾಕಿ ಇರುವಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.