ಮೇಕ್ ಇನ್ ಇಂಡಿಯಾ-ರಾಹುಲ್ ಗಾಂಧಿ online desk
ದೇಶ

China ಅತಿಕ್ರಮಣಕ್ಕೆ Make In India ವೈಫಲ್ಯ ಕಾರಣ!: ಲೋಕಸಭೆಯಲ್ಲಿ Rahul Gandhi

ಇದೇ ವೇಳೆ ಸರ್ಕಾರವನ್ನು ಟೀಕಿಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ (Make in India) ಯೋಜನೆ ವಿಫಲವಾಗಿದೆ. ದೇಶದ ಉತ್ಪಾದನಾ ಕ್ಷೇತ್ರ 60 ವರ್ಷಗಳಲ್ಲೇ ಕುಸಿತ ಕಂಡಿದೆ.

ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಆರಂಭದ ದಿನ ಉಭಯ ಸದನಗಳನ್ನುದ್ದೇಶಿಸಿದ್ದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ರಾಷ್ಟ್ರಪತಿಗಳ ಭಾಷಣದಲ್ಲಿ ಸರ್ಕಾರ ಮಾಡಿರುವ ಕೆಲಸಗಳ ಅದೇ ಹಳೆಯ ಪಟ್ಟಿಯೇ ಇದೆ ಹೊಸತೇನೂ ಎಂದು ಹೇಳಿದ್ದಾರೆ.

ಇದೇ ವೇಳೆ ಸರ್ಕಾರವನ್ನು ಟೀಕಿಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ (Make in India) ಯೋಜನೆ ವಿಫಲವಾಗಿದೆ. ದೇಶದ ಉತ್ಪಾದನಾ ಕ್ಷೇತ್ರ 60 ವರ್ಷಗಳಲ್ಲೇ ಕುಸಿತ ಕಂಡಿದೆ.

"ಪ್ರಧಾನಿಯವರು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು, ಅದು ಒಳ್ಳೆಯ ಐಡಿಯಾ ಎಂದು ಭಾವಿಸುತ್ತೇನೆ. ನಾವು ಪ್ರತಿಮೆಗಳು, ಕಾರ್ಯಗಳು ಮತ್ತು ಹೂಡಿಕೆಗಳನ್ನು ನೋಡಿದ್ದೇವೆ. (ಆದರೆ) ಫಲಿತಾಂಶವು ನಿಮ್ಮ ಮುಂದೆಯೇ ಇದೆ. ಉತ್ಪಾದನೆ 2014 ರಲ್ಲಿ GDP ಯ ಶೇಕಡಾ 15.3 ರಿಂದ ಇಂದು GDP ಯ ಶೇಕಡಾ 12.6 ಕ್ಕೆ ಇಳಿದಿದೆ. ಇದು 60 ವರ್ಷಗಳಲ್ಲಿ ಉತ್ಪಾದನೆ ವಲಯದಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಪಾಲು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಾನು ಪ್ರಧಾನಿಯನ್ನು ದೂಷಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಲಿಲ್ಲ ಎಂದು ಹೇಳುವುದು ನ್ಯಾಯಯುತವಲ್ಲ, ಪ್ರಧಾನಿಯವರು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು. ಮೇಕ್ ಇನ್ ಇಂಡಿಯಾ ಒಳ್ಳೆಯ ಪರಿಕಲ್ಪನೆ ಆಗಿತ್ತು, ಆದರೆ ಅದರಲ್ಲಿ ಮೋದಿ ವಿಫಲರಾದರು ಎಂಬುದು ಸ್ಪಷ್ಟವಾಗಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚೀನಾ ಉತ್ಪನ್ನಗಳ ಮೇಲೆ ಭಾರತದ ಅವಲಂಬನೆ ಪ್ರಮುಖ ರಾಷ್ಟ್ರೀಯ ಕಾಳಜಿ

ಭಾರತ ಚೀನಾ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಪ್ರಮುಖ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ. ಭಾರತದ ಪ್ರದೇಶದ ಒಳಗೆ ಚೀನಾ ಪಡೆಗಳು ನುಗ್ಗಿವೆ, ನಮ್ಮ ಸೇನಾ ಮುಖ್ಯಸ್ಥರು ಚೀನಿಯರು ನಮ್ಮ ಪ್ರದೇಶದೊಳಗೆ ಇದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯ. ಚೀನಾ ನಮ್ಮ ಪ್ರದೇಶದೊಳಗೆ ಇರುವುದಕ್ಕೆ ಮುಖ್ಯ ಕಾರಣ, ಚೀನಾ ಈ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ 'ಮೇಕ್ ಇನ್ ಇಂಡಿಯಾ' ವಿಫಲವಾಗಿರುವುದು ಎಂದರು.

"ಚೀನಾ ಈ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ ಭಾರತ ಹೆಚ್ಚು ಉತ್ಪಾದಿಸಲು ನಿರಾಕರಿಸುತ್ತಿರುವುದಾಗಿದೆ ಮತ್ತು ಭಾರತ ಉತ್ಪಾದನಾ ವಲಯದ ಕ್ರಾಂತಿಯನ್ನು ಮತ್ತೊಮ್ಮೆ ಚೀನಿಯರಿಗೆ ಬಿಟ್ಟುಕೊಡಲಿದೆ ಎಂದು ನನಗೆ ಚಿಂತೆಯಾಗಿದೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT