ವಿ. ಚಿ. ಚಂದ್ರಶೇಖರ್  
ದೇಶ

ತಮಿಳುನಾಡು: ಈರೋಡ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, DMK ಗೆಲುವು!

ಡಿಎಂಕೆಯ ವಿ.ಚಿ. ಚಂದ್ರಶೇಖರ್ ಅವರು ತಮ್ಮ ಸಮೀಪದ ಅಭ್ಯರ್ಥಿ ನಾಮ್ ತಮಿಝಾರ್ ಕಚ್ಚಿ (ಎನ್ ಟಿಕೆ) ಪಕ್ಷದ ಎಂ.ಕೆ. ಸೀತಾಲಕ್ಷ್ಮಿ ಅವರನ್ನು 91, 558 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಈರೋಡ್: ತಮಿಳುನಾಡಿನ ಈರೋಡ್(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಡಿಎಂಕೆಯ ವಿ.ಚಿ. ಚಂದ್ರಶೇಖರ್ ಅವರು ತಮ್ಮ ಸಮೀಪದ ಅಭ್ಯರ್ಥಿ ನಾಮ್ ತಮಿಝಾರ್ ಕಚ್ಚಿ (ಎನ್ ಟಿಕೆ) ಪಕ್ಷದ ಎಂ.ಕೆ. ಸೀತಾಲಕ್ಷ್ಮಿ ಅವರನ್ನು 91, 558 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಜಯ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಟಾಲಿನ್ ಪಕ್ಷಕ್ಕೆ ಹೊಸ ಹುರುಪು ತುಂಬಿದೆ.

ಕಣದಲ್ಲಿದ್ದ ಇತರ 44 ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಪಕ್ಷೇತರರರು. 6,109 ಮತದಾರರು ಈ ಚುನಾವಣೆಯಲ್ಲಿ 'ನೋಟಾ'' ಒತ್ತಿದ್ದಾರೆ. ಚಂದ್ರಶೇಖರ್ 1,15, 709 ಮತಗಳನ್ನು ಪಡೆದಿದ್ದರೆ ಸೀತಾಲಕ್ಷ್ಮಿ 24, 151 ಮತಗಳನ್ನು ಪಡೆದಿದ್ದಾರೆ.

ಡಿಎಂಕೆ ಶೇ. 75 ರಷ್ಟು ಮತಗಳನ್ನು ಪಡೆದಿದ್ದು, ಈ ಗೆಲುವುವನ್ನು ಸಿಎಂ ಸ್ಟಾಲಿನ್ ಅವರಿಗೆ ಅರ್ಪಿಸುವುದಾಗಿ ಚಂದ್ರಶೇಖರ್ ಹೇಳಿದ್ದಾರೆ. ಈ ಕ್ಷೇತ್ರದ ಶಾಸಕರಾಗಿದ್ದ ಇವಿಕೆಎಸ್ ಇಳಾಂಗೋವನ್ ಅವರು ಮೃತಪಟ್ಟಿದ್ದರು ಉಪಚುನಾವಣೆ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್