ಸಾಂದರ್ಭಿಕ ಚಿತ್ರ  
ದೇಶ

ಮುಂಬೈ: ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಗೆ ವಾಣಿಜ್ಯ ನಗರಿಯಲ್ಲಿ ಮೊದಲ ಸಾವು

ಮುಂಬೈನ ವಡಾಲಾ ಪ್ರದೇಶದ ನಿವಾಸಿ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸ್ವಲ್ಪ ಸಮಯದ ಹಿಂದೆ ಪುಣೆಗೆ ಭೇಟಿ ನೀಡಿದ್ದರು.

ಮುಂಬೈ: ವಾಣಿಜ್ಯ ನಗರಿ ಮುಂಬೈಯ ಆಸ್ಪತ್ರೆಯಲ್ಲಿ 53 ವರ್ಷದ ವ್ಯಕ್ತಿಯೊಬ್ಬರು ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ (GBS) ನಿಂದ ಮೃತಪಟ್ಟಿದ್ದಾರೆ. ನರ ಅಸ್ವಸ್ಥತೆಯಿಂದಾಗಿ ಉಂಟಾಗುವ ಕಾಯಿಲೆ ಇದಾಗಿದ್ದು ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 192 ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಶಂಕಿತ ಪ್ರಕರಣಗಳು ಪತ್ತೆಯಾಗಿವೆ.

ಮುಂಬೈನ ವಡಾಲಾ ಪ್ರದೇಶದ ನಿವಾಸಿ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸ್ವಲ್ಪ ಸಮಯದ ಹಿಂದೆ ಪುಣೆಗೆ ಭೇಟಿ ನೀಡಿದ್ದರು, ಅಲ್ಲಿ ರೋಗ ಏಕಾಏಕಿ ಉಲ್ಭಣಗೊಂಡಿತ್ತು. ಜನವರಿ 23 ರಂದು ಅವರನ್ನು ಇಲ್ಲಿನ ಮತ್ತೊಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವ್ಯಕ್ತಿ ಹಲವಾರು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದು ನಿನ್ನೆ ಮೃತಪಟ್ಟಿದ್ದಾರೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಆಯುಕ್ತರು ಮತ್ತು ಅದರ ರಾಜ್ಯ ನಿಯೋಜಿತ ಆಡಳಿತಾಧಿಕಾರಿ ಭೂಷಣ್ ಗಗ್ರಾನಿ ಪಿಟಿಐ ಸುದ್ದಿಸಂಸ್ಥೆಗೆ ಇದನ್ನು ದೃಢಪಡಿಸಿದ್ದಾರೆ. ಇದು ಜಿಬಿಎಸ್ ಕಾರಣದಿಂದಾಗಿ ಮಹಾನಗರದಲ್ಲಿ ಸಂಭವಿಸಿದ ಮೊದಲ ಸಾವಿನ ಪ್ರಕರಣವಾಗಿದೆ.

ಜಿಬಿಎಸ್, ಒಂದು ಅಪರೂಪದ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುತ್ತದೆ, ಇದರ ಪರಿಣಾಮವಾಗಿ ಸ್ನಾಯು ದೌರ್ಬಲ್ಯ, ಕಾಲುಗಳು ಮತ್ತು ತೋಳುಗಳಲ್ಲಿ ಸಂವೇದನೆ ಕಳೆದುಕೊಂಡು ನುಂಗಲು ಮತ್ತು ಉಸಿರಾಟಕ್ಕೆ ಕಷ್ಟವಾಗುತ್ತದೆ.

ನೆರೆಯ ಪಾಲ್ಘರ್ ಜಿಲ್ಲೆಯ 16 ವರ್ಷದ ಬಾಲಕಿ ಪ್ರಸ್ತುತ ನಾಯರ್ ಆಸ್ಪತ್ರೆಯಲ್ಲಿ ಜಿಬಿಎಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಬಿಎಂಸಿ ತಿಳಿಸಿದೆ. ಮುಂಬೈನ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಜಿಬಿಎಸ್ ರೋಗಿಗಳ ಚಿಕಿತ್ಸೆಗಾಗಿ ಸಿದ್ಧವಾಗಿವೆ. ಅಗತ್ಯ ಔಷಧಗಳು, ಉಪಕರಣಗಳು ನಗರದಲ್ಲಿ ಲಭ್ಯವಿತ್ತು ಎಂದು ಅದು ಹೇಳಿದೆ.

ಅಂಧೇರಿ (ಪೂರ್ವ) ನಿವಾಸಿ 64 ವರ್ಷದ ಮಹಿಳೆಗೆ ನರ ಅಸ್ವಸ್ಥತೆ ಇರುವುದು ಪತ್ತೆಯಾಗಿ ಫೆ7 ರಂದು ಮುಂಬೈಯಲ್ಲಿ ಮೊದಲ ಜಿಬಿಎಸ್ ಪ್ರಕರಣವನ್ನು ವರದಿಯಾಗಿತ್ತು. ಪುಣೆ ಪ್ರದೇಶವು ಇಲ್ಲಿಯವರೆಗೆ ಶಂಕೆಯಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಪುಣೆ ಪ್ರದೇಶದಲ್ಲಿ ಶಂಕಿತ ಮತ್ತು ದೃಢಪಡಿಸಿದ ಜಿಬಿಎಸ್ ಪ್ರಕರಣಗಳ ಸಂಖ್ಯೆ 197 ಕ್ಕೆ ತಲುಪಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT