ವಿಶಾಖಪಟ್ಟಣಂ: ಪತಿಯ ಲೈಂಗಿಕ ವಿಕೃತಿಗಳನ್ನು ಸಹಿಸಲಾಗದೆ ವಿಶಾಖಪಟ್ಟಣಂನಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗೋಪಾಲಪಟ್ಟಣದ ನಂದಮೂರಿ ನಗರದ ನಿವಾಸಿ 24 ವರ್ಷದ ಚಿ.ವಸಂತ ಕಳೆದ ವರ್ಷ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಬಾಬು ಅವರನ್ನು ವಿವಾಹವಾಗಿದ್ದರು. ಅಂದಿನಿಂದ Porn ವಿಡಿಯೋಗಳನ್ನು ನೋಡುತ್ತಿದ್ದ ನಾಗೇಂದ್ರ ಬಾಬು ಅದನ್ನು ಪತ್ನಿಗೂ ತೋರಿಸಿ ಅದೇ ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ.
ಪೊಲೀಸರ ಪ್ರಕಾರ, ನಾಗೇಂದ್ರ ಬಾಬು ಕಳೆದ ಕೆಲವು ತಿಂಗಳುಗಳಿಂದ ಅಶ್ಲೀಲ ತಾಣಗಳನ್ನು ನೋಡುವುದಕ್ಕೆ ಒಗ್ಗಿಕೊಂಡಿದ್ದನು. ಅಲ್ಲದೆ ತನ್ನ ಪತ್ನಿಯೊಂದಿಗೆ ಇದೇ ರೀತಿಯ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಗಂಡನ ವಿಕೃತಿಯನ್ನು ತಣಿಸಲು ಸಾಧ್ಯವಾಗದೆ ವಸಂತ ತನ್ನ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ವಸಂತ ಅವರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ನಾಗೇಂದ್ರ ಬಾಬು ಅವರನ್ನು ವಶಕ್ಕೆ ತೆಗೆದುಕೊಂಡು ಅವರ ಮೊಬೈಲ್ ಫೋನ್ ಮತ್ತು ಟ್ಯಾಬ್ ವಶಪಡಿಸಿಕೊಂಡಿದ್ದಾರೆ.