ದೇಶ

ನನ್ನ ತಾರಾ ಎಲ್ಲಿ?: ದೆಹಲಿ ಕಾಲ್ತುಳಿತ, ಹೆಣಗಳ ರಾಶಿ; ಪತ್ನಿಯನ್ನು ಹುಡುಕುತ್ತಾ ರೈಲು ನಿಲ್ದಾಣದಲ್ಲಿ ಅಲೆಯುತ್ತಿರುವ ಪತಿ

ಕುಂಭ ಮೇಳಕ್ಕೆ ಹೋಗುವ ವಿಶೇಷ ರೈಲು ತಡವಾಗಿ ಬಂದಿದ್ದರಿಂದ ಜನರು ತಾ ಮುಂದು, ನಾ ಮುಂದು ಎಂದು ರೈಲನ್ನು ಹತ್ತಲು ಮುಂದಾದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಹಿಳೆಯರು, ನಾಲ್ವರು ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ.

ನವದೆಹಲಿ: ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಚಿತ್ರಗಳು ಮತ್ತು ವೀಡಿಯೊಗಳನ್ನು ನೋಡಿದ ಜನರ ಹೃದಯಗಳು ಕರಗುತ್ತಿವೆ. ಇದರ ಮಧ್ಯೆ ತಮ್ಮ ಸಂಬಂಧಿಗಳನ್ನು ಹುಡುಕುತ್ತಿರುವ ಮನಕಲಕುವ ಘಟನೆಗಳು ನಡೆಯುತ್ತಿವೆ.

ಗುಪ್ತೇಶ್ವರ ಯಾದವ್ ಎಂಬುವರು ತಮ್ಮ ಮೊಬೈಲ್ ನಲ್ಲಿ ಪತ್ನಿಯ ಫೋಟೋವನ್ನು ಜನರಿಗೆ ತೋರಿಸುತ್ತಾ, ಈಕೆಯನ್ನು ನೋಡಿದ್ದೀರಾ ಎಂದು ರೈಲ್ವೆ ನಿಲ್ದಾಣದಲ್ಲಿ ಅಲೆಯುತ್ತಿದ್ದಾರೆ. 50 ವರ್ಷದ ತಾರಾ ದೇವಿ ಅವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಹೋಗುವ ಸಲುವಾಗಿ ದೆಹಲಿಯ ರೈಲು ನಿಲ್ದಾಣಕ್ಕೆ ಬಂದಿದ್ದರು.

ಕುಂಭ ಮೇಳಕ್ಕೆ ಹೋಗುವ ವಿಶೇಷ ರೈಲು ತಡವಾಗಿ ಬಂದಿದ್ದರಿಂದ ಜನರು ತಾ ಮುಂದು, ನಾ ಮುಂದು ಎಂದು ರೈಲನ್ನು ಹತ್ತಲು ಮುಂದಾದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಹಿಳೆಯರು, ನಾಲ್ವರು ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಎಂತವರ ಮನಸ್ಸನ್ನು ಕರಗಿಸುತ್ತದೆ. ಜನಸಂದಣಿಯಲ್ಲಿ ನಾನು ಪತ್ನಿಯನ್ನು ಕಳೆದುಕೊಂಡೆ 52 ವರ್ಷದ ಗುಪ್ತೇಶ್ವರ್ ಯಾದವ್ ನವದೆಹಲಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 14ರಲ್ಲಿ ನಿಂತು ಕಣ್ಣೀರಿಡುತ್ತಿದ್ದಾರೆ.

ನಾನು ಅವಳಿಗಾಗಿ ಕಾಯುತ್ತಿದ್ದೆನೆ ಎಂದು ಗುಪ್ತೇಶ್ವರ್ ಯಾದವ್ ಹೇಳಿದ್ದಾರೆ. ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ನಲ್ಲಿ ಕುಟುಂಬವು ಕುಂಭಕ್ಕೆ ಯಾತ್ರೆ ಮಾಡಲು ಹೊರಟಿದ್ದನ್ನು ಕಾಲ್ತುಳಿತವು ವಿನಾಶದ ರಾತ್ರಿಯನ್ನಾಗಿ ಪರಿವರ್ತಿಸಿದೆ. ರೈಲು ಬಂದ ತಕ್ಷಣ ಜನರು ರೈಲನ್ನು ಹತ್ತಲು ಮುಗಿಬಿದ್ದರು. ಈ ವೇಳೆ ಒಬ್ಬಂಟಿಯಾಗಿ ಚಲಿಸುವುದು ಅಸಾಧ್ಯವಾಗಿತ್ತು. ಜನರು ನನ್ನನ್ನು ತಳ್ಳಿಕೊಂಡು ಹೋಗುತ್ತಿದ್ದರು ಎಂದು ಗುಪ್ತೇಶ್ವರ್ ಶನಿವಾರ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

ಜನಸಂದಣಿ ಹೆಚ್ಚಾಗುತ್ತಿದ್ದಂತೆ, ನನಗೆ ನನ್ನ ಹೆಂಡತಿ ಕಾಣಲಿಲ್ಲ. ಹಿಂತಿರುಗಿ ತನ್ನ ಹೆಂಡತಿಯನ್ನು ಹುಡುಕುತ್ತಿದ್ದೆ. ಆದರೆ ನನ್ನ ಬೆನ್ನ ಹಿಂದೆ ಕಾಲ್ತುಳಿತ ಸಂಭವಿಸಿದ್ದು ಅಲ್ಲಿ ದೇಹಗಳ ರಾಶಿ ಕಂಡುಬಂತು. ಕಾಲ್ತುಳಿತದ ವೇಳೆ ಎಲ್ಲರೂ ಬದುಕುಳಿಯಲು ಪ್ರಯತ್ನಿಸುತ್ತಿದ್ದರು. ಆದರೆ ಜಾಗವಿಲ್ಲ, ಗಾಳಿ ಇಲ್ಲ, ಹಿಡಿದಿಡಲು ಏನೂ ಇರಲಿಲ್ಲ ಎಂದು ಗುಪ್ತೇಶ್ವರ್ ಹೇಳಿದ್ದಾರೆ. ಜನಸಂದಣಿ ತನ್ನನ್ನು ಪಕ್ಕಕ್ಕೆ ತಳ್ಳಲ್ಪಟ್ಟಂತೆ ಭಾಸವಾಯಿತು. ವೇದಿಕೆಯ ಕಡೆಗೆ ಎಡವಿ ಬಿದ್ದೆ ಆ ನಂತರ ನನ್ನ ಪತ್ನಿ ತಾರಾ ಕಾಣಲಿಲ್ಲ ಎಂದು ಹೇಳಿದರು.

ಗುಪ್ತೇಶ್ವರ್ ಮತ್ತು ಅವರ ಸಹೋದರ ಚಿತೇಶ್ವರ್ ರಾತ್ರಿಯಿಡೀ ಆಸ್ಪತ್ರೆಗಳನ್ನು ಸುತ್ತುತ್ತಾ ಶವಗಳ ರಾಶಿಗಳಲ್ಲಿ ಹುಡುತ್ತಿದ್ದೇನೆ. ಆದರೆ ಎಲ್ಲಿಯೂ ಕಾಣಸಿಗಲಿಲ್ಲ. ತಾರಾ ಬದುಕುಳಿದಿದ್ದಾಳೆ ಎಂಬ ಭರವಸೆಯಲ್ಲಿ ಓಡಾಡುತ್ತಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT