ಸಾಂಕೇತಿಕ ಚಿತ್ರ 
ದೇಶ

ಕೇಂದ್ರದಿಂದ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯ ಕರಡು ಬಿಡುಗಡೆ

ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯ ಈ ಕರಡಿನಲ್ಲಿ 2023ರ ಅಡಿಯಲ್ಲಿ ಅನುಮೋದಿಸಲಾದ ದಂಡಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ನವದೆಹಲಿ: ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಕಾಯ್ದೆಯ ಬಹುನಿರೀಕ್ಷಿತ ಕರಡನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಆದರೆ ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕುರಿತು ಯಾವುದೇ ಉಲ್ಲೇಖವಿಲ್ಲ.

ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಈ ಕರಡು ಬಿಡುಗಡೆ ಮಾಡಲಾಗಿದ್ದು, ಶಿಫಾರಸುಗಳನ್ನು ಪರಿಗಣಿಸಿ ಫೆಬ್ರವರಿ 18ರ ನಂತರ ತಿದ್ದುಪಡಿ ಕಾಯ್ದೆ ಅಂತಿಮ ಸ್ವರೂಪ ಪಡೆಯಲಿದೆ.

"ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್, 2023(22 ರ 2023)ರ ಉಪ ನಿಬಂಧನೆ(1) ಮತ್ತು (2) ಅನ್ವಯ ಕೇಂದ್ರ ಸರ್ಕಾರ ತನ್ನ ಹಕ್ಕುಗಳನ್ನು ಚಲಾಯಿಸಿ ಕರಡನ್ನು ಪರಿಚಯಿಸಿದೆ. 2023ರಲ್ಲಿ ಹಾಗೂ ನಂತರದಲ್ಲಿ ಈ ಕಾಯ್ದೆ ವ್ಯಾಪ್ತಿಗೆ ಒಳಪಡಬಹುದಾದ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಇದನ್ನು ಪರಿಚಯಿಸಲಾಗುತ್ತಿದೆ" ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"... ಹೇಳಿದ ಕರಡು ನಿಯಮಗಳನ್ನು ಫೆಬ್ರವರಿ 18, 2025 ರ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಈ ಮೂಲಕ ಸೂಚನೆ ನೀಡಲಾಗಿದೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯ ಈ ಕರಡಿನಲ್ಲಿ 2023ರ ಅಡಿಯಲ್ಲಿ ಅನುಮೋದಿಸಲಾದ ದಂಡಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ ಮೂಲ ಕಾಯ್ದೆಯಲ್ಲಿ ವೈಯಕ್ತಿಕ ಮಾಹಿತಿ ಗೌಪ್ಯತೆ ಮತ್ತು ಸುರಕ್ಷಿತವಾಗಿಡುವ ಹೊಣೆ ಹೊತ್ತವರು ಅದನ್ನು ಸರಿಯಾಗಿ ನಿಭಾಯಿಸದಿದ್ದರೆ 250 ಕೋಟಿ ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ