ಜನಸಂದಣಿಯೆಡೆಗೆ ನುಗ್ಗಿದ ಕಾರು online desk
ದೇಶ

ಜೈಪುರದಲ್ಲಿ New Orleans ಮಾದರಿಯ ಕೃತ್ಯ: ಧಾರ್ಮಿಕ ಮೆರವಣಿಗೆಯೆಡೆಗೆ ನುಗ್ಗಿದ SUV ಕಾರು!

ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಪ್ರದೇಶಕ್ಕೆ ಎಸ್‌ಯುವಿ ನುಗ್ಗಿ ಬಂದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯಿಂದ ಕೋಪಗೊಂಡ ಜನರು ವಾಹನವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಅಮೇರಿಕಾದ New Orleans ಉಗ್ರ ಕೃತ್ಯದ ಮಾದರಿಯ ಘಟನೆ ನಡೆದಿದೆ.

ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಪ್ರದೇಶಕ್ಕೆ ಎಸ್‌ಯುವಿ ನುಗ್ಗಿ ಬಂದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯಿಂದ ಕೋಪಗೊಂಡ ಜನರು ವಾಹನವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಪಾರ್ಕ್ ಪ್ರದೇಶದ ಪಂಚವಟಿ ಸರ್ಕಲ್ ಬಳಿ ಗುರುವಾರ ರಾತ್ರಿ ಸಿಖ್ ಸಮುದಾಯದ ಸದಸ್ಯರು ಕೀರ್ತನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದ್ದು ಅಪ್ರಾಪ್ತ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಎಂಎಲ್‌ಎ ಸ್ಟಿಕ್ಕರ್ ಅಂಟಿಸಲಾಗಿದೆ, ಅದನ್ನು ಪರಿಶೀಲಿಸಲಾಗುತ್ತಿದೆ.

ಅತಿ ವೇಗದ ಚಾಲನೆಗಾಗಿ ಆರು ಚಲನ್‌ಗಳನ್ನು ನೀಡಲಾಗಿದೆ. ಅಲ್ಲಿ ನಿಂತಿದ್ದ ಪೊಲೀಸರು ಎಸ್‌ಯುವಿಯನ್ನು ನಿಲ್ಲಿಸುವಂತೆ ಸೂಚಿಸಿದರು ಆದರೆ ಚಾಲಕನು ವೇಗವನ್ನು ಹೆಚ್ಚಿಸಿದ ಎಂದು ಎಸಿಪಿ ಲಕ್ಷ್ಮಿ ಸುತಾರ್ ಹೇಳಿದ್ದಾರೆ. ಜನರಿಗೆ ಡಿಕ್ಕಿ ಹೊಡೆದರೂ ಚಾಲಕ ಕಾರನ್ನು ನಿಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜನಸಂದಣಿಯಿಂದ ಸುಮಾರು 100 ಮೀಟರ್ ಹಿಂದೆ ಕಾರನ್ನು ನಿಲ್ಲಿಸಲಾಯಿತು. ನಾಲ್ವರು ಹುಡುಗರು ಇಳಿದು ಓಡಲು ಪ್ರಾರಂಭಿಸಿದರು, ಆದರೆ ಜನರು ಚಾಲಕನನ್ನು ಹಿಡಿದರು. ಕಾರಿನಲ್ಲಿದ್ದ ಇತರ ಮೂವರು ಯುವಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಲ್ಲಿ ಓರ್ವ ಮಹಿಳೆ ಮತ್ತು ಬಾಲಕಿ ಸೇರಿದ್ದಾರೆ. ಈ ಸಂಬಂಧ ಆದರ್ಶ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT