ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ  online desk
ದೇಶ

Sheikh Hasina ವಿರುದ್ಧ ಬಾಂಗ್ಲಾದೇಶ 2ನೇ ಬಂಧನ ವಾರೆಂಟ್; ಈ ಬಾರಿ ಗಡಿಪಾರಾಗ್ತಾರಾ ಮಾಜಿ ಪ್ರಧಾನಿ?

ಈ ಹೊಸ ಬಂಧನ ವಾರಂಟ್ ನ್ನು ಜನವರಿ 6 ರಂದು ಹೊರಡಿಸಲಾಗಿದೆ. ಶೇಖ್ ಹಸೀನಾ ಪದಚ್ಯುತಿಯ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದು, ಅವರ ವಿರುದ್ಧ ಹೊರಡಿಸಲಾದ ಎರಡನೇ ಬಂಧನ ವಾರಂಟ್ ಇದಾಗಿದೆ. ಬಾಂಗ್ಲಾ ನ್ಯಾಯಮಂಡಳಿಯು ಹಸೀನಾ ವಿರುದ್ಧ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ.

ಢಾಕಾ: ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ (ICT) ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಮಾಜಿ ಮಿಲಿಟರಿ ಜನರಲ್‌ಗಳು ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರು ಸೇರಿದಂತೆ 11 ಇತರರ ವಿರುದ್ಧ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಎರಡನೇ ಬಂಧನ ವಾರಂಟ್ ಹೊರಡಿಸಿದೆ.

ಈ ಹೊಸ ಬಂಧನ ವಾರಂಟ್ ನ್ನು ಜನವರಿ 6 ರಂದು ಹೊರಡಿಸಲಾಗಿದೆ. ಶೇಖ್ ಹಸೀನಾ ಪದಚ್ಯುತಿಯ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದು, ಅವರ ವಿರುದ್ಧ ಹೊರಡಿಸಲಾದ ಎರಡನೇ ಬಂಧನ ವಾರಂಟ್ ಇದಾಗಿದೆ. ಬಾಂಗ್ಲಾ ನ್ಯಾಯಮಂಡಳಿಯು ಹಸೀನಾ ವಿರುದ್ಧ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ.

ನೂರಾರು ಬಲವಂತದ ನಾಪತ್ತೆ ಪ್ರಕರಣದ ಸಂಬಂಧ ಹಸೀನಾ ಸೇರಿದಂತೆ 12 ವ್ಯಕ್ತಿಗಳನ್ನು ಬಂಧಿಸಿ ಫೆಬ್ರವರಿ 12 ರಂದು ನ್ಯಾಯಾಧಿಕರಣದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯದ ಆದೇಶ ಪೊಲೀಸ್ ಮಹಾನಿರೀಕ್ಷಕರಿಗೆ ನಿರ್ದೇಶಿಸುತ್ತದೆ. ಪ್ರಕರಣದಲ್ಲಿ ಹೆಸರಿಸಲಾದವರಲ್ಲಿ ಹಸೀನಾ ಅವರ ಮಾಜಿ ರಕ್ಷಣಾ ಸಲಹೆಗಾರ, ಮೇಜರ್ ಜನರಲ್ (ನಿವೃತ್ತ) ತಾರಿಕ್ ಅಹ್ಮದ್ ಸಿದ್ದಿಕ್ ಮತ್ತು ಮಾಜಿ ಐಜಿಪಿ ಬೆನಜೀರ್ ಅಹ್ಮದ್ ಸೇರಿದ್ದಾರೆ. ಪ್ರಸ್ತುತ ಸಿದ್ದಿಕ್ ಬಂಧನದಲ್ಲಿದ್ದು, ಅಹ್ಮದ್ ಪರಾರಿಯಾಗಿದ್ದಾರೆ ಎಂದು ನಂಬಲಾಗಿದೆ.

ಕಾನೂನು ಏನು ಹೇಳುತ್ತದೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಎರಡನೇ ಬಂಧನ ವಾರಂಟ್ ಹೊರಡಿಸಿದ ಕುರಿತು ಎಎನ್‌ಐ ಜೊತೆಗೆ ಮಾತನಾಡಿರುವ ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ವಿಕಾಸ್ ಸಿಂಗ್, “ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಬಾಂಗ್ಲಾದೇಶದಲ್ಲಿ ದೇಶೀಯ ಕಾನೂನಿನ ಆಧಾರದ ಮೇಲೆ ಸ್ಥಾಪಿಸಲಾದ ನ್ಯಾಯಮಂಡಳಿಯಾಗಿದೆ. ನ್ಯಾಯಾಲಯವು ಕೆಲವು ಅಂತರರಾಷ್ಟ್ರೀಯ ಅಪರಾಧಗಳನ್ನು ಗುರುತಿಸುತ್ತದೆ ಮತ್ತು ಈ ಬಂಧನ ವಾರಂಟ್ ಬಾಂಗ್ಲಾದೇಶದ ದೇಶೀಯ ನ್ಯಾಯಾಲಯ ಹೊರಡಿಸಿರುವ ಬಂಧನ ವಾರಂಟ್ ಆಗಿದೆ. ಈ ವಾರೆಂಟ್ ಜಾರಿಯಾಗಬೇಕಾದರೆ ಆಕೆ ಭಾರತದಿಂದ ಹಸ್ತಾಂತರ ಆಗಬೇಕು. ಭಾರತದಿಂದ ಹಸ್ತಾಂತರಿಸಿದ ನಂತರವೇ ಈ ವಾರಂಟ್ ನ್ನು ಜಾರಿಗೆ ತರಬಹುದು ಎಂದು ಹೇಳಿದ್ದಾರೆ.

ಹಸ್ತಾಂತರಕ್ಕಾಗಿ, ನಿರ್ದಿಷ್ಟ ಅಪರಾಧಿಗೆ ಹಲವಾರು ರಕ್ಷಣೆಗಳಿವೆ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ. "ಅವುಗಳಲ್ಲಿ ಒಂದು ರಾಜಕೀಯ ಅಪರಾಧಕ್ಕಾಗಿ, ನಿಮ್ಮನ್ನು ಹಸ್ತಾಂತರಿಸಲಾಗುವುದಿಲ್ಲ. ಇನ್ನೊಂದು ರಕ್ಷಣೆಯೆಂದರೆ, ಹಸ್ತಾಂತರವನ್ನು ಬಯಸುವ ದೇಶದಲ್ಲಿನ ಶಿಕ್ಷೆಯು ಭಾರತದಲ್ಲಿ ಇದೇ ರೀತಿಯ ಅಪರಾಧಕ್ಕೆ ಒದಗಿಸುವ ಶಿಕ್ಷೆಗಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರಬಾರದು" ಎಂದು ಅವರು ಹೇಳಿದರು.

"ಆದ್ದರಿಂದ, ಈ ಎಲ್ಲಾ ರಕ್ಷಣಾತ್ಮಕ ಕ್ರಮಗಳು ಮತ್ತು ಅವರಲ್ಲಿರುವ ಎಲ್ಲಾ ಇತರ ಸುರಕ್ಷತೆಗಳನ್ನು ಪರಿಗಣಿಸಿ, ಬಾಂಗ್ಲಾದೇಶ ಹಸ್ತಾಂತರವನ್ನು ಜಾರಿಗೆ ತರಲು ಭಾರತೀಯ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಹಸ್ತಾಂತರವನ್ನು ನೀಡಬಹುದೇ ಎಂಬ ಅನುಮಾನವಿದೆ, ”ಎಂದು ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT