ದೇಗುಲ ಕಾರ್ಯಕ್ರಮದಲ್ಲಿ ಆನೆ ದಾಳಿ 
ದೇಶ

ಕೇರಳ ದೇಗುಲ ಕಾರ್ಯಕ್ರಮ ವೇಳೆ ಆನೆ ದಾಳಿ: ಸೊಂಡಿಲಿನಿಂದ ವ್ಯಕ್ತಿ ಬಿಸಾಡಿ ಆಕ್ರೋಶ; 20ಕ್ಕೂ ಹೆಚ್ಚು ಮಂದಿಗೆ ಗಾಯ; Video viral

ಬಿಪಿ ಅಂಗಡಿಯಲ್ಲಿರುವ ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ಅಥವಾ ನೇರ್ಚಾ ಕಾರ್ಯಕ್ರಮ ನಡೆಯುತ್ತಿತ್ತು.

ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದರ ಧಾರ್ಮಿಕ ಉತ್ಸವದ ವೇಳೆ ಆನೆಯೊಂದು ದಾಳಿ ಮಾಡಿದ ಪರಿಣಾಮ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.

ಕೇರಳದ ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ಈ ಘಟನೆ ನಡೆದಿದ್ದು. ದೇಗುಲ ಉತ್ಸವಕ್ಕಾಗಿ ಸಿಂಗಾರಗೊಂಡು ನಿಂತಿದ್ದ ಆನೆಯೊಂದು ಏಕಾಏಕಿ ಆಕ್ರೋಶಗೊಂಡು ತನ್ನ ಮುಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದೆ.

ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿಕೊಂಡ ಆನೆ ಏಕಾಏಕಿ ಬಟ್ಟೆ ಒಗೆಯುವಂತೆ ನೆಲಕ್ಕೆ ಒಗೆದಿದೆ. ಬಳಿಕ ಅಲ್ಲಿ ನೆರೆದಿದ್ದ ಜನರತ್ತ ಆನೆ ನುಗ್ಗಿದ್ದು ಈ ವೇಳೆ ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇಲ್ಲಿನ ಬಿಪಿ ಅಂಗಡಿಯಲ್ಲಿರುವ ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ಅಥವಾ ನೇರ್ಚಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದ ಆನೆಗಳನ್ನು ಕರೆಸಲಾಗಿತ್ತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಆದರೆ ಕಾರ್ಯಕ್ರಮ ಮುಗಿಯುವ ಕೆಲವೇ ಗಂಟೆಗಳ ಮೊದಲು ಪಕ್ಕೋತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆಯು ದಿಢೀರ್ ಆಕ್ರೋಶಗೊಂಡು ದಾಳಿ ನಡೆಸಿದೆ. ಈ ಪೈಕಿ ಪಾಕತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಸೊಂಡಿಲಿನಿಂದ ಎಳೆದು ಬಿಸಾಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಗಾಬರಿಗೊಂಡ ಜನರು ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

'ನನ್ನನ್ನು ಬಂಡೆ ಎನ್ನುತ್ತಾರೆ- ನೀವು ಯಾವ ರೀತಿ ಬೇಕಾದರೂ ಬಳಸಿಕೊಳ್ಳಿ: ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥನೆ'

ಬೆಂಗಳೂರು ಗ್ರಾಮಾಂತರ: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು, ಜಿಲ್ಲೆಯಾದ್ಯಂತ ಪಟಾಕಿ ಬಳಕೆ ನಿಷೇಧ!

SCROLL FOR NEXT