ತಿರುಪತಿ ತಿರುಮಲ ದೇವಸ್ಥಾನ  
ದೇಶ

ತಿರುಪತಿ ಕಾಲ್ತುಳಿತ ಘಟನೆ: ವೈಕುಂಠ ಏಕಾದಶಿಗೆ ಬೃಹತ್ ಜನಸಂದಣಿ ಏಕೆ?

ಐತಿಹಾಸಿಕವಾಗಿ, ಎರಡು ಪ್ರಮುಖ ಕಾರ್ಯಕ್ರಮಗಳು - ಒಂಬತ್ತು ದಿನಗಳ ಉತ್ಸವವಾದ ಬ್ರಹ್ಮೋತ್ಸವ ಮತ್ತು ಆರಂಭದಲ್ಲಿ ಒಂದೇ ದಿನ ಆಚರಿಸಲಾಗುವ ವೈಕುಂಠ ಏಕಾದಶಿ ತಿರುಪತಿಯಲ್ಲಿ ಭಕ್ತರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ.

ತಿರುಮಲ: ತಿರುಪತಿ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಉತ್ತರ ದ್ವಾರ ಅಥವಾ ವೈಕುಂಠ ದ್ವಾರ ಮೂಲಕ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಮಯದಲ್ಲಿ ಕಳೆದ ರಾತ್ರಿ ಉಂಟಾದ ಕಾಲ್ತುಳಿತಕ್ಕೆ ಕನಿಷ್ಠ ಆರು ಜನರು ಮೃತಪಟ್ಟು ಡಜನ್ ಗಟ್ಟಲೆ ಮಂದಿ ಗಾಯಗೊಂಡಿದ್ದಾರೆ.

ವೈಕುಂಠ ಏಕಾದಶಿ ದಿನಗಳಲ್ಲಿ ಪವಿತ್ರ ತಿರುಮಲಕ್ಕೆ ಇಷ್ಟೊಂದು ಭಕ್ತರು ಏಕೆ ಸೇರುತ್ತಾರೆ ಎಂಬುದನ್ನು ನೋಡಿದರೆ ಪವಿತ್ರ ತಿರುಮಲ ದೇವಸ್ಥಾನಕ್ಕೆ ವೈಕುಂಠ ಏಕಾದಶಿಯ ಸಮಯದಲ್ಲಿ ಭಕ್ತಾದಿಗಳ ದಂಡೇ ಹರಿದುಬರುತ್ತದೆ. ಸ್ಥಳೀಯರು ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತರು ಶುಭ ಆಚರಣೆಗಳಲ್ಲಿ ಭಾಗವಹಿಸಲು ಬರುತ್ತಾರೆ.

ಐತಿಹಾಸಿಕವಾಗಿ, ಎರಡು ಪ್ರಮುಖ ಕಾರ್ಯಕ್ರಮಗಳು - ಒಂಬತ್ತು ದಿನಗಳ ಉತ್ಸವವಾದ ಬ್ರಹ್ಮೋತ್ಸವ ಮತ್ತು ಆರಂಭದಲ್ಲಿ ಒಂದೇ ದಿನ ಆಚರಿಸಲಾಗುವ ವೈಕುಂಠ ಏಕಾದಶಿ ತಿರುಪತಿಯಲ್ಲಿ ಭಕ್ತರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ. 1980 ಮತ್ತು 1990 ರ ದಶಕಗಳಲ್ಲಿ, ದೇವಾಲಯದ ಅಧಿಕಾರಿಗಳು ವೈಕುಂಠ ದ್ವಾದಶಿಯನ್ನು ಹೆಚ್ಚುವರಿ ಪವಿತ್ರ ದಿನವೆಂದು ಗುರುತಿಸುವ ಮೂಲಕ ಹಬ್ಬವನ್ನಾಗಿ ಆಚರಿಸಲು ಆರಂಭಿಸಿದರು.

ಮಕರ ಸಂಕ್ರಾಂತಿ ಹಬ್ಬದ ಹಿಂದಿನ ಎರಡೂ ದಿನಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತಿರುಮಲದಲ್ಲಿ ವೆಂಕಟೇಶ್ವರನೆಂದು ಪೂಜಿಸಲ್ಪಡುವ ವಿಷ್ಣು, ಈ ಅವಧಿಯಲ್ಲಿ ತನ್ನ ದರ್ಶನ ಪಡೆದವರಿಗೆ ಸ್ವರ್ಗದ ಆಶೀರ್ವಾದ ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಯುಗಾಂತರಗಳಿಂದ, ಭಕ್ತರು ವೈಕುಂಠ ಏಕಾದಶಿಗೆ 41 ದಿನಗಳ ಮುಂಚಿತವಾಗಿ ಗೋವಿಂದ ಮಾಲೆಯನ್ನು, ಹಳದಿ ಬಟ್ಟೆಗಳನ್ನು ಧರಿಸಿ, ಭಕ್ತಿಯ ಸಂಕೇತವಾಗಿ ಬರಿಗಾಲಿನಲ್ಲಿ ನಡೆಯುವ ಮೂಲಕ ಸಿದ್ಧತೆ ನಡೆಸುತ್ತಿದ್ದರು. ಅನೇಕ ಯಾತ್ರಿಕರು ದೂರದ ಸ್ಥಳಗಳಿಂದ ಕಾಲ್ನಡಿಗೆಯಲ್ಲಿ ಹೋಗುತ್ತಾರೆ, ಕೆಲವೊಮ್ಮೆ ನೂರಾರು ಕಿಲೋಮೀಟರ್ ದೂರದಿಂದ, ಆಗಾಗ್ಗೆ ಆಚರಣೆಗಳಿಗೆ ತಿರುಮಲವನ್ನು ತಲುಪಲು ಒಂದು ವಾರ ಅಥವಾ ಹತ್ತು ದಿನಗಳ ಮೊದಲು ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಾರೆ.

ಭಕ್ತರ ಆಗಮನ ಪರಿಗಣಿಸಿ, ದೇಶಾದ್ಯಂತ ಹಿಂದೂ ಧಾರ್ಮಿಕ ಮುಖ್ಯಸ್ಥರೊಂದಿಗೆ ಸಮಾಲೋಚಿಸಿದ ನಂತರ, ತಿರುಮಲ ಆಡಳಿತವು 2021-2022 ರಲ್ಲಿ ವೈಕುಂಠ ಏಕಾದಶಿ ಮತ್ತು ದ್ವಾದಶಿಯನ್ನು ಹತ್ತು ದಿನಗಳ ಕಾರ್ಯಕ್ರಮಕ್ಕೆ ವಿಸ್ತರಿಸಲು ನಿರ್ಧರಿಸಿತು.

ಈ ನಿರ್ಧಾರದ ನಂತರ, ವೆಂಕಟೇಶ್ವರನ ಗರ್ಭಗುಡಿಯ ಸುತ್ತಲಿನ ಉತ್ತರ ದ್ವಾರವನ್ನು ಹತ್ತು ದಿನಗಳವರೆಗೆ ತೆರೆದಿಡಲಾಗುತ್ತದೆ, ಭಕ್ತರು ಉತ್ತರ ದ್ವಾರದ ಮೂಲಕ ಪ್ರವೇಶಿಸಲು ಮತ್ತು ಗರ್ಭಗುಡಿಯ ಸುತ್ತಲೂ ಪರಿಕ್ರಮ ಮಾಡಲು ಅವಕಾಶ ನೀಡುತ್ತದೆ. ಬೃಹತ್ ಜನಸಂದಣಿಯನ್ನು ನಿರ್ವಹಿಸುವುದು ಮತ್ತು ಎಲ್ಲಾ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಗುರಿಯನ್ನು ಹೊಂದಿದೆ. ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಟಿಟಿಡಿ ವೈಕುಂಠ ಏಕಾದಶಿ ಮತ್ತು ದ್ವಾದಶಿಯನ್ನು ಹತ್ತು ದಿನಗಳಿಗೆ ವಿಸ್ತರಿಸಿತು.

ಪುರಾಣಗಳು ಏನು ಹೇಳುತ್ತವೆ?

ಪುರಾಣಗಳ ಪ್ರಕಾರ, ವಿಷ್ಣು ತನ್ನ ಶಿಷ್ಯರೊಂದಿಗೆ ವೈಕುಂಠದಲ್ಲಿ ಸಭೆ ನಡೆಸುತ್ತಾನೆ ಮತ್ತು ಭಕ್ತರಿಗೆ ಸಹ ಅವನ ಸಭೆಯೊಳಗೆ ಅವಕಾಶ ನೀಡಲಾಗುತ್ತದೆ. ಭೂಮಿಯ ಮೇಲೆ ಸಾಂಕೇತಿಕವಾಗಿ ಪ್ರತಿಫಲಿಸುವ ಈ ಆಕಾಶ ಸಭೆಯು ಹತ್ತು ದಿನಗಳವರೆಗೆ ಇರುತ್ತದೆ ಎಂದು ನಂಬಲಾಗಿದೆ.

ಮಠಾಧೀಶರು ಮತ್ತು ಟಿಟಿಡಿ ಆಡಳಿತವು ಉತ್ತರ ದ್ವಾರವನ್ನು ಹತ್ತು ದಿನಗಳವರೆಗೆ ತೆರೆದಿಡಲು ನಿರ್ಧರಿಸಿತು, ಭಕ್ತರು ಗರ್ಭಗುಡಿಯ ಸುತ್ತಲೂ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಒಂದು ದಿನದ ವೈಕುಂಠ ಏಕಾದಶಿಯಿಂದ ಎರಡು ದಿನಗಳು (ಏಕಾದಶಿ ಮತ್ತು ದ್ವಾದಶಿ) ಮತ್ತು ಈಗ ಹತ್ತು ದಿನಗಳಿಗೆ ಬದಲಾವಣೆಯು ಈ ದಿನಗಳಲ್ಲಿ ದರ್ಶನ ಪಡೆಯುವ ಭಕ್ತರು ಮೋಕ್ಷವನ್ನು ಪಡೆಯುತ್ತಾರೆ ಎಂಬ ಬಲವಾದ ನಂಬಿಕೆಯನ್ನು ಆಧರಿಸಿದೆ,

ಆಡಳಿತದಲ್ಲಿ ರಾಜಕೀಯ

ಟಿಟಿಡಿ ಸಾಂಪ್ರದಾಯಿಕವಾಗಿ ಆಚರಣೆಗಳು ಮತ್ತು ವಾರ್ಷಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವ್ಯವಸ್ಥೆ ಮಾಡಿದೆ. ಆದಾಗ್ಯೂ, ಹಿಂದಿನ ಸರ್ಕಾರದ ಅವಧಿಯಲ್ಲಿ, ಟಿಟಿಡಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಶಾಸಕರೊಬ್ಬರು, ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ಪರಿಚಯಿಸುವ ಮೂಲಕ ಲಾಭ ಪಡೆಯಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿತ್ತು. ದೇವಸ್ಥಾನದಲ್ಲಿ ಧಾರ್ಮಿಕ ಪಾವಿತ್ರ್ಯಕ್ಕಿಂತ ರಾಜಕೀಯ ಲಾಭಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT