ಪ್ರಧಾನಿ ಮೋದಿ, ಜೈರಾಮ್ ರಮೇಶ್ ಸಾಂದರ್ಭಿಕ ಚಿತ್ರ 
ದೇಶ

'ನಾನು ಕೂಡಾ ಮನುಷ್ಯ, ತಪ್ಪುಗಳು ಸಹಜ': ಡ್ಯಾಮೇಜ್ ಕಂಟ್ರೋಲ್ ತಂತ್ರ- ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಅಣಕ

ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಭಾಷಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲಿಂದಲೇ ಅವರ ನಾಯಕತ್ವ ವಿಧಾನ ರೂಪುಗೊಂಡಿದ್ದಾಗಿ ತಿಳಿಸಿದರು.

ನವದೆಹಲಿ: ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಕುರಿತು ಕಾಂಗ್ರೆಸ್ ಶುಕ್ರವಾರ ಪ್ರತಿಕ್ರಿಯಿಸಿದೆ. ಎರಡು ಗಂಟೆಗಳ ಪಾಡ್ ಕಾಸ್ಟ್ ನಲ್ಲಿ ಪ್ರಧಾನಿಯವರು ತಮ್ಮ ತಪ್ಪುಗಳು ಹಾಗೂ ಜೀವನ ಮಂತ್ರವನ್ನು ಹಂಚಿಕೊಂಡಿದ್ದರು.

ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಪಾಡ್ ಕಾಸ್ಟ್ ನಲ್ಲಿ, ನಾನು ಸೇರಿದಂತೆ ಎಲ್ಲರೂ ತಪ್ಪು ಮಾಡುವುದು ಸಹಜ ಎಂದು ಒಪ್ಪಿಕೊಂಡಿದ್ದಾರೆ. ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಭಾಷಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲಿಂದಲೇ ಅವರ ನಾಯಕತ್ವ ವಿಧಾನ ರೂಪುಗೊಂಡಿದ್ದಾಗಿ ತಿಳಿಸಿದರು.

‘ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದಿಲ್ಲ, ನನಗಾಗಿ ನಾನೇನೂ ಮಾಡಿಕೊಳ್ಳುವುದಿಲ್ಲ, ನಾನು ಕೂಡಾ ಮನುಷ್ಯ ತಪ್ಪುಗಳಾಗುವುದು ಸಹಜ, ಆದರೆ ಕೆಟ್ಟ ಉದ್ದೇಶದೊಂದಿಗೆ ಯಾವುದೇ ತಪ್ಪು ಮಾಡುವುದಿಲ್ಲ, ಇದು ನನ್ನ ಜೀವನದ ಮಂತ್ರ. ನಾನು ಸೇರಿದಂತೆ ಎಲ್ಲರೂ ತಪ್ಪು ಮಾಡುತ್ತಾರೆ. ನಾನು ಮನುಷ್ಯ, ಯಾವುದೋ ದೇವರಲ್ಲ' ಎಂದು ನಾನು ಮುಖ್ಯಮಂತ್ರಿಯಾದಾಗಲೇ ಹೇಳಿದ್ದಾಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಇದು ಸಂಪೂರ್ಣವಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ತಂತ್ರವಾಗಿದೆ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಸಂದರ್ಶನವನ್ನು ತನ್ನನ್ನು ದೇವರು ಕಳುಹಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಮೋದಿ ಅವರು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.

2024ರ ಲೋಕಸಭೆ ಚುನಾವಣೆಗೂ ಮುನ್ನಾ ಇದೇ ಪ್ರಧಾನಿ, ಏನು ಹೇಳಿದ್ದರು ಎಂಬುದನ್ನು ಗಮನಿಸಿಬೇಕು. ಅನನ್ಯ ಸಾಮರ್ಥ್ಯ ಮತ್ತು ಸ್ಪೂರ್ತಿಯೊಂದಿಗೆ ತನನ್ನು ದೇವರು ಕಳುಹಿಸಿದ್ದಾರೆ ಎಂದು ಮೋದಿ ಹೇಳಿದ್ದರು ಎಂದು ಜೈರಾಮ್ ರಮೇಶ್ ಟ್ವೀಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

2024 ರ ಲೋಕಸಭಾ ಚುನಾವಣೆಯ ಮೊದಲು ಸಂದರ್ಶನವೊಂದರಲ್ಲಿ ತನನ್ನು ವಿಶೇಷ ಸಾಮರ್ಥ್ಯ ಮತ್ತು ಸ್ಪೂರ್ತಿಯೊಂದಿಗೆ ದೇವರು ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ನನ್ನ ತಾಯಿ ಬದುಕಿರುವವರೆಗೂ ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ಭಾವಿಸುತ್ತಿದ್ದೆ, ಅವರ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗುತ್ತದೆ. ಈ ಶಕ್ತಿ ನನ್ನ ದೇಹದಿಂದಲ್ಲ. ಅದನ್ನು ದೇವರು ನನಗೆ ನೀಡಿದ್ದಾನೆ. ಅದಕ್ಕಾಗಿಯೇ ದೇವರು ನನಗೆ ಸಾಮರ್ಥ್ಯ, ಶಕ್ತಿ, ಶುದ್ಧ ಹೃದಯ ಮತ್ತು ಸ್ಫೂರ್ತಿಯನ್ನು ನೀಡಿದ್ದಾನೆ, ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT