ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2025ನೇ ಹೊಸ ವರ್ಷದಲ್ಲಿ ಮೊದಲ ಪಾಡ್‌ಕ್ಯಾಸ್ಟ್ ನಲ್ಲಿ ಮಾತನಾಡಿದ್ದು, ಇಂದು ಶುಕ್ರವಾರ ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ ಕಾಸ್ಟ್ ನ ಟ್ರೇಲರ್ ಬಿಡುಗಡೆ ಮಾಡಿದ್ದು, ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ತಪ್ಪುಗಳು ಸಂಭವಿಸುತ್ತವೆ, ನಾನು ಕೂಡ ತಪ್ಪುಗಳನ್ನು ಮಾಡಬಹುದು ಎಂದು ಹೇಳಿದ್ದನ್ನು ಮೋದಿ ಸ್ಮರಿಸಿಕೊಂಡಿದ್ದಾರೆ.
"ನಾನು ಕೂಡ ಮನುಷ್ಯ, ದೇವರಲ್ಲ" ಎಂದು ಪ್ರಧಾನಿ ಹೇಳಿರುವುದನ್ನು ಟ್ರೇಲರ್ ನಲ್ಲಿ ನೋಡಬಹುದು. ಉತ್ತಮ ನಾಗರಿಕರು ರಾಜಕೀಯಕ್ಕೆ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ, ಧ್ಯೇಯದೊಂದಿಗೆ ಬರಬೇಕು ಎಂದು ಒತ್ತಿ ಹೇಳುತ್ತಾರೆ.
ಟ್ರೇಲರ್ ನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೋದಿಯವರು, ನಾವು ನಿಮಗಾಗಿ ಇದನ್ನು ತಯಾರಿಸಿದ್ದಕ್ಕೆ ಖುಷಿಯಾಗುತ್ತಿದ್ದಂತೆ ನೀವೆಲ್ಲರೂ ಇದನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ!" ಎಂದು ಹೇಳಿದ್ದಾರೆ.