ಶಾಲೆಯಲ್ಲೇ ಬಾಲಕಿಗೆ ಹೃದಯಾಘಾತ 
ದೇಶ

8 ವರ್ಷದ ಬಾಲಕಿ ಹೃದಯಾಘಾತಕ್ಕೆ ಬಲಿ; ಶಾಲೆಯ CCTV Video viral

ತನ್ನ ತರಗತಿಗೆ ಹೋಗುವಾಗ ಹೃದಯಾಗಾತಕ್ಕೀಡಾಗಿ ಕುಸಿತು ಸಾವನ್ನಪ್ಪಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಹ್ಮದಾಬಾದ್: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪುಟ್ಟ ಮಕ್ಕಳೂ ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಆತಂಕಕಾರಿ ಬೆಳವಣೆಗೆಗಳು ವರದಿಯಾಗುತ್ತಿದ್ದು, ಇದೀಗ ಈ ಪಟ್ಟಿಗೆ ಗುಜರಾತ್ ಮೂಲದ 8 ವರ್ಷದ ಬಾಲಕಿ ಕೂಡ ಸೇರ್ಪಡೆಯಾಗಿದ್ದಾಳೆ.

ಹೌದು..ಗುಜರಾತ್‌ನ ಅಹಮದಾಬಾದ್‌ನ ಜೆಬಾರ್ ಶಾಲೆಯಲ್ಲಿ 3 ನೇ ತರಗತಿಯ ವಿದ್ಯಾರ್ಥಿನಿ ಗಾರ್ಗಿ ರಣಪರಾ ಎಂಬ 8 ವರ್ಷದ ಪುಟ್ಟ ಬಾಲಕಿ ಹೃದಯ ಸ್ತಂಭನದಿಂದ ದುರಂತ ಸಾವಿಗೀಡಾಗಿದ್ದಾಳೆ. ಗಾರ್ಗಿ ತನ್ನ ತರಗತಿಗೆ ಹೋಗುವಾಗ ಹೃದಯಾಗಾತಕ್ಕೀಡಾಗಿ ಕುಸಿತು ಸಾವನ್ನಪ್ಪಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೂಲಗಳ ಪ್ರಕಾರ ಬಾಲಕಿ ಗಾರ್ಗಿ ಶಾಲೆಗೆ ಹೋಗಿದ್ದಾಗ ದಿಢೀರ್ ಅನಾರೋಗ್ಯಕ್ಕೀಡಾಗಿದ್ದು, ಶಾಲೆಯ ಲಾಬಿಯಲ್ಲಿ ಸ್ವಲ್ಪ ಹೊತ್ತು ಕುರ್ಚಿಯ ಮೇಲೆ ಕುಳಿತಿದ್ದಳು. ಆದರೆ ಕೆಲವೇ ಕ್ಷಣಗಳ ನಂತರ ಆಕೆ ಕುಸಿದು ಬಿದ್ದಳು. ಆಕೆಯ ಸಹಪಾಠಿಗಳು ಆಕೆಯ ಆರೈಕೆ ಮಾಡಿ ಶಾಲಾ ಸಿಬ್ಬಂದಿಗೆ ವಿಷಯ ತಿಳಿಸಿದರೂ ಅಷ್ಟು ಹೊತ್ತಿಗಾಗಲೇ ಬಾಲಕಿ ಗಾರ್ಗಿ ಪ್ರಾಣಪಕ್ಷಿ ಹಾರಿಹೋಗಿತ್ತು.

ಬಳಿಕ ಆಸ್ಪತ್ರೆಯಲ್ಲಿ ಆಕೆಯನ್ನು ಬದುಕಿಸಲು ತಕ್ಷಣದ ಪ್ರಯತ್ನಗಳ ಹೊರತಾಗಿಯೂ, ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆಗೆ ಮೊದಲು ಗಾರ್ಗಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎಂದು ಪೋಷಕರು ಹೇಳಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲೂ ನಡೆದಿತ್ತು ಘಟನೆ

ಇನ್ನು ಗುಜರಾತ್ ಗಿಂತ ಮೊದಲೇ ಕರ್ನಾಟಕದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಓದುತ್ತಿದ್ದ ತೇಜಸ್ವಿನಿ ಎಂಬ 8 ವರ್ಷದ ವಿದ್ಯಾರ್ಥಿನಿ ಶಾಲಾ ಆವರಣದಲ್ಲಿ ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದಳು. ತೇಜಸ್ವಿನಿಗೂ ಯಾವುದೇ ವೈದ್ಯಕೀಯ ಅನಾರೋಗ್ಯದ ಇತಿಹಾಸವಿರಲಿಲ್ಲ, ಮಕ್ಕಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಇದೀಗ ವ್ಯಾಪಕ ಕಳವಳ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿಮಾಚಲದಲ್ಲಿ ಭಾರಿ ಭೂಕುಸಿತ: ಬಸ್‌ ಮೇಲೆಯೇ ಬಿದ್ದ ಪರ್ವತ; ಕನಿಷ್ಠ 18 ಮಂದಿ ಸಾವು

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ಸುಪ್ರೀಂಕೋರ್ಟ್ ನಲ್ಲಿ ತಮ್ಮತ್ತ ಶೂ ಎಸೆದಿದ್ದವನಿಗೆ ಕ್ಷಮೆ ನೀಡಿದ CJI

SCROLL FOR NEXT