ಕೋಳಿ ಕಾಳಗದ ದೃಶ್ಯ 
ದೇಶ

ಸಂಕ್ರಾಂತಿ ಹಬ್ಬದ ನಡುವೆ, ನಿಯಮ ಮೀರಿ ಕೋಳಿ ಕಾಳಗ: 2,000 ಕೋಟಿ ರೂ ಗೂ ಅಧಿಕ ಮೊತ್ತದ ಬೆಟ್ಟಿಂಗ್!

ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಆಂಧ್ರಪ್ರದೇಶದಲ್ಲಿ, ವಿಶೇಷವಾಗಿ ಗೋದಾವರಿ ಭಾಗದ ಜಿಲ್ಲೆಗಳಲ್ಲಿ ಕೋಳಿ ಕಾಳಗವು ಒಂದು ಪ್ರಮುಖ ಪಂದ್ಯವಾಗಿದೆ. ಅಲ್ಲಿ ಸ್ಥಳೀಯರು ಈ ರಕ್ತಪಾತ ಹರಿಸುವ ಕ್ರೀಡೆಯನ್ನು ಪಾಲಿಸಬೇಕಾದ ಸಂಪ್ರದಾಯವೆಂದು ಪರಿಗಣಿಸುತ್ತಾರೆ.

ವಿಜಯವಾಡ: ಸಂಪ್ರದಾಯ ಮತ್ತು ಪದ್ಧತಿಗಳ ನೆಪದಲ್ಲಿ ಕೋಳಿಗಳ ಕಾಳಗದ ಪಂದ್ಯ ನಡೆಸದಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಬೇಕೆಂಬ ಹೈಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ, ಮೂರು ದಿನಗಳ ಉತ್ಸವ ನಡೆಸಿದ್ದು ಕೋಳಿಗಳ ರಕ್ತಪಾತವಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ವರ್ಷ ಕೋಳಿ ಪಂದ್ಯ ವೇಳೆ ಅಂದಾಜು ಬೆಟ್ಟಿಂಗ್ ಮೌಲ್ಯ 2,000 ಕೋಟಿ ರೂಪಾಯಿ ಮೀರಿದೆ. ಆಂಧ್ರ ಪ್ರದೇಶದ ಕೃಷ್ಣ ಮತ್ತು ಎನ್‌ಟಿಆರ್ ಜಿಲ್ಲೆಗಳ ಎಡುಪುಗಲ್ಲು, ರಾಮವರಪ್ಪಡು, ಇಬ್ರಾಹಿಂಪಟ್ಟಣಂ, ಮಂಗಳಗಿರಿ, ಗನ್ನವರಂ, ನುನ್ನಾ, ತಿರುವುರು, ಚಿಂಚಿನಾಡ, ಪುಲಪಲ್ಲಿ ಮತ್ತು ಇತರ ಗ್ರಾಮಗಳಲ್ಲಿ ಕೋಳಿ ಕಾಳಗವನ್ನು ವೀಕ್ಷಿಸಲು ಯುವಕರು ಮತ್ತು ಮಹಿಳೆಯರು ಸೇರಿದಂತೆ ಹಲವಾರು ಜನರು ಕ್ರೀಡಾಂಗಣಗಳಲ್ಲಿ ನೆರೆದಿದ್ದರು.

ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಆಂಧ್ರಪ್ರದೇಶದಲ್ಲಿ, ವಿಶೇಷವಾಗಿ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಕಾಳಗವು ಒಂದು ಪ್ರಮುಖ ಪಂದ್ಯವಾಗಿದೆ. ಅಲ್ಲಿ ಸ್ಥಳೀಯರು ಈ ರಕ್ತಪಾತ ಹರಿಸುವ ಕ್ರೀಡೆಯನ್ನು ಪಾಲಿಸಬೇಕಾದ ಸಂಪ್ರದಾಯವೆಂದು ಪರಿಗಣಿಸುತ್ತಾರೆ.

ಗೋದಾವರಿ ಜಿಲ್ಲೆಗಳಿಗೆ ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಜನರು ಕೋಳಿ ಕಾಳಗವನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಮತ್ತು ನರಸಪುರಂ, ಏಲೂರು ಜಿಲ್ಲೆಯ ಕೈಕಲೂರು ಮತ್ತು ಹಿಂದಿನ ಕೃಷ್ಣಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ಕಾಕ್‌ಫೈಟಿಂಗ್ ರಿಂಗ್‌ಗಳನ್ನು ರಚಿಸಲಾಗಿದೆ.

ತಡೆಪಲ್ಲಿಗುಡೆಮ್ ಮೂಲದ ಉದ್ಯಮಿ ಗುಡಿವಾಡ ಪ್ರಭಾಕರ್ ರಾವ್ ಮತ್ತು ಹೆಸರಾಂತ ತಳಿಗಾರ ರಾಟಯ್ಯ ಅವರ ಕೋಳಿಗಳ ನಡುವಿನ ಕಾಳಗವು 1 ಕೋಟಿ ರೂಪಾಯಿಗೂ ಅತ್ಯಧಿಕ ಮೊತ್ತದ ಪಂಥವನ್ನು ಆಕರ್ಷಿಸಿತು. ತೀವ್ರ ಪೈಪೋಟಿಯ ನಂತರ ಗುಡಿವಾಡ ಪ್ರಭಾಕರ್ ರಾವ್ ವಿಜಯಶಾಲಿಯಾದರು.

ಜೂಜಾಟ ಮತ್ತು ಇತರ ಸಂಬಂಧಿತ ಕಾರ್ಯಕ್ರಮಗಳೊಂದಿಗೆ ಕೋಳಿ ಕಾಳಗಗಳು ಇಂದು ಸಂಜೆಯವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಸಂಕ್ರಾಂತಿ ಆಚರಣೆಯ ಸಮಯದಲ್ಲಿ ಕೋಳಿ ಕಾಳಗ ಮತ್ತು ಜೂಜಾಟದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ರಾಜ್ಯ ಪೊಲೀಸರು ಕ್ರಮಗಳನ್ನು ತೆಗೆದುಕೊಂಡರೂ, ರಾಜಕೀಯ ನಾಯಕರ ಬೆಂಬಲದೊಂದಿಗೆ ರಾಜ್ಯಾದ್ಯಂತ ರಕ್ತಪಾತವಾಗುವ ಕ್ರೀಡೆ ನಿರಂತರವಾಗಿ ನಡೆಯುತ್ತದೆ. ಸಂಘಟಕರು ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರುತ್ತಾರೆ.

ಕೋಳಿ ಕಾಳಗಗಳು ಶತಮಾನಗಳಿಂದ ಸಂಕ್ರಾಂತಿ ಆಚರಣೆಯ ಭಾಗವಾಗಿದೆ. ಕೋಳಿ ಕಾಳಗ ಮತ್ತು ಜೂಜಾಟವಿಲ್ಲದೆ ಹಬ್ಬವನ್ನು ಆಚರಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾನು ಮತ್ತು ನನ್ನ ಸೋದರಸಂಬಂಧಿಗಳು ಕರ್ನೂಲ್‌ನಿಂದ ಭೀಮಾವರಂಗೆ ಬಂದಿದ್ದೇವೆ ಎಂದು ಉದ್ಯಮಿ ರಾಘವೇಂದ್ರ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT