ದೆಹಲಿ ವಿಶ್ವವಿದ್ಯಾಲಯ  
ದೇಶ

ಸೊನ್ನೆ, ನೆಗೆಟಿವ್ ಅಂಕ ಬಂದರೂ ಚಿಂತೆಯಿಲ್ಲ: Delhi University ಪಿಜಿ ಕೋರ್ಸ್ ಗೆ ಪ್ರವೇಶಾತಿ!

ಹಿಂದೆ ವಿದ್ಯಾರ್ಥಿ ಸಮೂಹದಲ್ಲಿ ಬೇಡಿಕೆಯಲ್ಲಿದ್ದ ಈ ಕೋರ್ಸ್‌ಗಳು ಈಗ -3 ಕ್ಕಿಂತ ಕಡಿಮೆ ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ನೀಡುತ್ತಿದೆ.

ನವದೆಹಲಿ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ತಪ್ಪಿಸಲು ದೆಹಲಿ ವಿಶ್ವವಿದ್ಯಾಲಯವು ಮೊದಲ ಬಾರಿಗೆ ತನ್ನ ಪ್ರವೇಶ ಪರೀಕ್ಷೆಯಲ್ಲಿ ಶೂನ್ಯ ಮತ್ತು ನೆಗೆಟಿವ್ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪ್ರವೇಶದ ಅವಕಾಶವನ್ನು ನೀಡುತ್ತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶ ಪಟ್ಟಿಯಲ್ಲಿ ಅಧಿಕೃತ ದತ್ತಾಂಶವು ಎಂಎ, ಎಂಎಸ್ಸಿ ಮತ್ತು ಎಂಕಾಂನಂತಹ ಪ್ರಮುಖ ಕೋರ್ಸ್ ಗಳು ಸೇರಿದಂತೆ ಹಲವಾರು ಪಿಜಿ ಕೋರ್ಸ್‌ಗಳಲ್ಲಿ ಕಟ್-ಆಫ್ ಮಾರ್ಕ್ಸ್ ಕುಸಿತ ಕಂಡುಬಂದಿರುವುದು ಅಚ್ಚರಿಯ ವಿಷಯವಾಗಿದೆ.

ಹಿಂದೆ ವಿದ್ಯಾರ್ಥಿ ಸಮೂಹದಲ್ಲಿ ಬೇಡಿಕೆಯಲ್ಲಿದ್ದ ಈ ಕೋರ್ಸ್‌ಗಳು ಈಗ -3 ಕ್ಕಿಂತ ಕಡಿಮೆ ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ನೀಡುತ್ತಿದೆ.

ಎಂಎ ಪರ್ಷಿಯನ್ (ಯುಆರ್ ವಿಭಾಗ) -19 ರ ಕಟ್-ಆಫ್ ತೋರಿಸುತ್ತದೆ, ಎರಡನೇ ಸುತ್ತಿನಲ್ಲಿ ಅದನ್ನು 23 ಕ್ಕೆ ಏರಿಕೆ ಮಾಡಲಾಗಿದೆ. ಎಂಎ ಬೌದ್ಧ ಅಧ್ಯಯನಗಳು ಎರಡೂ ಸುತ್ತುಗಳಲ್ಲಿ -10 ರ ಕಟ್-ಆಫ್ ನ್ನು ಕಾಯ್ದುಕೊಂಡಿವೆ. ಅದೇ ರೀತಿ, ಎಂಎ ರಷ್ಯನ್ ಮತ್ತು ಎಂಎ ಕಾಮರ್ಸ್ (ಪಿಡಬ್ಲ್ಯೂಡಿ ವಿಭಾಗ) ಶೂನ್ಯ ಕಟ್-ಆಫ್‌ಗಳನ್ನು ಹೊಂದಿದ್ದವು, ಇದು ಕಾರ್ಯಕ್ಷಮತೆಯನ್ನು ಲೆಕ್ಕಿಸದೆ ಮುಕ್ತ ಪ್ರವೇಶವನ್ನು ಸೂಚಿಸುತ್ತದೆ.

ದೆಹಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ವಿಕಾಸ್ ಗುಪ್ತಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ದತ್ತಾಂಶವು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಮಾತ್ರ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಕಟ್-ಆಫ್‌ಗಳು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸಂಬಂಧಿಸಿದೆ. ವಿದ್ಯಾರ್ಥಿಗಳು ಮಾನದಂಡಗಳನ್ನು ಪೂರೈಸುತ್ತಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ ನಾವು ಸೀಟುಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ದೆಹಲಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಿಂದ ಸಂಗ್ರಹಿಸಲಾದ ದತ್ತಾಂಶವು ಮೀಸಲಾತಿಯಿಲ್ಲದ ವರ್ಗಕ್ಕೂ ಕಟ್-ಆಫ್ ಋಣಾತ್ಮಕ ಸಂಖ್ಯೆಗಳಿಗೆ ಇಳಿದ ಬಹಳಷ್ಟು ಕೋರ್ಸ್ ಗಳನ್ನು ಸೂಚಿಸುತ್ತದೆ.

ಎಂಎ ಪರ್ಷಿಯನ್ ವಿಭಾಗವು ಮೊದಲ ಸುತ್ತಿನಲ್ಲಿ ಮೀಸಲಾತಿಯಿಲ್ಲದ ವರ್ಗದಲ್ಲಿ ವಿದ್ಯಾರ್ಥಿಗಳನ್ನು -19 ಅಂಕಗಳಲ್ಲಿ ಪ್ರವೇಶ ನೀಡಿದೆ, ನಂತರ ಎಂಎ ಬೌದ್ಧ ಅಧ್ಯಯನ ವಿಭಾಗದ ಮೀಸಲಾತಿರಹಿತ ವಿಭಾಗದಲ್ಲಿ ಕಟ್-ಆಫ್ ನ್ನು -10 ಕ್ಕೆ ನಿಗದಿಪಡಿಸಲಾಗಿದೆ.

ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಅಭಾ ದೇವ್ ಹಬೀಬ್, ಪ್ರವೇಶ ಮಾನದಂಡಗಳು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT