ಅರ್ಚಿತಾ ಫುಕನ್ ಎಐ ಚಿತ್ರಗಳು 
ದೇಶ

Pornography ಗೂ Archita Phukan ಗೂ ಸಂಬಂಧವೇ ಇಲ್ಲ.. ಭಗ್ನ ಪ್ರೇಮಿಯ ಬಂಧನ; 10 ಲಕ್ಷ ರೂ ಗಳಿಕೆ; ತಲೆ ತಿರುಗುವ Deepfake ಟ್ವಿಸ್ಟ್!

ಅಚ್ಚರಿ ಎಂದರೆ ಈ ಪ್ರತಿಮ್ ಬೋರಾ ತನ್ನ ಮಾಜಿ ಪ್ರಿಯತಮೆಗೆ ಕಿರುಕುಳ ನೀಡಲು ಆರಂಭಿಸಿದ್ದ ಅದೇ BaBy Doll Archi ಖಾತೆಯಿಂದ 10 ಲಕ್ಷ ರೂ ಹಣವನ್ನೂ ಕೂಡ ಸಂಪಾದನೆ ಮಾಡಿದ್ದಾನೆ.

ಗುವಾಹತಿ: ಇತ್ತೀಚೆಗೆ ಅಮೆರಿಕದ ನೀಲ ಚಿತ್ರೋದ್ಯಮಕ್ಕೆ ಅಸ್ಸಾಂ ಮೂಲದ ಯುವತಿ ಅರ್ಚಿತಾ ಫುಕನ್ (Archita Phukan) ಕಾಲಿಟ್ಟಿದ್ದಾರೆ ಎಂಬ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಆದರೆ ಇದೀಗ ಈ ಪ್ರಕರಣದಲ್ಲಿ ಮಹತ್ತರ ಟ್ವಿಸ್ಟ್ ದೊರೆತಿದ್ದು, pornography ಗೂ Archita Phukan ಗೂ ಸಂಬಂಧವೇ ಇಲ್ಲ.. ಅಸಲಿಗೆ ಅಂತಹ ಯುವತಿಯೇ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಹೌದು.. ಈ ಹಿಂದೆ ಅಸ್ಸಾಂ ಮೂಲದ ಅರ್ಚಿತಾ ಫುಕನ್ ಅಮೆರಿಕದ ಅಶ್ಲೀಲ ಚಿತ್ರೋಧ್ಯಮಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಇಂಬು ನೀಡುವಂತೆ ಅರ್ಚಿತಾ ಅಮೆರಿಕದ ನೀಲಿ ಚಿತ್ರ ತಾರೆ ಕೇಂಡ್ರ ಲಸ್ಟ್ (Kendra Lust) ಜೊತೆ ಇರುವ ಫೋಟೋ ಕೂಡ ವ್ಯಾಪಕ ವೈರಲ್ ಆಗಿತ್ತು.

ಆದರೆ ಇದೀಗ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದ್ದು, ಅಸಲಿಗೆ ಅರ್ಚಿತಾಗೂ ಅಶ್ಲೀಲ ಚಿತ್ರೋಧ್ಯಮಕ್ಕೂ ಸಂಬಂಧವೇ ಇಲ್ಲ.. ಅಸಲಿಗೆ ಅರ್ಚಿತಾ ಫುಕನ್ ಎಂಬ ಯುವತಿಯೇ ಇಲ್ಲ ಎಂದು ಹೇಳಲಾಗಿದೆ.

ಭಗ್ನಪ್ರೇಮಿಯೋರ್ವ ತನ್ನ ಮಾಜಿ ಪ್ರಿಯತಮೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆಯ ವಿರುದ್ಧ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ. ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಬೇಕಾಗಿರುವುದರಿಂದ ತನಿಖೆಯಲ್ಲಿ ಬಹು ಸಂಸ್ಥೆಗಳು ಭಾಗಿಯಾಗಲಿವೆ.

ಪೊಲೀಸರು ಆರೋಪಿಗಳಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಗ್ನ ಪ್ರೇಮಿಯ ಸೇಡಿನ ಕೃತ್ಯ

ಅಂದಹಾಗೆ ಅರ್ಚಿತಾ ಫುಕನ್ ಈ ಹಿಂದೆ ತಾನು ಪ್ರೀತಿಸುತ್ತಿದ್ದ ಪ್ರತಿಮ್ ಬೋರಾ ಎಂಬ ಯುವಕನನ್ನು ಕಾರಣಾಂತರಗಳಿಂದ ಬೇರ್ಪಟ್ಟಿದ್ದಳು. ಆದರೆ ಪ್ರೇಮಿ ಪ್ರತಿಮ್ ಬೋರಾ ಮಾತ್ರ ಆಕೆಯನ್ನು ಇನ್ನಿಲ್ಲದಂತೆ ಇಷ್ಟಪಡುತ್ತಿದ್ದ. ಆದರೆ ಆಕೆ ಕೈಕೊಟ್ಟಳು ಎಂಬ ಕೋಪಕ್ಕೆ ಆಕೆಯ ವಿರುದ್ಧ ಸೇಡಿನ ಕ್ರಮವಾಗಿ ಆಕೆಯನ್ನು ಅಶ್ಲೀಲ ಚಿತ್ರ ಅಥವಾ ನೀಲಿ ಚಿತ್ರತಾರೆ ಎಂಬಂತೆ ಬಿಂಬಿಸಿದ್ದ. ಅಲ್ಲದೆ ಕೃತಕ ಬದ್ದಿಮತ್ತೆ (AI) ಬಳಸಿಕೊಂಡು ತನ್ನ ಪ್ರಿಯತಮೆಯನ್ನೇ ಹೋಲುವ ಚಿತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅರ್ಚಿತಾ ಫುಕನ್ ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಯಲಾಗಿದ್ದು ಹೇಗೆ?

ಇನ್ನು ತನ್ನ ಹೆಸರಿನಲ್ಲಿ ಬೇರಾವುದೋ ಯುವತಿಯ ಫೋಟೋ ಅಪ್ಲೋಡ್ ಆಗುತ್ತಿರುವದರ ಕುರಿತು ಅರ್ಚಿತಾ ಎಂಬ ಯುವತಿ ಈ ಹಿಂದೆ ಅಸ್ಸಾಂನ ದಿಬ್ರುಗಢ ಪೊಲೀಸ್ ಠಾಣೆಯಲ್ಲಿ ಮಾನನಷ್ಟ ಮೊಕ್ಕದ್ದಮೆ ದಾಖಲಿಸಿದ್ದಳು. ಈ ದೂರಿನ ವಿಚಾರಣೆ ನಡೆಸಿದ ಪೊಲೀಸರು ಅರ್ಚಿತಾ ಫುಕನ್ ಸಾಮಾಜಿಕಜಾಲತಾಣದ ಕುರಿತು ತನಿಖೆ ನಡೆಸಿದಾಗ ಆಕೆಯ ಮಾಜಿ ಪ್ರಿಯಮತನ ಕುಕೃತ್ಯ ಬಯಲಾಗಿದೆ. ಯುವತಿಯಿಂದ ಬೇರ್ಪಟ್ಟ ಬಳಿಕ ಮಾಜಿ ಪ್ರಿಯತಮ ಆಕೆಯನ್ನೇ ಹೋಲುವ ಎಐ ಯುವತಿಯನ್ನು ರಚಿಸಿ ಅದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಆರೋಪಿ ಪ್ರತಿಮ್ ಬೋರಾ ವಿರುದ್ಧ ಅಸ್ಸಾಂ ಪೊಲೀಸರು ಸೈಬರ್ ಕಿರುಕುಳ, ಮಾನನಷ್ಟ ಮತ್ತು ಗೌಪ್ಯತೆಯ ಉಲ್ಲಂಘನೆ ಸೇರಿದಂತೆ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ದೂರು ದಾಖಲು

ದಿಬ್ರುಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಪ್ರಭಾರ) ಸಿಜಲ್ ಅಗರ್ವಾಲ್ ಮಾತನಾಡಿ, ಸಂತ್ರಸ್ತೆಯಿಂದ ಶನಿವಾರ ದೂರು ಬಂದಿದ್ದು, ಆಕೆಯ ಮಾನಹಾನಿ ಮಾಡಲು ಮಾರ್ಫ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

"ಸಂತ್ರಸ್ತೆಯ ಮಾರ್ಫಿಂಗ್ ಮತ್ತು AI- ರಚಿತ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ನಿನ್ನೆ ನಮಗೆ ದೂರು ಬಂದಿತು. ಅದರೊಂದಿಗೆ ಇನ್‌ಸ್ಟಾಗ್ರಾಮ್ ಪುಟದ ಉಲ್ಲೇಖವನ್ನು ಸೇರಿಸಲಾಗಿತ್ತು ಮತ್ತು ಪುಟ ಮಾಲೀಕರ ಕುರಿತು ತನಿಖೆ ನಡೆಸಿದಾಗ ಆರೋಪಿಯ ಫೋನ್ ಸಂಖ್ಯೆ ನಮಗೆ ಸಿಕ್ಕಿತು.

ಆರೋಪಿ ಪ್ರತಿಮ್ ಬೋರಾ AI ಸಾಫ್ಟ್‌ವೇರ್ ಬಳಸಿ ಹಲವಾರು ಅಶ್ಲೀಲ ವಿಷಯ ಮತ್ತು ಅಶ್ಲೀಲ ವಸ್ತುಗಳನ್ನು ರಚಿಸಲು ಸಂತ್ರಸ್ಥೆಯ ಚಿತ್ರಗಳನ್ನು ಬಳಸಿದ್ದ. ಅವರಿಗೆ ಹಿಂದಿನ ಪರಿಚಯವಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಆತ ಈ ದೃಷ್ಕೃತ್ಯ ಮಾಡಿದ್ದಾನೆ' ಎಂದು ಅಗರ್ವಾಲ್ ಹೇಳಿದರು.

ಬೋರಾನ ಕೃತ್ಯ ಕೇಳಿ ಪೊಲೀಸರೇ ಹೈರಾಣು

ಈ ಪ್ರತಿಮ್ ಬೋರಾನ ಡಿಜಿಟಲ್ ಕೃತ್ಯ ತನಿಖೆ ಮಾಡಲು ಹೋಗಿದ್ದ ಅಸ್ಸಾಂ ಪೊಲೀಸರೇ ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ಮಾತನಾಡಿರುವ ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 'ಈ ಪ್ರಕರಣವು ಡಿಜಿಟಲ್ ಕಿರುಕುಳ ಮತ್ತು ಸೇಡಿನ ಅಶ್ಲೀಲತೆಯ ಕರಾಳ ಒಳ

ನೋಟವನ್ನು ಬಹಿರಂಗಪಡಿಸುತ್ತದೆ. ಆರೋಪಿಯು ಕಾನೂನಿನ ಸಂಪೂರ್ಣ ವ್ಯಾಪ್ತಿಯನ್ನು ಎದುರಿಸಬೇಕೆಂದು ನಾವು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ. ಆರೋಪಿಯು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಮತ್ತು ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.

ಕಿರುಕುಳ ನೀಡಲು ಆರಂಭಿಸಿದ್ದ ಖಾತೆಯಿಂದಲೇ 10 ಲಕ್ಷ ರೂ ಹಣ ಸಂಪಾದನೆ

ಇನ್ನೂ ಅಚ್ಚರಿ ಎಂದರೆ ಈ ಪ್ರತಿಮ್ ಬೋರಾ ತನ್ನ ಮಾಜಿ ಪ್ರಿಯತಮೆಗೆ ಕಿರುಕುಳ ನೀಡಲು ಆರಂಭಿಸಿದ್ದ ಅದೇ BaBy Doll Archi ಖಾತೆಯಿಂದ 10 ಲಕ್ಷ ರೂ ಹಣವನ್ನೂ ಕೂಡ ಸಂಪಾದನೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಅಗರ್ವಾಲ್ ಅವರು, 'ಆರಂಭದಲ್ಲಿ ಕಿರುಕುಳ ತಂತ್ರವಾಗಿ ಪ್ರಾರಂಭವಾದ ಈ ಖಾತೆಯನ್ನು ಆರೋಪಿ ಪ್ರತಿಮ್ ಬೋರಾ ಹಣಗಳಿಸಲು ಪ್ರಾರಂಭಿಸಿದಾಗ ಮುಂದುವರೆಸಿದ್ದ. ಅವನು ಪೋಸ್ಟ್ ಮಾಡಿದ ವಯಸ್ಕರ ಕಟೆಂಟ್ ಗೆ ಚಂದಾದಾರಿಕೆ ಲಿಂಕ್ ಇತ್ತು.

ಜನರು ಅದನ್ನು ಪ್ರವೇಶಿಸಲು ಪಾವತಿಸಬೇಕಾಗಿತ್ತು. ಅವನು ಅದರ ಮೂಲಕ ಸುಮಾರು 10 ಲಕ್ಷ ರೂ.ಗಳನ್ನು ಗಳಿಸಿದ್ದ. ಅವನು ದುರಾಸೆಯಿಂದ ಅಪರಾಧವನ್ನು ಮುಂದುವರಿಸಿದನು, ಆದರೂ ಅವನು ಮಹಿಳೆಗೆ ಕಿರುಕುಳ ನೀಡಲು ಅದನ್ನು ಪ್ರಾರಂಭಿಸಿದನು" ಎಂದು ಅಗರ್ವಾಲ್ ಹೇಳಿದರು.

ಅರ್ಚಿತಾ ಫುಕನ್ ಕಟೆಂಟ್ ಶೇರ್ ಮಾಡಬೇಡಿ

ಇದೇ ವೇಳೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಅರ್ಚಿತಾ ಫುಕನ್ ಕುರಿತ ಪೋಸ್ಟ್ ಗಳನ್ನು ಆನ್‌ಲೈನ್‌ನಲ್ಲಿ ಫಾರ್ವರ್ಡ್ ಮಾಡುವುದು, ಹಂಚಿಕೊಳ್ಳುವುದು ಅಥವಾ ತೊಡಗಿಸಿಕೊಳ್ಳುವುದರ ವಿರುದ್ಧ ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಪ್ರಕರಣ ಬಹಿರಂಗ ಮಾಡಿದ ಪೊಲೀಸರಿಗೆ ಯುವತಿ ಅರ್ಚಿತಾ ಧನ್ಯವಾದ ಹೇಳಿದ್ದು, ತನ್ನ ಘನತೆಯನ್ನು ಪುನಃಸ್ಥಾಪಿಸಿದ್ದಕ್ಕಾಗಿ ಮತ್ತು ದಾಖಲೆಗಳನ್ನು ಬಹಿರಂಗಗೊಳಿದ್ದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

India- US Relationship: ನಿಮ್ಮ ಭಾವನೆಗಳನ್ನು ಆಳವಾಗಿ ಗೌರವಿಸುತ್ತೇನೆ-ಬೆಂಬಲಿಸುತ್ತೇನೆ: ಸದಾಕಾಲ ಸ್ನೇಹಿತನಾಗಿರುತ್ತೇನೆಂದ ಟ್ರಂಪ್'ಗೆ ಮೋದಿ ಉತ್ತರ

'Khalistani ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು': ಕೊನೆಗೂ ಸತ್ಯ ಒಪ್ಪಿಕೊಂಡ Canada

7 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಕೊನೆಗೂ ದಂಡ ಪಾವತಿಸಿದ ಸಿಎಂ Siddaramaiah, ಎಷ್ಟು ಗೊತ್ತಾ?

jersey Sponsorship: ಟೀಂ ಇಂಡಿಯಾಗೆ ಜೆರ್ಸಿ ಸ್ಪಾನ್ಸರ್‌ ಶಿಪ್ ದರ ಹೆಚ್ಚಿಸಿದ BCCI; ದ್ವಿಪಕ್ಷೀಯ, ICC ಪಂದ್ಯಗಳಿಗೆ ರೇಟು ಎಷ್ಟು ಗೊತ್ತಾ?

ಮೋದಿ ಉತ್ತಮ-ಅದ್ಭುತ ಪ್ರಧಾನಿ, ಅವರೊಂದಿಗೆ ಎಂದಿಗೂ ಸ್ನೇಹಿತರಾಗಿರುತ್ತೇನೆ, ಭಾರತ-ಅಮೆರಿಕಾ ನಡುವೆ ವಿಶೇಷ ಬಾಂಧವ್ಯವಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

SCROLL FOR NEXT