ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್ ಸಾಂದರ್ಭಿಕ ಚಿತ್ರ 
ದೇಶ

ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ: ವ್ಯಕ್ತಿಯ ಬಂಧನ

ಈ ಸಂಬಂಧ ಜುಲೈ 10 ರಂದು ಮೈನ್‌ಪಾಲ್ ಚೌಹಾಣ್ ಎಂಬ ವ್ಯಕ್ತಿ ಭಾವನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೀರತ್: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಅವಹೇಳನಕಾರಿಯ ಹೇಳಿಕೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಮೀರತ್ ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಸೂಲ್‌ಪುರ ಔರಂಗಾಬಾದ್ ನಿವಾಸಿ ಇರ್ಷಾದ್ ಖಾನ್ (26) ಎಂದು ಗುರುತಿಸಲಾಗಿದೆ.

ಈ ಸಂಬಂಧ ಜುಲೈ 10 ರಂದು ಮೈನ್‌ಪಾಲ್ ಚೌಹಾಣ್ ಎಂಬ ವ್ಯಕ್ತಿ ಭಾವನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಭಾವನ್‌ಪುರ ಠಾಣಾಧಿಕಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಇರ್ಷಾದ್ ಖಾನ್ ಅವರು ಪ್ರಧಾನಿ ಮತ್ತು ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲು ನಿವಾಸದ ಹೊರಗೆ ಹೈಡ್ರಾಮ: 'ನನ್ನ ಕಥೆ ಮುಗಿಯಿತು' ಬಟ್ಟೆ ಹರಿದುಕೊಂಡು ಗೋಳಾಡಿದ RJD ಟಿಕೆಟ್ ಆಕಾಂಕ್ಷಿ! Video

ಬೆಳಗಾವಿ 'ಡಿಸಿಸಿ ಬ್ಯಾಂಕ್' ಚುನಾವಣೆ: ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಮಾರಾಮಾರಿ!

'ಬೆಂಗಳೂರು ಮೂಲಸೌಕರ್ಯದ ಬಗ್ಗೆ ಟೀಕೆಗಳಿಗೆ ಸ್ವಾಗತ, ಆದರೆ ಕೆಲವರು ಅದನ್ನು ಅತಿಯಾಗಿ ಮಾಡುತ್ತಿದ್ದಾರೆ'

ಕಲ್ಲು ಕ್ವಾರಿಯಿಂದ ಮುತ್ತುಗಳವರೆಗೆ: ಪಾಳುಬಿದ್ದ ಸ್ಥಳದಲ್ಲೀಗ ಲಕ್ಷಗಟ್ಟಲೆ ಆದಾಯ ಕಂಡುಕೊಂಡ ಗದಗ ಯುವಕರು!

ಕಳಪೆ ಪ್ರದರ್ಶನ ನೀಡಿದರೂ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾಧನೆ!

SCROLL FOR NEXT