ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ 
ದೇಶ

Census 2027: ಡಿಜಿಟಲ್ ದತ್ತಾಂಶ ಸಂಗ್ರಹ, ಜಾತಿ ಗಣತಿಗೆ ಸಿದ್ಧತೆ- MoS ನಿತ್ಯಾನಂದ ರೈ

ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಜುಲೈ 3 ಮತ್ತು 4 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ದಿನಗಳ ಸಮ್ಮೇಳನದಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನವದೆಹಲಿ: 2027 ರ ಜನಗಣತಿಗೆ ಸಿದ್ದತೆ ಆರಂಭಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ (MHA) ಮಂಗಳವಾರ ಹೇಳಿದೆ.

ಜಾತಿ ಗಣತಿ ಕಾರ್ಯತಂತ್ರ ಕುರಿತು ಚರ್ಚಿಸಲು ಇದೇ ತಿಂಗಳ ಆರಂಭದಲ್ಲಿ ಜನಗಣತಿ ಕಾರ್ಯಾಚರಣೆಗಳ ನಿರ್ದೇಶಕರ ಎರಡು ದಿನಗಳ ಸಮ್ಮೇಳನ ನಡೆಸಲಾಗಿದ್ದು, ಎರಡು ಹಂತಗಳಲ್ಲಿ ಜಾತಿಗಣತಿ ನಡೆಸಲಾಗುವುದು. ಇದರಲ್ಲಿ ಡಿಜಿಟಲ್ ಡೇಟಾ ಸಂಗ್ರಹಣೆ ಮತ್ತು ಜಾತಿ ಗಣತಿ ಒಳಗೊಂಡಿರುತ್ತದೆ ಎಂದು ಸಚಿವಾಲಯ ಸ್ಪಷ್ಪಪಡಿಸಿದೆ.

ಈ ಸಂಬಂಧ ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಜುಲೈ 3 ಮತ್ತು 4 ರಂದು ರಾಷ್ಟ್ರ ರಾಜಧಾನಿಯಲ್ಲಿ ಎರಡು ದಿನಗಳ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಜನಗಣತಿ ಕಾರ್ಯಾಚರಣೆಗಳ ನಿರ್ದೇಶಕರು, ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯಗಳ ಹಿರಿಯ ಅಧಿಕಾರಿಗಳು ಮತ್ತು ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಮುಂಬರುವ ಜನಗಣತಿ ಮತ್ತು ಸಂಬಂಧಿತ ಚಟುವಟಿಕೆಗಳ ಕುರಿತು ಕೈಗೊಳ್ಳಬೇಕಾದ ಕಾರ್ಯತಂತ್ರ ಕುರಿತು ಚರ್ಚಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಡೇಟಾ ಸಂಗ್ರಹಣೆ, ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಮ್ (CMMS) ಪೋರ್ಟಲ್ ಮೂಲಕ ನಿರ್ವಹಣೆ ಮತ್ತು ಮೇಲ್ವಿಚಾರಣೆ, ಸ್ವಯಂ-ಎಣಿಕೆ, ಜನಗಣತಿ ಸಿಬ್ಬಂದಿಯ ತರಬೇತಿ ಮತ್ತಿತರ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಹವಾಮಾನ ಮತ್ತು ಕಾರ್ಯತಂತ್ರದ ಕಾರಣದಿಂದ ಎರಡು ಹಂತಗಳಲ್ಲಿ ಗಣತಿ ನಡೆಯಲಿವೆ. 2027ರ ಮಾರ್ಚ್ 1 ರಿಂದ ದೇಶದ ಬಹುತೇಕ ಭಾಗಗಳಲ್ಲಿ, 2026ರ ಅಕ್ಟೋಬರ್ 1ರಿಂದ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಗಣತಿಗಳು ಆರಂಭವಾಗಲಿವೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

2011ರಲ್ಲಿ ಕೊನೆಯ ಬಾರಿಗೆ ಗಣತಿಯನ್ನು ನಡೆಸಲಾಗಿತ್ತು. ಕೋವಿಡ್ ಕಾರಣ ನೀಡಿ 2021ರಲ್ಲಿ ನಡೆಯಬೇಕಿದ್ದ ಗಣತಿಯನ್ನು ಕೇಂದ್ರ ಸರ್ಕಾರ ಮುಂದೂಡಿತ್ತು. ಜನಗಣತಿ ಕಾಯ್ದೆ 1948 ಮತ್ತು ಜನಗಣತಿ ನಿಯಮಗಳು 1990 ರ ನಿಬಂಧನೆಗಳ ಅಡಿಯಲ್ಲಿ ಭಾರತದಲ್ಲಿ ಜನಗಣತಿಯನ್ನು ನಡೆಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dharmasthala Mass Burial Case: ಸಾಕ್ಷ್ಯಾಧಾರಗಳ ಕೊರತೆ, 'ಷಡ್ಯಂತ್ರ ಸೂತ್ರಧಾರರತ್ತ' ಎಸ್ ಐಟಿ ತನಿಖೆ!

ಹೈಕೋರ್ಟ್ ಸ್ಥಳಾಂತರ ಬೇಡಿಕೆ ಬಗ್ಗೆ ಪರಿಶೀಲನೆ: ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ; ಡಿ.ಕೆ ಶಿವಕುಮಾರ್

RSS ರಹಸ್ಯ ಸಂಘಟನೆಯಲ್ಲ- ಶತ್ರುಗಳೂ ಇಲ್ಲ: ನೆಹರು ಮರಿಮೊಮ್ಮಕ್ಕಳು ಅರ್ಥಮಾಡಿಕೊಳ್ಳಲು ಸಮಯ ಬೇಕು; ರಾಮ್ ಮಾಧವ್

ಹಾರ್ಡ್ ಡಿಸ್ಕ್ ನಲ್ಲಿದ್ದ 'ಅಶ್ಲೀಲ' ವಿಡಿಯೋ ಡಿಲೀಟ್ ಮಾಡಲು ನಕಾರ: UPSC ಆಕಾಂಕ್ಷಿಯ ಹತ್ಯೆ! ಮೂವರ ಬಂಧನ

"ಅವರಿಗೆ ಪಾಠ", ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರ್ತಾರೆ: ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ಬಗ್ಗೆ ಮಧ್ಯಪ್ರದೇಶದ ಸಚಿವ ಶಾಕಿಂಗ್ ಹೇಳಿಕೆ!

SCROLL FOR NEXT