ಪ್ರಧಾನಿ ಮೋದಿ 
ದೇಶ

ಪ್ರಧಾನಿ ಮೋದಿ ವಿದೇಶ ಪ್ರವಾಸ: 5 ವರ್ಷಗಳಲ್ಲಿ 350 ಕೋಟಿ ರೂ ವೆಚ್ಚ..!

ಫೆಬ್ರವರಿ 10 ರಿಂದ 13 ರವರೆಗೆ ಮೋದಿ ಫ್ರಾನ್ಸ್ ಮತ್ತು ಅಮೆರಿಕಕ್ಕೆ ಭೇಟಿ ನೀಡಿದ್ದರು ಇದಕ್ಕಾಗಿ ಫ್ರೆಂಚ್ ಭೇಟಿಗೆ 25,59,82,902 ರೂ. ಮತ್ತು ಅಮೆರಿಕ ಭೇಟಿಗೆ 16,54,84,302 ರೂ. ವೆಚ್ಚವಾಗಿದೆ.

ನವದೆಹಲಿ: 2021 ರಿಂದ ಜುಲೈ 2025 ರವರೆಗಿನ ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಈ ಭೇಟಿ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿರಬಹುದು, ಆದರೆ, ಪ್ರವಾಸವು ಸರ್ಕಾರದ ಬೊಕ್ಕಸಕ್ಕೆ ಸುಮಾರು 300 ಕೋಟಿ ರೂಪಾಯಿಗಳ ವೆಚ್ಚವನ್ನುಂಟು ಮಾಡಿವೆ.

ಈ ಭೇಟಿಯಲ್ಲಿ ಈ ವರ್ಷದ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಅಮೆರಿಕ, ಫ್ರಾನ್ಸ್, ಮಾರಿಷಸ್, ಥೈಲ್ಯಾಂಡ್, ಶ್ರೀಲಂಕಾ ಮತ್ತು ಸೌದಿ ಅರೇಬಿಯಾಗಳಿಗೆ ಭೇಟಿ ನೀಡಿದ್ದೂ ಕೂಡ ಸೇರಿದ್ದು, ಐದು ರಾಷ್ಟ್ರಗಳ ಭೇಟಿಗೆ 67 ಕೋಟಿ ರೂ.ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಅವರ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಅವರು ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಪ್ರಧಾನಮಂತ್ರಿಗಳ ವಿದೇಶ ಭೇಟಿ ಕುರಿತು ವಿದೇಶಾಂಗ ಸಚಿವಾಲಯವು ಲಿಖಿತ ಉತ್ತರ ನೀಡಿದ್ದು, ವೆಚ್ಚಗಳ ಕುರಿತು ವಿವರವಾದ ಮಾಹಿತಿಗಳನ್ನು ಹಂಚಿಕೊಂಡಿದೆ.

ಫೆಬ್ರವರಿ 10 ರಿಂದ 13 ರವರೆಗೆ ಮೋದಿ ಫ್ರಾನ್ಸ್ ಮತ್ತು ಅಮೆರಿಕಕ್ಕೆ ಭೇಟಿ ನೀಡಿದ್ದರು ಇದಕ್ಕಾಗಿ ಫ್ರೆಂಚ್ ಭೇಟಿಗೆ 25,59,82,902 ರೂ. ಮತ್ತು ಅಮೆರಿಕ ಭೇಟಿಗೆ 16,54,84,302 ರೂ. ವೆಚ್ಚವಾಗಿದೆ.

ಏಪ್ರಿಲ್ 3 ರಿಂದ 6 ರವರೆಗೆ ಥೈಲ್ಯಾಂಡ್ ಮತ್ತು ಶ್ರೀಲಂಕಾಕ್ಕೆ ನೀಡಿದ ಭೇಟಿಗೆ 9 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ (ಥೈಲ್ಯಾಂಡ್‌ನಲ್ಲಿ `4,92,81,208 ಮತ್ತು ಶ್ರೀಲಂಕಾದಲ್ಲಿ `4,46,21,690).

ಏಪ್ರಿಲ್ 22 ರಿಂದ 23 ರವರೆಗೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು, ಆ ಸಮಯದಲ್ಲಿ 15,54,03,792.47 ರೂ. ಖರ್ಚು ಮಾಡಲಾಗಿದೆ.

ಮಾರಿಷಸ್ (ಮಾರ್ಚ್ 11-12), ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ (ಜುಲೈ 15-19) ಮತ್ತು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ (ಜುಲೈ 2-9) ಗಳಿಗೂ ಭೇಟಿ ನೀಡಿದರು, ಆದರೆ ಬಿಲ್‌ಗಳು ಇನ್ನೂ ಇತ್ಯರ್ಥದಲ್ಲಿರುವುದರಿಂದ ಖರ್ಚುಗಳನ್ನು ಹಂಚಿಕೊಂಡಿಲ್ಲ.

2024 ರಲ್ಲಿ, ಪ್ರಧಾನಿ ಯುಎಇ ಮತ್ತು ಕತಾರ್‌ಗೆ ಭೇಟಿ ನೀಡಿದ್ದು, (ಫೆಬ್ರವರಿ 13-15), ಆ ವೇಳೆ 3,14,30,607 ರೂ. (ಕತಾರ್) ವೆಚ್ಚವಾಗಿದೆ, ಭೂತಾನ್ ಭೇಟಿಯಲ್ಲಿ (ಮಾರ್ಚ್ 22-23) 4,50,27,271 ರೂ. ಖರ್ಚು ಮಾಡಲಾಗಿದೆ.

ನಂತರದ ಇಟಲಿ ಭೇಟಿಗೆ (ಜೂನ್ 13-14) 14,36,55,289 ರೂ. ಖರ್ಚು ಮಾಡಲಾಗಿದೆ. ಜುಲೈ 8 ರಿಂದ 10 ರವರೆಗೆ ಆಸ್ಟ್ರಿಯಾ ಮತ್ತು ರಷ್ಯಾಕ್ಕೆ ನೀಡಿದ ಭೇಟಿಗೆ ಕ್ರಮವಾಗಿ 4,35,35,765 ರೂ. ಮತ್ತು 5,34,71,726 ರೂ. ವೆಚ್ಚವಾಗಿದೆ.

ಆಗಸ್ಟ್ 21 ಮತ್ತು 23, 2024 ರ ನಡುವೆ ಪೋಲೆಂಡ್ ಮತ್ತು ಉಕ್ರೇನ್ ರಾಷ್ಟ್ರಕ್ಕೆ ಭೇಟಿ ನೀಡಿದ್ದು, ಕ್ರಮವಾಗಿ ರೂ. 10,10,18,686) ಮತ್ತು ರೂ. 2,52,01,169 ವೆಚ್ಚವಾಗಿದೆ.

ಸೆಪ್ಟೆಂಬರ್ 3 ರಿಂದ 5 ರವರೆಗೆ ಬ್ರೂನಿ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಿದ್ದು, ಇದಕ್ಕಾಗಿ 5,02,47,410 ರೂ.ಗಳನ್ನು ಮತ್ತು 7,75,21,329 ರೂ.ಗಳನ್ನು ಖರ್ಚು ಮಾಡಲಾಗಿದೆ.

ಸೆಪ್ಟೆಂಬರ್ 21 ರಿಂದ 23 ರವರೆಗಿನ ಅಮೆರಿಕ ಭೇಟಿಗಾಗಿ 15,33,76,348 ರೂ.ಗಳನ್ನು ಮತ್ತು ಅಕ್ಟೋಬರ್ 10-11 ರ ಅವಧಿಯಲ್ಲಿ ಲಾವೋ ಡಿಪಿಆರ್ ಭೇಟಿಗಾಗಿ 3,00,73,096 ರೂ.ಗಳನ್ನು, ಅಕ್ಟೋಬರ್ 22-23 ರಂದು ರಷ್ಯಾ ಭೇಟಿಗಾಗಿ 10,74,99,171 ರೂ.ಗಳನ್ನು ಖರ್ಚು ಮಾಡಲಾಗಿದೆ.

ನವೆಂಬರ್ 16 ರಿಂದ 21, 2024 ರವರೆಗೆ ಪ್ರಧಾನಿಯವರು ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಭೇಟಿ ನೀಡಿದ್ದು, ನೈಜೀರಿಯಾದಲ್ಲಿ 4,46,09,640 ರೂ., ಬ್ರೆಜಿಲ್‌ನಲ್ಲಿ 5,51,86,592 ರೂ. ಮತ್ತು ಗಯಾನಾದಲ್ಲಿ 5,45,91,495 ರೂ. ವೆಚ್ಚವಾಗಿದೆ.

ಡಿಸೆಂಬರ್ 22-22ರ ಅವಧಿಯಲ್ಲಿ ಅವರ ಕುವೈತ್ ಭೇಟಿಗೆ ಸರ್ಕಾರ 2, 54, 59,263 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

2023 ರಲ್ಲಿ ಪ್ರಧಾನಿ ಮೋದಿ ಅವರು ಮೇ 19 ರಿಂದ ಡಿಸೆಂಬರ್ 1, 2023 ರವರೆಗೆ ಒಟ್ಟು 11 ದೇಶಗಳಿಗೆ ಆರು ಭೇಟಿಗಳನ್ನು ನೀಡಿದ್ದಾರೆ. ಇದರ ವೆಚ್ಚ (ಜಪಾನ್) ರೂ 17,19,33,365, (ಆಸ್ಟ್ರೇಲಿಯಾ) ರೂ 6,06,92,057, (ಅಮೆರಿಕಾ) ರೂ 22,89,68,509, (ಫ್ರಾನ್ಸ್) ರೂ 13,74,81,530, (ದಕ್ಷಿಣ ಆಫ್ರಿಕಾ) ರೂ 6,11,37,355 ಮತ್ತು (ಯುಎಇ )ರೂ 4,28,88,197 ಆಗಿದೆ ಎಂದು ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ವಿಜಯಪುರ: 'ಥೈಲ್ಯಾಂಡ್ ಮಾವಿನ ತಳಿ' ಬೆಳೆದು ವರ್ಷವಿಡೀ ಆದಾಯ ಗಳಿಸುವ ರೈತ ನವೀನ್! ಯಶೋಗಾಥೆ

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

SCROLL FOR NEXT