ಅಪಘಾತಕ್ಕೀಡಾದ ಕಾರು 
ದೇಶ

Mumbai: ಗೂಗಲ್ ಮ್ಯಾಪ್ ಎಡವಟ್ಟು; ಕಂದಕಕ್ಕೆ ಉರುಳಿದ Audi ಕಾರು! ಮಹಿಳೆ ಪ್ರಾಣಪಾಯದಿಂದ ಪಾರು

ಗೂಗಲ್ ಮ್ಯಾಪ್ ಸೂಚನೆ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಅತ್ಯಾಧುನಿಕ ಹೈ ಎಂಡ್ ಕಾರೊಂದು ಕಂದಕಕ್ಕೆ ಬಿದ್ದಿರುವ ಘಟನೆ ನವಿ ಮುಂಬೈಯಲ್ಲಿ ನಡೆದಿದೆ.

ಮುಂಬೈ: ಗೂಗಲ್ ಮ್ಯಾಪ್ ಜನರನ್ನು ದಾರಿ ತಪ್ಪಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ.

ಗೂಗಲ್ ಮ್ಯಾಪ್ ಸೂಚನೆ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಅತ್ಯಾಧುನಿಕ ಹೈ ಎಂಡ್ ಕಾರೊಂದು ಕಂದಕಕ್ಕೆ ಬಿದ್ದಿರುವ ಘಟನೆ ನವಿ ಮುಂಬೈಯಲ್ಲಿ ನಡೆದಿದೆ. ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನ ಬೇಲಾಪುರ ಪ್ರದೇಶದಲ್ಲಿ ಶುಕ್ರವಾರ ನಸುಕಿನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಗೂಗಲ್ ಮ್ಯಾಪ್ ನೆರವಿನಿಂದ ತೋರಿಸಿದ ದಾರಿಯಲ್ಲಿ ಸಾಗಿ ತಪ್ಪಾಗಿ ಏಕಾಏಕಿ ತಿರುವು ಪಡೆದುಕೊಂಡ ಕಾರು ಕಾರು ಸೇತುವೆಯಿಂದ ನದಿಗೆ ಉರುಳಿದೆ.

ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಡಲ ಭದ್ರತಾ ತಂಡದಿಂದ ನೆರವಿನಿಂದ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ಬೇಲಾಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿ ತೇಲುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಆಕೆ ಸುರಕ್ಷಿತವಾಗಿದ್ದು, ಕ್ರೇನ್ ಮೂಲಕ ಕಾರನ್ನು ಹಳ್ಳದಿಂದ ಹೊರತೆಗೆಯಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.

ನವಿ ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಸಲೂನ್ ವ್ಯವಹಾರ ನಡೆಸುತ್ತಿರುವ ಮಹಿಳೆ ತನ್ನ ಕಾರಿನಲ್ಲಿ ಬೇಲಾಪುರದಿಂದ ಉಲ್ವೆ ಮನೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT