ಸಾಂದರ್ಭಿಕ ಚಿತ್ರ 
ದೇಶ

ನವದೆಹಲಿ: ಏರ್‌ ಇಂಡಿಯಾ ಬೋಯಿಂಗ್‌ ವಿಮಾನದಲ್ಲಿ ತಾಂತ್ರಿಕ ದೋಷ; ಟೇಕಾಫ್ ಸ್ಥಗಿತ

ಇಂದು ದೆಹಲಿಯಿಂದ ಲಂಡನ್‌ಗೆ ಹಾರಾಟ ಆರಂಭಿಸಿದ AI2017 ವಿಮಾನದಲ್ಲಿ ಕೂಡಲೇ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ತದನಂತರ ಅದು ಬೇ (bay) ಗೆ ಮರಳಿದೆ.

ನವದೆಹಲಿ: ಲಂಡನ್‌ಗೆ ತೆರಳಬೇಕಿದ್ದ ಏರ್‌ ಇಂಡಿಯಾದ ಬೋಯಿಂಗ್‌ 787-9 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಸ್ಥಗಿತಗೊಳಿಸಿದ ಘಟನೆ ಗುರುವಾರ ನಡೆದಿದೆ.

ಇಂದು ದೆಹಲಿಯಿಂದ ಲಂಡನ್‌ಗೆ ಹಾರಾಟ ಆರಂಭಿಸಿದ AI2017 ವಿಮಾನದಲ್ಲಿ ಕೂಡಲೇ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ತದನಂತರ ಅದು ಬೇ (bay) ಗೆ ಮರಳಿದೆ.

ಕಾಕ್‌ಪಿಟ್ ಸಿಬ್ಬಂದಿ ಮಾರ್ಗಸೂಚಿಗಳನ್ನು (Sop) ಅನುಸರಿಸಿ ಟೇಕಾಫ್ ಸ್ಥಗಿತಕ್ಕೆ ನಿರ್ಧರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆಗಾಗಿ ಲ್ಯಾಂಡಿಂಗ್ ಮಾಡಿದರು ಎಂದು ಏರ್‌ಲೈನ್ ವಕ್ತಾರರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಮಾನದ ಬದಲಿಗೆ ಪರ್ಯಾಯ ವಿಮಾನವನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ. ಈ ಅನಿರೀಕ್ಷಿತ ವಿಳಂಬದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಏರ್ ಲೈನ್ಸ್ ವಿಷಾಧ ವ್ಯಕ್ತಪಡಿಸಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ತಿಳಿದುಬಂದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Karur stampede: ದುರಂತದ ಬಳಿಕ ಕರೂರಿಗೆ ಭೇಟಿ ನೀಡಲಿಲ್ಲ ಏಕೆಂದರೆ...: ಡಿಎಂಕೆ ವಿರುದ್ಧ ನಟ ವಿಜಯ್ ವಾಗ್ದಾಳಿ

'ಹೆಲಿಕಾಪ್ಟರ್ ಸಿದ್ದರಾಮಯ್ಯ': ರಸ್ತೆಯಲ್ಲಿ ಹೋದ್ರೆ ಜನರ ಘೇರಾವ್ ಭಯದಿಂದ ವೈಮಾನಿಕ ಸಮೀಕ್ಷೆ ನಡೆಸಿದ್ರಾ? ಬಿಜೆಪಿ

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ನಿರಾಕರಣೆ: ಅ. 9ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!

SCROLL FOR NEXT