ನವದೆಹಲಿ: ಇಂಡಿಗೋದಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿದ್ದ ಯುವತಿಯೊಬ್ಬಳುಸ ಪೈಲಟ್ ಆಗುವ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಖುಷ್ಬು ಪ್ರಧಾನ್ ಅವರ ವೃತ್ತಿಜೀವನದ ಬದಲಾವಣೆ ಇದೀಗ ಸಾಕಷ್ಟು ಮಂದಿಗೆ ಸ್ಪೂರ್ತಿ ನೀಡಿದೆ.
ತಾವು ಪೈಲಟ್ ಆಗುತ್ತಿರುವ ವಿಚಾರವನ್ನು ಖುಷ್ಬು ಪ್ರಧಾನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಖುಷ್ಬು ಅವರು ಗಗನಸಖಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಅವರು ಪೈಲಟ್ ಸಮವಸ್ತ್ರಕ್ಕೆ ಬದಲಾಗುತ್ತಾರೆ. ಈ 18 ವರ್ಷದ ಹುಡುಗಿಗೆ ತಾನು ಮುಂದೊಂದು ದಿನ ಪೈಲಟ್ ಆಗುವೆ ಎಂಬುದು ತಿಳಿದಿರಲಿಲ್ಲ ಎಂದು ಅವರು ವೀಡಿಯೋದ ಮೇಲೆ ಬರೆದುಕೊಂಡಿದ್ದಾರೆ.
ವರ್ಷಗಳ ಕಾಯುವಿಕೆ, ಕಠಿಣ ಪರಿಶ್ರಮ, ತಾಳ್ಮೆ, ಸ್ಥಿರತೆ ಮತ್ತು ಕುಟುಂಬದ ಬೆಂಬಲ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಈ ಆಶೀರ್ವಾದಗಳೊಂದಿಗೆ, ನಾನು ಒಬ್ಬ ಮಹಾನ್ ಮತ್ತು ಹೆಮ್ಮೆಯ ಪೈಲಟ್ ಆಗುತ್ತೇನೆ ಎಂದು ನನಗೆ ಖಚಿತವಾಗಿದೆ. ನನ್ನ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ನನಗೆ ಖಚಿತವಾಗಿದೆ. ಏಕೆಂದರೆ, ನಾನು ಅದಕ್ಕಾಗಿ ಶ್ರಮಿಸಿದ್ದೇನೆ. ನಾನು ಬಹಳಷ್ಟು ಅನುಭವಿಸಿದ್ದೇನೆ, ಆದರೆ, ಪ್ರತಿ ಬಾರಿಯೂ ನಾನು ಬಲಶಾಲಿಯಾಗಿ ಹೊರ ಬಂದಿದ್ದೇನೆ. ನನಗೆ ಬರೆಯಲು ಒಂದು ಕಥೆ ಇದೆ, ರಚಿಸಲು ಒಂದು ಪರಂಪರೆ ಇದೆ. ಆದರೆ ಈ ಪ್ರಯಾಣವು ಕೇವಲ ನನ್ನದಲ್ಲ.
ಪೈಲಟ್ ಆಗುವುದು ಕೇವಲ ನನ್ನ ಕನಸು ಆಗಿರಲಿಲ್ಲ, ಅದು ನನ್ನ ಕುಟುಂಬದ ಕನಸು ಕೂಡ ಆಗಿತ್ತು. ಅವರು ಕೂಡ ಈ ಕನಸಿಗಾಗಿ ನನ್ನೊಂದಿಗೆ ಶ್ರಮಿಸಿದ್ದಾರೆಂದು ಹೇಳಿಕೊಂಡಿದ್ದಾರೆ.
ಖುಷ್ಬು ಅವರ ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಹಲವರು ಶುಭ ಹಾರೈಸಿದ್ದರೆ, ಇನ್ನೂ ಕೆಲವರು ಪ್ರಶ್ನೆಗಳನ್ನು ಕೇಳಿದ್ದಾರೆ.
ಪೈಲಟ್ ಆಗುವುದು ನನ್ನ ಕನಸು, ಆದರೆ ಪೈಲಟ್ ತರಬೇತಿಗಾಗಿ ಹಣವನ್ನು ಉಳಿಸಲು ನಾನು ಮೊದಲು ಸಿಬ್ಬಂದಿಯಾಗಿ ಕೆಲಸ ಮಾಡುತ್ತೇನೆ. ನೀವು ಈಗ ನನಗೆ ಸ್ಫೂರ್ತಿ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.
ಈ ನಡುವೆ ಖುಷ್ಬು ಪ್ರಧಾನ್ ಅವರು ಕೆಡೆಟ್ ಆಗಿ ಸಹಿ ಹಾಕಿದ್ದಾಪೆ, 6E ಪೈಲಟ್ ಆಗಿ ನೇಮಕಗೊಳ್ಳಲು ಅರ್ಹತೆ ಪಡೆಯುವ ಮೊದಲು ಅವರು ತಮ್ಮ ತರಬೇತಿಯನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಇಂಡಿಯೋ ಮೂಲಗಳು ಮಾಹಿತಿ ನೀಡಿವೆ.