ಅಹಮದಾಬಾದ್: ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, ಓರ್ವ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ನಾಗರಿಕರು ಹಾಗೂ ವಿಮಾನದ ಸಿಬ್ಬಂದಿ ಸೇರಿದಂತೆ 242 ಪ್ರಯಾಣಿಕರಿದ್ದು ಒಟ್ಟು 241 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಆದರೆ ಪವಾಡ ಸದೃಶ್ಯ ರಮೇಶ್ ಎಂಬಾತ ಎಮೆರ್ಜೆನ್ಸಿ ವಿಂಡೋದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಮೇಶ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಪರ್ಯಾಸ ಎಂದರೆ ಹಲವರು ವಿಮಾನ ಪ್ರಯಾಣಕ್ಕೂ ಮುನ್ನ ತೆಗೆದುಕೊಂಡ ಕೆಲ ಫೋಟೋಗಳು ಮತ್ತು ವಿಡಿಯೋಗಳು ಅವರ ಅಂತಿಮ ಕ್ಷಣಕ್ಕೆ ಸಾಕ್ಷಿಯಾಗಿವೆ. ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ವಿಮಾನದಲ್ಲಿ ಕುಳಿತಿದ್ದಾಗ ಅವರ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸೆಲ್ಫಿ ವಿಡಿಯೋ ತೆಗೆದುಕೊಂಡು ಮಾಜಿ ಸಿಎಂ ಜೊತೆ ಪ್ರಯಾಣಿಸುತ್ತಿರುವುದಾಗಿ ತಮ್ಮ ಪೋಷಕರಿಗೆ ಫೋಟೋ ಕಳುಹಿಸಿದ್ದರು. ಈ ಫೋಟೋ ಇದೀಗ ವಿಜಯ್ ರೂಪಾನಿ ಅವರ ಕೊನೆಯ ಕ್ಷಣಕ್ಕೆ ಸಾಕ್ಷಿಯಾಗಿದೆ.
ಮತ್ತೊಂದೆಡೆ, ವಿಮಾನ ನಿಲ್ದಾಣದಲ್ಲಿ ಇಬ್ಬರು ಬ್ರಿಟನ್ ಪ್ರಜೆಗಳು ಖುಷಿ ಖುಷಿಯಾಗಿ ಮಾತನಾಡುತ್ತಾ ಸ್ವದೇಶಕ್ಕೆ ತೆರಳುತ್ತಿದ್ದೇವೆ Goodbye India ಅಂತ ಹೇಳಿ ವಿಡಿಯೋ ಮಾಡಿದ್ದರು. ಆದರೆ ದುರ್ವಿಧಿ ಅವರು ವಿಮಾನ ದುರಂತದಲ್ಲಿ ಸುಟ್ಟು ಕರಕಲಾಗಿದ್ದಾರೆ. ಪ್ರತಿಯೊಬ್ಬರ ಡಿಎನ್ಎ ಪರೀಕ್ಷೆ ಮಾಡಿ ಅವರ ಗುರುತು ಪತ್ತೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇಬ್ಬರು ಪರಸ್ಪರ ಖುಷಿ ಪಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.