ಮುಂಬೈ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ AI-171 ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರ ಮುಂಬೈನಲ್ಲಿರುವ ಅವರ ಮನೆಗೆ ತರಲಾಯಿತು.
ಅವರ ನಿವಾಸದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಸ್ಥಳದಲ್ಲಿ ಜನಸಮೂಹ ಜಮಾಯಿಸಿರುವುದನ್ನು ತೋರಿಸುತ್ತವೆ, ಅವರ ಕುಟುಂಬ ಸದಸ್ಯರು ಅವರ ಭಾವಚಿತ್ರದ ಮುಂದೆ ನಿಂತು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಕ್ಲೈವ್ ಕುಂದರ್ ಗೋರೆಗಾಂವ್ (ಪಶ್ಚಿಮ) ಪ್ರದೇಶದಲ್ಲಿ ತಮ್ಮ ತಾಯಿ-ತಂದೆಯೊಂದಿಗೆ ವಾಸಿಸುತ್ತಿದ್ದರು.
ಅವರ ಮೃತದೇಹವನ್ನು ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣಕ್ಕೆ ತಂದು ಅವರನ್ನು ಅವರ ನಿವಾಸಕ್ಕೆ ಸಾಗಿಸಲಾಯಿತು.
ಅಹಮದಾಬಾದ್‌ನಲ್ಲಿ ಸಂಭವಿಸಿದ ಮಾರಕ ಏರ್ ಇಂಡಿಯಾ ಅಪಘಾತದ ಒಂದು ವಾರದ ನಂತರ, 210 ಮೃತದೇಹಗಳ ಡಿಎನ್‌ಎ ಮಾದರಿಗಳನ್ನು ಅವರ ಕುಟುಂಬ ಸದಸ್ಯರೊಂದಿಗೆ ಹೋಲಿಸಲಾಗಿದೆ. 187 ಮೃತದೇಹಗಳನ್ನು ಪತ್ತೆಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಗುಜರಾತ್ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರುಷಿಕೇಶ್ ಪಟೇಲ್ ತಿಳಿಸಿದ್ದಾರೆ.