1967 ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 19 ರ ಅಡಿಯಲ್ಲಿ ಎನ್‌ಐಎ ಇಬ್ಬರನ್ನು ಬಂಧಿಸಿದೆ 
ದೇಶ

ಪಹಲ್ಗಾಮ್ ದಾಳಿ: LeT ಉಗ್ರರಿಗೆ ಆಶ್ರಯ ನೀಡಿದ ಇಬ್ಬರ ಬಂಧನ; NIA ತನಿಖೆಯಲ್ಲಿ ಪ್ರಗತಿ

ವಿಚಾರಣೆಯ ಸಮಯದಲ್ಲಿ, ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ಗುರುತುಗಳನ್ನು ಇಬ್ಬರೂ ಬಹಿರಂಗಪಡಿಸಿದ್ದಾರೆ.

ಶ್ರೀನಗರ: ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಉಗ್ರರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ, ಉಗ್ರರು ಹೋಗಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಿ 25 ಪ್ರವಾಸಿಗರು ಮತ್ತು ಸ್ಥಳೀಯ ಪೋನಿವಾಲಾನನ್ನು ಕೊಂದಿದ್ದರು.

ಬಂಧಿತ ಇಬ್ಬರು ವ್ಯಕ್ತಿಗಳನ್ನು ಪಹಲ್ಗಾಮ್‌ನ ಬಟ್ಕೋಟ್‌ನ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಹಿಲ್ ಪಾರ್ಕ್‌ನ ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ಗುರುತುಗಳನ್ನು ಇಬ್ಬರೂ ಬಹಿರಂಗಪಡಿಸಿದ್ದಾರೆ. ಅವರು ಲಷ್ಕರ್-ಎ-ತೈಬಾ (LeT) ಗೆ ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂದು ಅವರು ದೃಢಪಡಿಸಿದ್ದಾರೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

NIA ತನಿಖೆಯ ಪ್ರಕಾರ, ಪರ್ವೈಜ್ ಮತ್ತು ಬಶೀರ್ ಇಬ್ಬರೂ ದಾಳಿಗೆ ಮೊದಲು ಹಿಲ್ ಪಾರ್ಕ್‌ನಲ್ಲಿರುವ ಗುಡಿಸಲಿನಲ್ಲಿ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ತಿಳಿದೇ ಆಶ್ರಯ ನೀಡಿದ್ದರು. ಈ ಇಬ್ಬರು ವ್ಯಕ್ತಿಗಳು ಭಯೋತ್ಪಾದಕರಿಗೆ ಆಹಾರ, ಆಶ್ರಯ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಿದ್ದರು, ಅವರು ಏಪ್ರಿಲ್ 22 ರಂದು ಮಧ್ಯಾಹ್ನ ಪ್ರವಾಸಿಗರನ್ನು ಅವರ ಧಾರ್ಮಿಕ ಗುರುತಿನ ಆಧಾರದ ಮೇಲೆ ಆರಿಸಿ ಕೊಂದುಹಾಕಿದ್ದರು. ಇದು ಇದುವರೆಗಿನ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ಪರ್ವೈಜ್ ಮತ್ತು ಬಶೀರ್ ಇಬ್ಬರನ್ನೂ 1967 ರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 19 ರ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು NIA ವಕ್ತಾರರು ತಿಳಿಸಿದ್ದಾರೆ.

ಏಪ್ರಿಲ್ 22 ರಂದು, ಮಿನಿ ಸ್ವಿಟ್ಜರ್ಲೆಂಡ್ ಎಂದೂ ಕರೆಯಲ್ಪಡುವ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲುಗಳಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ವಿವಿಧ ರಾಜ್ಯಗಳಿಗೆ ಸೇರಿದ 25 ಪ್ರವಾಸಿಗರು ಮತ್ತು ದಾಳಿಕೋರರಲ್ಲಿ ಒಬ್ಬರ ರೈಫಲ್ ನ್ನು ಕಸಿದುಕೊಂಡು ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸಿದ ಸ್ಥಳೀಯ ಪೋನಿ ವಾಲಾ ಸೈಯದ್ ಆದಿಲ್ ಷಾ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು. ದಾಳಿಯಲ್ಲಿ 16 ಜನರು ಸಹ ಗಾಯಗೊಂಡಿದ್ದರು.

ಏಪ್ರಿಲ್ 22 ರ ಪಹಲ್ಗಾಮ್ ದಾಳಿಯಲ್ಲಿ ಮೂವರು ಪಾಕಿಸ್ತಾನಿಗಳಾದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್, ಅಲಿ ಭಾಯಿ ಅಲಿಯಾಸ್ ತಲ್ಹಾ ಭಾಯಿ, ಆಸಿಫ್ ಫೌಜಿ ಮತ್ತು ಅನಂತನಾಗ್ ನಿವಾಸಿ ಸ್ಥಳೀಯ ಉಗ್ರಗಾಮಿ ಅಬಿದ್ ಹುಸೇನ್ ಥೋಕರ್ ಸೇರಿದಂತೆ ನಾಲ್ವರು ಉಗ್ರಗಾಮಿಗಳು ಭಾಗಿಯಾಗಿದ್ದರು ಎಂದು ಭದ್ರತಾ ಪಡೆಗಳು ಶಂಕಿಸಿವೆ.

ಪ್ರಕರಣದ ತನಿಖೆಯನ್ನು NIA ವಹಿಸಿಕೊಂಡಿದ್ದು, ತನಿಖೆಗಾಗಿ ಅಧಿಕಾರಿಗಳು ಪಹಲ್ಗಾಮ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. ತನಿಖೆಯ ವೇಗವನ್ನು ಪರಿಶೀಲಿಸಲು ಎನ್ ಐಎ ಮುಖ್ಯಸ್ಥ ಸದಾನಂದ ವಸಂತ್ ಡೇಟ್ ಕೂಡ ದಾಳಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಾಶಮಾಡಲು ಭಾರತೀಯ ಸೇನೆ ಮೇ 7 ರಂದು ಆಪರೇಷನ್ ಸಿಂಧೂರ್ ನ್ನು ನಡೆಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿನಿಮಾ ಟಿಕೆಟ್, ಟಿವಿ ಚಾನಲ್ ಗಳ ಮೇಲೆ ಶೇ.2 ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ಮುಂದು: ಇದರ ಪರಿಣಾಮ ಏನು...?

Israel 'must finish the job: ವಿಶ್ವಸಂಸ್ಥೆಯಲ್ಲಿ ನೆತನ್ಯಾಹು 'ಉದ್ಧಟತನದ ಭಾಷಣ'; ಅನೇಕ ರಾಷ್ಟ್ರಗಳ ಪ್ರತಿನಿಧಿಗಳು walk out!

'ಭಾರತ ಶತ್ರು ರಾಷ್ಟ್ರ.. Donald Trump ನೊಬೆಲ್ ಪ್ರಶಸ್ತಿಗೆ ಅರ್ಹ'; ಪರಮಾಣು ಯುದ್ಧದ ಉಲ್ಲೇಖ ಮಾಡಿದ ಪಾಕ್ ಪ್ರಧಾನಿ Shehbaz Sharif

ಅತ್ತ ವಿಶ್ವಸಂಸ್ಥೆಯಲ್ಲಿ Netanyahu ಭಾಷಣ, ಇತ್ತ Gazaದಲ್ಲಿ Israeli Army ಕಂಡು ಕೇಳರಿಯದ ಕ್ರಮ!

Asia Cup 2025: Abhishek Sharma, Tilak Varma ಭರ್ಜರಿ ಬ್ಯಾಟಿಂಗ್, Srilanka ಗೆ ಬೃಹತ್ ಗುರಿ ನೀಡಿದ ಭಾರತ

SCROLL FOR NEXT