ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಉದಯಪುರ: ಫ್ರೆಂಚ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಸ್ಟಿಂಗ್ ಕಂಪನಿ ಮಾಲೀಕನ ಬಂಧನ

ವಿಚಾರಣೆಯ ಸಮಯದಲ್ಲಿ ಆರೋಪಿ ಪುಷ್ಪರಾಜ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 25 Jun 2025, 6:44 pm

ಉದಯಪುರ: ಜಾಹೀರಾತು ಚಿತ್ರೀಕರಣಕ್ಕಾಗಿ ಉದಯಪುರಕ್ಕೆ ಬಂದಿದ್ದ ಫ್ರೆಂಚ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಿತ್ತೋರ್‌ಗಢದ 29 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಚಿತ್ತೋರ್‌ಗಢದ ಗ್ಯಾಂಗ್ರಾರ್ ನಿವಾಸಿ ಪುಷ್ಪರಾಜ್ ಅಲಿಯಾಸ್ ಸಿದ್ಧಾರ್ಥ್ ಓಜಾ ಎಂದು ಗುರುತಿಸಲಾಗಿದ್ದು, ಆರೋಪಿಯು ಕಾಸ್ಟಿಂಗ್ ಕಂಪನಿಯ ಮಾಲೀಕನಾಗಿದ್ದು, ಸಿನಿಮಾ, ಮ್ಯೂಸಿಕ್ ಆಲ್ಬಂ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪುಷ್ಪರಾಜ್ ಅವರ ಕಂಪನಿಯು ಜೂನ್ 22 ರಂದು ಉದಯಪುರದ ವಿವಿಧ ಸ್ಥಳಗಳಲ್ಲಿ, ಲೇಕ್ ಪಿಚೋಲಾ, ಸಜ್ಜನ್‌ಗಢ ಕೋಟೆ ಮತ್ತು ಸ್ಥಳೀಯ ರೆಸ್ಟೋರೆಂಟ್‌ಗಳಲ್ಲಿ ನಡೆದ ಮೊಬೈಲ್ ಜಾಹೀರಾತು ಚಿತ್ರೀಕರಣಕ್ಕಾಗಿ ಮಹಿಳೆಯನ್ನು ನೇಮಿಸಿಕೊಂಡಿದೆ ಎಂದು ಉದಯಪುರ ಎಸ್‌ಪಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.

Advertisement

Advertisement

Also Read

ಒಡಿಶಾ: ಬೀಚ್‌ ಬಳಿ ಸ್ನೇಹಿತನ ಸಮ್ಮುಖದಲ್ಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, 8 ಮಂದಿ ಬಂಧನ

ಚಿತ್ರೀಕರಣದ ನಂತರ, ಕಂಪನಿಯ ಸಿಬ್ಬಂದಿ ಟೈಗರ್ ಹಿಲ್ ಬಳಿಯ ಕೆಫೆಯೊಂದರಲ್ಲಿ ಪಾರ್ಟಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪಾರ್ಟಿಯ ನಂತರ, ಪುಷ್ಪರಾಜ್ ಫ್ರೆಂಚ್ ಮಹಿಳೆಯನ್ನು ಸುಖೇರ್‌ನಲ್ಲಿರುವ ತನ್ನ ಫ್ಲಾಟ್‌ಗೆ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಪುಷ್ಪರಾಜ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement