ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ISS ಗೆ ಪ್ರಯಾಣ ಬೆಳೆಸಿರುವುದು 
ದೇಶ

Shubhanshu Shukla ಇತಿಹಾಸ: 41 ವರ್ಷಗಳ ನಂತರ ISSಗೆ ಪಯಣಿಸಿದ ಭಾರತೀಯ ಗಗನಯಾತ್ರಿ; Video

ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಶುಕ್ಲಾ, ಮಾಜಿ ನಾಸಾ ಗಗನಯಾತ್ರಿ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಆಕ್ಸಿಯಮ್ -4 ಮಿಷನ್‌ನ ಭಾಗವಾಗಿದ್ದಾರೆ.

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬುಧವಾರ ಆಕ್ಸಿಯಮ್ ಸ್ಪೇಸ್‌ನ ವಾಣಿಜ್ಯ ಕಾರ್ಯಾಚರಣೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇತರ ಮೂವರೊಂದಿಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ.

ಬಹಳ ವಿಳಂಬವಾಗಿದ್ದ ಆಕ್ಸಿಯಮ್ -4 ಮಿಷನ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 12:01 ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಕಡೆಗೆ ಹಾರಿತು, ಲಕ್ನೋ ಮೂಲದ ಶುಭಾಂಶು ಶುಕ್ಲಾ ಅವರ ಸಿಟಿ ಮಾಂಟೆಸ್ಸರಿ ಶಾಲೆ ಸೇರಿದಂತೆ ಪ್ರಪಂಚದಾದ್ಯಂತ ಆಯೋಜಿಸಲಾದ ಉಡಾವಣೆ ವೀಕ್ಷಣೆ ಕಾರ್ಯಕ್ರಮದಲ್ಲಿ ಹರ್ಷೋದ್ಗಾರಗಳ ನಡುವೆ, ಅವರ ಪೋಷಕರು ಐತಿಹಾಸಿಕ ಉಡಾವಣೆಯನ್ನು ವೀಕ್ಷಿಸಿದರು.

ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಶುಕ್ಲಾ, ಮಾಜಿ ನಾಸಾ ಗಗನಯಾತ್ರಿ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಮೂರು ರಾಷ್ಟ್ರಗಳಿಗೆ ಬಾಹ್ಯಾಕಾಶಕ್ಕೆ ಮರಳುವಿಕೆಯನ್ನು ಸೂಚಿಸುವ ಆಕ್ಸಿಯಮ್ -4 ಮಿಷನ್‌ನ ಭಾಗವಾಗಿದ್ದಾರೆ.

1984 ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಸಲ್ಯುಟ್ -7 ಬಾಹ್ಯಾಕಾಶ ನಿಲ್ದಾಣದ ಭಾಗವಾಗಿ ರಾಕೇಶ್ ಶರ್ಮಾ ಎಂಟು ದಿನಗಳ ಕಾಲ ಕಕ್ಷೆಯಲ್ಲಿದ್ದರು. 41 ವರ್ಷಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ಗಗನಯಾತ್ರಿ ಶುಭಾಂಶು ಶುಕ್ಲಾ ಆಗಿದ್ದಾರೆ.

ನಾಳೆ ಜೂನ್ 26 ರ ಗುರುವಾರ ಭಾರತೀಯ ಕಾಲಮಾನ ಸುಮಾರು ಸಂಜೆ 4.30 ಕ್ಕೆ ಕಕ್ಷೆಗೆ ತಲುಪಲಿದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.

ಆಕ್ಸಿಯಮ್-4 ಮಿಷನ್ ನ್ನು ಮೇ 29 ರಂದು ಉಡಾವಣೆ ಮಾಡಲು ಯೋಜಿಸಲಾಗಿತ್ತು. ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸಂಪೂರ್ಣವಾಗಿ ಸಿದ್ಧವಾಗಿಲ್ಲದ ಕಾರಣ ಜೂನ್ 8 ಕ್ಕೆ ಮುಂದೂಡಬೇಕಾಯಿತು. ರಾಕೆಟ್‌ನ ಆರೋಹಣ ಮಾರ್ಗದಲ್ಲಿ ಹೆಚ್ಚಿನ ಗಾಳಿ ಬೀಸಿದ್ದರಿಂದ ಕಾರ್ಯಾಚರಣೆಯನ್ನು ಮುಂದೂಡಬೇಕಾಯಿತು.

ಉಡಾವಣಾ ರಾಕೆಟ್ ಮತ್ತು ಬಾಹ್ಯಾಕಾಶ ಕ್ಯಾಪ್ಸುಲ್‌ನ ಪೂರೈಕೆದಾರರಾದ ಸ್ಪೇಸ್‌ಎಕ್ಸ್, ಫಾಲ್ಕನ್-9 ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆಯನ್ನು ಪತ್ತೆಹಚ್ಚಿದಾಗ ಮತ್ತು ಐಎಸ್ ಎಸ್ ನ ಹಳೆಯ ರಷ್ಯಾದ ಮಾಡ್ಯೂಲ್‌ನಲ್ಲಿನ ಕೆಲವು ಸಮಸ್ಯೆಗಳಿಂದಾಗಿ ಜೂನ್ 10 ಮತ್ತು ಜೂನ್ 11 ರಂದು ಉಡಾವಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಈ ಮಿಷನ್ ಉಡಾವಣೆಯಾಗಲಿದೆ. ಕಂಪನಿಯ ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಮಾಡಿದ ನಂತರ ಸಿಬ್ಬಂದಿ ಹೊಸ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಪ್ರಯಾಣಿಸುತ್ತಾರೆ.

ನಾಸಾ ಮತ್ತು ರೋಸ್ಕೋಸ್ಮೋಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಹಕಾರ ಮತ್ತು ಸಹಯೋಗದ ದೀರ್ಘ ಇತಿಹಾಸವನ್ನು ಹೊಂದಿವೆ. ಆಕ್ಸಿಯಮ್ ಮಿಷನ್ 4 ಉಡಾವಣೆ ಮತ್ತು ಡಾಕಿಂಗ್ ಮುಂದುವರಿಯುತ್ತದೆ ಎಂದು ನಾಸಾದ ಹಂಗಾಮಿ ಆಡಳಿತಾಧಿಕಾರಿ ಜಾನೆಟ್ ಪೆಟ್ರೋ ಹೇಳಿದ್ದಾರೆ. ಡಾಕಿಂಗ್ ಮಾಡಿದ ನಂತರ, ಖಾಸಗಿ ಗಗನಯಾತ್ರಿಗಳು ಕಕ್ಷೆಯಲ್ಲಿರುವ ಪ್ರಯೋಗಾಲಯದಲ್ಲಿ ಸುಮಾರು ಎರಡು ವಾರಗಳನ್ನು ಕಳೆಯಲು ಯೋಜಿಸಿದ್ದಾರೆ, ವಿಜ್ಞಾನ, ಸಂವಹನ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಒಳಗೊಂಡಿರುವ ಕಾರ್ಯಾಚರಣೆಯನ್ನು ಅಲ್ಲಿ ನಡೆಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT