ಅಡ್ಡಾದಿಡ್ಡಿ ಓಡಿದ ಆನೆ 
ದೇಶ

ರಥಯಾತ್ರೆ ವೇಳೆ ಅಡ್ಡಾದಿಡ್ಡಿ ಓಡಿದ ಆನೆಗಳು: ಹಲವರಿಗೆ ಗಾಯ; Video ವೈರಲ್

ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಖಾಡಿಯಾ ಪ್ರದೇಶದಲ್ಲಿ ಆನೆ ನಿಯಂತ್ರಣ ಕಳೆದುಕೊಂಡು ಭಯಭೀತವಾಗಿ ಅಡ್ಡಾದಿಟ್ಟಿ ಓಡಿದೆ.

ಅಹ್ಮದಾಬಾದ್: ಅಹಮದಾಬಾದ್​ನಲ್ಲಿ ನಡೆದ 148ನೇ ಜಗನ್ನಾಥ ರಥಯಾತ್ರೆ ಮೆರವಣಿಗೆ ವೇಳೆ ಆನೆಯೊಂದು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿದ್ದು, ಈ ವೇಳೆ ಹಲವರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಖಾಡಿಯಾ ಪ್ರದೇಶದಲ್ಲಿ ಆನೆ ನಿಯಂತ್ರಣ ಕಳೆದುಕೊಂಡು ಭಯಭೀತವಾಗಿ ಅಡ್ಡಾದಿಟ್ಟಿ ಓಡಿದೆ. ಈ ವೇಳೆ ಮಾವುತರೂ ಕೂಡ ಆನೆ ಹಿಂದೆ ಓಡಿದ್ದು, ಆನೆಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆದರೆ, ನಿಯಂತ್ರಣಕ್ಕೆ ಸಿಕ್ಕಿಲ್ಲ. ಬಳಿಕ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರದೇಶವನ್ನು ತೆರವುಗೊಳಿಸಿದ್ದಾರೆ. ಹೀಗಾಗಿ. ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಬಳಿಕ ವೈದ್ಯರು ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ಆನೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆನೆಯ ಓಡಾಟದಿಂದ ಉಂಟಾದ ಕಾಲ್ತುಳಿತದಲ್ಲಿ ಸಿಲುಕಿಕೊಳ್ಳದೆ ಕೆಲವರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ.

ಅಹಮದಾಬಾದ್ ನಗರದ ಪ್ರಸಿದ್ಧ ರಥೋತ್ಸವದಲ್ಲಿ, ಆನೆಗಳು ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತವೆ. ಈ ಬಾರಿ ರಥೋತ್ಸವಕ್ಕಾಗಿ ಒಟ್ಟು 16 ಆನೆಗಳು ಆಗಮಿಸಿದ್ದವು. ಅದರಲ್ಲಿ ಒಂದು ಗಂಡು ಆನೆ ಮಾನಸಿಕ ಅಸಮತೋಲನದಿಂದಾಗಿ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದೆ. ಇದು ಸುತ್ತಮುತ್ತಲಿನ ಜನಸಮೂಹದಲ್ಲಿ ಭಯಭೀತತೆಯನ್ನು ಉಂಟುಮಾಡಿದೆ. ಸದ್ಯ ಭಯಭೀತಗೊಂಡಿದ್ದ ಆನೆ ಅರಣ್ಯ ಇಲಾಖೆ ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT