ಪರಾಗ್ ಜೈನ್ 
ದೇಶ

'Operation Sindoor' ಪ್ರಮುಖ ಪಾತ್ರವಹಿಸಿದ್ದ IPS ಪರಾಗ್ ಜೈನ್ RAW ನೂತನ ಮುಖ್ಯಸ್ಥ!

ಅವರ ನಾಯಕತ್ವದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಗುಪ್ತಚರ ಆಧಾರಿತ ನಿಖರ ಕ್ಷಿಪಣಿ ದಾಳಿಗಳು ನಡೆದಿದ್ದವು.

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಭಾರತದ ಗುಪ್ತಚರ ಸಂಸ್ಥೆ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (RAW) ಹೊಸ ಮುಖ್ಯಸ್ಥರನ್ನಾಗಿ ನೇಮಿಸಿದೆ. 1989ರ ಬ್ಯಾಚ್ ಪಂಜಾಬ್ ಕೇಡರ್ ನ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರು ಜುಲೈ 1ರಂದು ಎರಡು ವರ್ಷಗಳ ಅವಧಿಗೆ RAW ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರವಿ ಸಿನ್ಹಾ ಅವರ ಸ್ಥಾನಕ್ಕೆ ಪರಾಗ್ ಜೈನ್ ರನ್ನು ನೇಮಿಸಲಾಗಿದೆ.

ರವಿ ಸಿನ್ಹಾ ಅವರ ಅಧಿಕಾರಾವಧಿ ಜೂನ್ 30 ರಂದು ಕೊನೆಗೊಳ್ಳಲಿದೆ. RAW ಎಂಬುದು ದೇಶದ ಹೊರಗಿನ ಗುಪ್ತಚರ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಭಾರತದ ಗುಪ್ತಚರ ಸಂಸ್ಥೆಯಾಗಿದೆ. ಅಧಿಕಾರ ಕಾರಿಡಾರ್‌ಗಳು ಮತ್ತು ಗುಪ್ತಚರ ವಲಯಗಳಲ್ಲಿ 'ಸೂಪರ್ ಸ್ಪೈ' ಎಂದು ಖ್ಯಾತರಾಗಿರುವ ಪರಾಗ್ ಜೈನ್, RAWನಲ್ಲಿ ಮಾನವ ಆಧಾರಿತ ಗುಪ್ತಚರ (HUMINT) ಮತ್ತು ತಂತ್ರಜ್ಞಾನ ಆಧಾರಿತ ಗುಪ್ತಚರ (TECHINT) ಅನುಭವವನ್ನು ತರುತ್ತಿದ್ದಾರೆ. ತಮ್ಮ ಕೆಲಸದ ಸಮಯದಲ್ಲಿ, ಅವರು ಗುಪ್ತಚರ ಎರಡನ್ನೂ ಬಹಳ ಪರಿಣಾಮಕಾರಿ ರೀತಿಯಲ್ಲಿ ಮಿಶ್ರಣ ಮಾಡಿ ಬಳಸಿದ್ದಾರೆ. ಈ ಸಂಯೋಜನೆಯು ಅನೇಕ ಹೆಚ್ಚಿನ ಪಣತೊಟ್ಟ ಕಾರ್ಯಾಚರಣೆಗಳಿಗೆ ಮುಖ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆಪರೇಷನ್ ಸಿಂದೂರ್ ಸಮಯದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಅವರ ನಾಯಕತ್ವದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಗುಪ್ತಚರ ಆಧಾರಿತ ನಿಖರ ಕ್ಷಿಪಣಿ ದಾಳಿಗಳು ನಡೆದಿದ್ದವು. ಆಪರೇಷನ್ ಸಿಂದೂರ್ ಸಮಯದಲ್ಲಿ, ಕ್ಷಿಪಣಿ ದಾಳಿ ಕೆಲವೇ ನಿಮಿಷಗಳನ್ನು ತೆಗೆದುಕೊಂಡಿತು. ಆದರೆ ಅಂತಹ ನಿಖರವಾದ ಗುರಿ ಸಾಧ್ಯವಾದದ್ದು ವರ್ಷಗಳ ಕಾಲ On Ground ಮೇಲೆ ಮಾಡಿದ ಕಠಿಣ ಪರಿಶ್ರಮ ಮತ್ತು ಸಾಕಷ್ಟು ಪ್ರಯತ್ನದ ನಂತರ ಜಾಲಗಳನ್ನು ನಿರ್ಮಿಸಿದ್ದರಿಂದಾಗಿತ್ತು.

ಭಾರತದ ಅತ್ಯಂತ ಸವಾಲಿನ ಭದ್ರತಾ ರಂಗಗಳಲ್ಲಿ ಒಂದಾದ ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದಲ್ಲಿ ಜೈನ್ ಅವರ ವ್ಯಾಪಕ ಅನುಭವವು ಅವರ ಪರವಾಗಿ ಕೆಲಸ ಮಾಡುತ್ತದೆ. ಅಸ್ಥಿರ ಜಾಗತಿಕ ಪರಿಸರದಲ್ಲಿ ಅವರ ಅನುಭವವು ಪರಾಗ್ ಜೈನ್‌ಗೆ ಸೂಕ್ತವಾಗಿ ಬರುತ್ತದೆ. ಹಿರಿಯ ಅಧಿಕಾರಿಗಳು ಪರಾಗ್ ಜೈನ್ ಅವರನ್ನು ಕ್ರಮಬದ್ಧ ಮತ್ತು ವಿವೇಕಯುತ ಎಂದು ಬಣ್ಣಿಸುತ್ತಾರೆ. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2021ರ ಜನವರಿ 1ರಂದು ಪಂಜಾಬ್‌ನಲ್ಲಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ಬಡ್ತಿ ಪಡೆದರು. ಆಗ ಅವರು ಕೇಂದ್ರ ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ರಾಷ್ಟ್ರೀಯ ಗುಪ್ತಚರ ವ್ಯವಸ್ಥೆಯಲ್ಲಿ ಅವರ ಅರ್ಹತೆಗಳನ್ನು ಎತ್ತಿ ತೋರಿಸುವ ಮೂಲಕ ಅವರನ್ನು ಕೇಂದ್ರ ಡಿಜಿಪಿಯ ಸಮಾನ ಹುದ್ದೆಗೆ ಬಡ್ತಿ ನೀಡಲು ಆಯ್ಕೆ ಮಾಡಲಾಯಿತು. ಜೈನ್ ಈ ಹಿಂದೆ ಕೆನಡಾ ಮತ್ತು ಶ್ರೀಲಂಕಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜೂನ್ 28 ರಂದು ಸಚಿವ ಸಂಪುಟದ ನೇಮಕಾತಿ ಸಮಿತಿಯು ಅವರ ಹೆಸರನ್ನು ಅನುಮೋದಿಸಿತು. ರವಿ ಸಿನ್ಹಾ ಅವರ ನಂತರ ಯಾರು ನೇಮಕಗೊಳ್ಳುತ್ತಾರೆ ಎಂಬ ಊಹಾಪೋಹವನ್ನು ಕೊನೆಗೊಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT