ಕೋಲ್ಕತ್ತಾ: ದಕ್ಷಿಣ ಕೊಲ್ಕತ್ತಾದ ಕಾನೂನು ಕಾಲೇಜಿನ ವಿದ್ಯಾರ್ಥಿ ಮೇಲಿನ ಗ್ಯಾಂಗ್ ರೇಪ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ಥೆ ಮದುವೆ ಪ್ರಪೋಸಲ್ ತಿರಸ್ಕರಿಸಿದ್ದರಿಂದ ಪ್ರಮುಖ ಆರೋಪಿ ಆಕ್ರೋಶಗೊಂಡಿದ್ದ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಇಡೀ ಅಪರಾಧವು ಪೂರ್ವ ಯೋಜಿತವೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು. ಘಟನಾವಳಿಗಳನ್ನು ಗಮನಿಸಿದರೆ ಪ್ರಮುಖ ಆರೋಪಿಯ ಮದುವೆ ಪ್ರಪೋಸಲ್ ತಿರಸ್ಕರಿಸಿದ ನಂತರ ಸಂತ್ರಸ್ಥೆ ಕಿರುಕುಳ ಎದುರಿಸಬೇಕಾಗಿದೆ ಎಂಬುದು ಕಂಡುಬಂದಿದೆ.
ಸಾಂದರ್ಭಿಕ ಸಾಕ್ಷ್ಯಗಳಿಂದ ಇದು ದೃಢೀಕರಿಸಲ್ಪಟ್ಟಿದೆ. ಆದರೆ ಇದು ಪೂರ್ವ ಯೋಜಿತ ಅಪರಾಧವೇ ಅಥವಾ ಇದ್ದಕ್ಕಿದ್ದಂತೆ ಸಂಭವಿಸಿದೆಯೇ ಎಂಬುದನ್ನು ಸಾಬೀತುಪಡಿಸಬೇಕಾಗಿದೆ ಎಂದು ಅಧಿಕಾರಿ ಸುದ್ದಿಸಂಸ್ಥೆ ಪಿಟಿಐ ಗೆ ತಿಳಿಸಿದರು.
ತನಗೆ ಬಾಯ್‌ಫ್ರೆಂಡ್ ಇದ್ದು, ಆತನೊಂದಿಗೆ ಸಂತೋಷವಾಗಿದ್ದು, ಮೋಸ ಮಾಡುವುದಿಲ್ಲ ಎಂದು ಮೂವರು ಆರೋಪಿಗಳಿಗೆ ಯುವತಿ ಹೇಳಿದ್ದಾಳೆ. ತದನಂತರ ಮೂವರು ಆರೋಪಿಗಳನ್ನು ಆಕೆಯ ಬಾಯ್ ಫ್ರೆಂಡ್ ಕೊಂದು, ಪೋಷಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದು, ಪ್ರತಿಯೊಂದು ಅಂಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಮೂವರು ಆರೋಪಿಗಳು ಮತ್ತು ಸಂತ್ರಸ್ಥೆಯ ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ವೈದ್ಯಕೀಯ ಪರೀಕ್ಷೆಯು ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂಬ ಕಾನೂನು ಕಾಲೇಜು ವಿದ್ಯಾರ್ಥಿನಿಯ ಆರೋಪವನ್ನು ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 25 ರಂದು ವಿದ್ಯಾರ್ಥಿ ಸಂಘದ ಕಚೇರಿಯ ಪಕ್ಕದಲ್ಲಿರುವ ಸೆಕ್ಯೂರಿಟಿ ಗಾರ್ಡ್ ಕೊಠಡಿಗೆ ಮೂವರು ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದರು. ಎಲ್ಲಾ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿತ್ತು. ಅಂದೇ ಸಂತ್ರಸ್ಥೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಆಕೆಯ ಖಾಸಗಿ ಭಾಗಗಳಲ್ಲಿ ಗಾಯಗಳು ಅಲ್ಲದೇ, ಆಕೆಯ ಕುತ್ತಿಗೆಯ ಸುತ್ತ ಹೊಡೆದಿರುವ ಗುರುತುಗಳು ಕಂಡುಬಂದಿತ್ತು.