ಉತ್ತರ ಪ್ರದೇಶದ ಆಗ್ರಾದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಐವರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಶನಿವಾರ ತಡರಾತ್ರಿ ಒಂದೇ ಬೈಕ್ ನಲ್ಲಿ ನಾಲ್ವರು ತೆರಳುತ್ತಿದ್ದು ಇಬ್ಬರು ತೆರಳುತ್ತಿದ್ದ ಮತ್ತೊಂದು ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಪೊಲೀಸರ ಪ್ರಕಾರ, ಒಂದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮೃತರನ್ನು ಭಗವಾನ್ ದಾಸ್ (35), ವಕೀಲ್ (35), ರಾಮ್ ಸ್ವರೂಪ್ (28) ಮತ್ತು ಸೋನು (30) ಎಂದು ಗುರುತಿಸಲಾಗಿದೆ. ಎಲ್ಲರೂ ಸೈಯಾನ್ ಪ್ರದೇಶದ ನಿವಾಸಿಗಳು. ಮದುವೆ ಮನೆಯಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತರಲ್ಲಿ ಒಬ್ಬರ ಸಂಬಂಧಿ ರಾಮ್ ಲಖನ್ ಮಾತನಾಡಿ, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಾಲ್ವರೂ ಸ್ಪ್ಲೆಂಡರ್ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಸ್ಪ್ಲೆಂಡರ್‌ನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಬುಲೆಟ್ ಚಲಾಯಿಸುತ್ತಿದ್ದ 17 ವರ್ಷದ ಕರಣ್ ಕೂಡ ಗಾಯಗೊಂಡಿದ್ದಾರೆ. ಆದರೆ ಬುಲೆಟ್ ನಲ್ಲಿ ಹಿಂಬದಿ ಕುಳಿತ್ತಿದ್ದ ಸವಾರನೊಬ್ಬ ಸಾವನ್ನಪ್ಪಿದರು. ಕಾಗರೌಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ (ಅಪರಾಧ) ರಾಜವೀರ್ ಸಿಂಗ್ ಸಾವುಗಳನ್ನು ದೃಢಪಡಿಸಿದ್ದು, ಈ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು. ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದರು.