ಮಹಾರಾಷ್ಟ್ರದ ಯೆರ್ವಾಡಾದ ಜಂಕ್ಷನ್‌ನಲ್ಲಿ "ಸಾರ್ವಜನಿಕ ದುರ್ವರ್ತನೆ"ಯಲ್ಲಿ ತೊಡಗಿದ್ದ ಐಷಾರಾಮಿ ಕಾರಿನ ಚಾಲಕನನ್ನು ಬಂಧಿಸಿರುವುದಾಗಿ ಪುಣೆ ನಗರ ಪೊಲೀಸರು ತಿಳಿಸಿದ್ದಾರೆ.
ಸತಾರಾ ಜಿಲ್ಲೆಯ ಕರಡ್‌ನಲ್ಲಿ ಪರಾರಿಯಾಗಿದ್ದ ಆರೋಪಿ ಗೌರವ್ ಅಹುಜಾನನ್ನು ಬಂಧಿಸಲಾಗಿದೆ. ಶನಿವಾರ ಬೆಳಿಗ್ಗೆ ಅಹುಜಾ ಸಾರ್ವಜನಿಕರ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಮತ್ತು ಮದ್ಯದ ಅಮಲಿನಲ್ಲಿ "ಸಾರ್ವಜನಿಕ ದುರ್ವರ್ತನೆ" ಎಸಗಿದ್ದಾರೆ ಎನ್ನಲಾದ ದೃಶ್ಯ ದಾರಿಹೋಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಸಾರ್ವಜನಿಕವಾಗಿ ದುರ್ವರ್ತನೆ ತೋರಿದ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಯೆರ್ವಾಡಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರವೀಂದ್ರ ಶೆಲ್ಕೆ ದೃಢಪಡಿಸಿದ್ದಾರೆ.
ಅಹುಜಾ ಮತ್ತು ಇನ್ನೊಬ್ಬ ವ್ಯಕ್ತಿ ಬಿಎಂಡಬ್ಲ್ಯು ಕಾರಿನಲ್ಲಿದ್ದರು ಮತ್ತು ಪುಣೆಯ ಯೆರ್ವಾಡಾ ಜಂಕ್ಷನ್‌ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಲು ಕಾರು ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸ್ ಉಪ ಆಯುಕ್ತ ಹಿಮ್ಮತ್ ಜಾಧವ್ ಅವರ ಪ್ರಕಾರ, ಪುಣೆ ನಗರ ಪೊಲೀಸರ ಗಮನಕ್ಕೆ ಬಂದಿರುವ ವೀಡಿಯೊದಲ್ಲಿ ಬಿಎಂಡಬ್ಲ್ಯು ಚಾಲಕ ವಾಹನವನ್ನು ಮಧ್ಯದಲ್ಲಿ ನಿಲ್ಲಿಸಿ ರಸ್ತೆಯಲ್ಲಿ ಮೂತ್ರ ವಿಸರ್ಜಿಸಲು ಮುಂದಾದುದನ್ನು ಕಾಣಬಹುದು. ದಾರಿಹೋಕರೊಬ್ಬರು ಪ್ರಶ್ನಿಸಿದಾಗ, ಯುವಕ ತನ್ನನ್ನು ತಾನು ಬಹಿರಂಗಪಡಿಸಿಕೊಂಡು ಅನುಚಿತ ವರ್ತನೆ ತೋರಿದ್ದಾನೆ ಎಂದು ವರದಿಯಾಗಿದೆ."
"ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ನಾವು ಬಿಎನ್‌ಎಸ್ ಸೆಕ್ಷನ್ 270, 281 285 ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾವು ಅವರಲ್ಲಿ ಒಬ್ಬನನ್ನು ಬಂಧಿಸಿದ್ದೇವೆ ಮತ್ತು ತಲೆಮರೆಸಿಕೊಂಡಿರುವ ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಡಿಸಿಪಿ ಜಾಧವ್ ಹೇಳಿದ್ದಾರೆ.