ಏರ್ ಇಂಡಿಯಾ ವಿಮಾನ Toby Melville
ದೇಶ

ದೆಹಲಿಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ಅಮೆರಿಕಕ್ಕೆ ವಾಪಸ್: ತನಿಖೆ ವೇಳೆ ನೈಜ ಕಾರಣ ಬಹಿರಂಗ!

ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಯುರೋಪ್ ಕಡೆಗೆ ತಿರುಗಿಸಲಾಯಿತು.

ನವದೆಹಲಿ: ಮಾರ್ಚ್ 6 ರಂದು ಅಮೆರಿಕದ ಚಿಕಾಗೋದಿಂದ ದೆಹಲಿ ಕಡೆಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವೊಂದು (AI126)ಟೇಕಾಫ್ ಆದ ಕೆಲ ಗಂಟೆಗಳ ನಂತರ ಪುನಃ ಅಮೆರಿಕ ನಗರಕ್ಕೆ ಮರಳಿತ್ತು. ತಾಂತ್ರಿಕ ಕಾರಣದಿಂದ ವಿಮಾನ ಚಿಕಾಗೋಗೆ ಮರಳಿದೆ ಎಂದು ಅಂದು ವಿಮಾನಯಾನ ಸಂಸ್ಥೆ ಹೇಳಿತ್ತು.

ಆದರೆ, ಇದೀಗ ಅದಕ್ಕೆ ನಿಜವಾದ ಕಾರಣ ಬಯಲಾಗಿದೆ. ಹಲವು ಶೌಚಾಲಯಗಳು ತುಂಬಿದ್ದರಿಂದ ವಿಮಾನ ಹಿಂತಿರುಗಬೇಕಾಯಿತು. ಪಾಲಿಥಿನ್ ಚೀಲಗಳು, ಚಿಂದಿ ಬಟ್ಟೆಗಳು ಮತ್ತು ಬಟ್ಟೆಗಳು ಕೆಳಕ್ಕೆ ಬಿದ್ದು, ಕೊಳಾಯಿಗಳಲ್ಲಿ ಸಿಲುಕಿಕೊಂಡದ್ದು ತನಿಖೆ ವೇಳೆ ತಿಳಿದುಬಂದಿದೆ ಎಂದು ಏರ್ ಇಂಡಿಯಾ ಸೋಮವಾರ ಹೇಳಿದೆ.

ಚಿಕಾಗೋಕ್ಕೆ ವಾಪಸ್ಸಾದ ವಿಮಾನ ಕುರಿತು ವಿವರ ನೀಡಿರುವ ಏರ್ ಇಂಡಿಯಾ ಟೇಕಾಪ್ ಆದ ನಂತರ AI126 ನ ಏರ್ ರಿಟರ್ನ್ ಕುರಿತು ವಿವರವಾದ ಹೇಳಿಕೆಯಲ್ಲಿ, ಏರ್ ಇಂಡಿಯಾ ವಿಮಾನದ ಬಿಸಿನೆಸ್ ಮತ್ತು ಎಕಾನಮಿ ಕ್ಲಾಸ್‌ನಲ್ಲಿರುವ ಕೆಲವು ಶೌಚಾಲಯಗಳು ಸೇವೆಗೆ ಅರ್ಹವಲ್ಲ ಎಂದು ಸಿಬ್ಬಂದಿ ವರದಿ ಮಾಡಿದ ನಂತರ 12 ಶೌಚಾಲಯಗಳ ಪೈಕಿ 18 ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರಲಿಲ್ಲ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗುತಿತ್ತು.

ಆ ವೇಳೆಗೆ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಯುರೋಪ್ ಕಡೆಗೆ ತಿರುಗಿಸಲಾಯಿತು ಎಂದು ಮಾಹಿತಿ ನೀಡಿದೆ.

ಹೆಚ್ಚಿನ ಯುರೋಪಿಯನ್ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ಕಾರ್ಯಾಚರಣೆಯ ಮೇಲಿನ ನಿರ್ಬಂಧಗಳಿಂದಾಗಿ, ಚಿಕಾಗೋಗೆ ಹಿಂತಿರುಗಲು ನಿರ್ಧರಿಸಲಾಯಿತು. ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯ ಹಿತಾಸಕ್ತಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ.

ಪ್ರಯಾಣಿಕರು ಶೌಚಕ್ಕೆ ಮಾತ್ರ 'ಶೌಚಾಲಯಗಳನ್ನು ಬಳಸಬೇಕು ಎಂದಿರುವ ಏರ್ ಇಂಡಿಯಾ, ಈ ಹಿಂದೆ ಇತರ ವಿಮಾನಗಳ ಟಾಯ್ಲೆಟ್ ಗಳಲ್ಲಿ ಕಂಬಳಿಗಳು, ಒಳಉಡುಪುಗಳು ಮತ್ತು ಡೈಪರ್‌ಗಳಂತಹ ವಸ್ತುಗಳನ್ನು ಇತರ ತ್ಯಾಜ್ಯಗಳ ಜೊತೆಗೆ ಹಾಕಿರುವುದು ಕಂಡುಬಂದಿತ್ತು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT