ಯೋಗಿ ಆದಿತ್ಯನಾಥ TNIE
ದೇಶ

ಬಿಟ್ಟುಬಿಡೋ ಮಾತೇ ಇಲ್ಲ: ಸಂಭಾಲ್ ಇತಿಹಾಸ ಇಸ್ಲಾಂಗಿಂತ ಹಿಂದಿನದು, ಅಲ್ಲಿ ವಿಷ್ಣು ದೇವಾಲಯ ಕೆಡವಲಾಗಿತ್ತು- ಯೋಗಿ ಆದಿತ್ಯನಾಥ್

ಆ ಪುರಾವೆಗಳು ಶತಮಾನಗಳಿಂದಲೂ ಅಸ್ತಿತ್ವದಲ್ಲಿವೆ ಎಂದು ಮುಖ್ಯಮಂತ್ರಿ ಹೇಳಿದರು. 1526ರಲ್ಲಿ ಸಂಭಾಲ್‌ನಲ್ಲಿ ವಿಷ್ಣುವಿನ ದೇವಾಲಯವನ್ನು ಕೆಡವಲಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಅದಾದ ಎರಡು ವರ್ಷಗಳ ನಂತರ, 1528ರಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ಕೆಡವಲಾಯಿತು.

ಲಖನೌ: ಸಂಭಾಲ್‌ನಲ್ಲಿ ಮಸೀದಿ ವಿವಾದದ ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಭಾಲ್ ಅನ್ನು 5,000 ವರ್ಷಗಳಷ್ಟು ಹಳೆಯದಾದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದು ಇಸ್ಲಾಂ ಧರ್ಮಕ್ಕೂ ಹಿಂದಿನದು ಎಂದು ಹೇಳಿದ್ದಾರೆ. 1526ರಲ್ಲಿ ಸಂಭಾಲ್‌ನಲ್ಲಿರುವ ಶ್ರೀ ಹರಿ ವಿಷ್ಣು ದೇವಾಲಯವನ್ನು ನೆಲಸಮಗೊಳಿಸಲಾಯಿತು ಎಂದು ಆದಿತ್ಯನಾಥ್ ಹೇಳಿದ್ದಾರೆ. 5,000 ವರ್ಷಗಳಷ್ಟು ಹಳೆಯ ಗ್ರಂಥಗಳಲ್ಲಿ ಸಂಭಾಲ್ ಅನ್ನು ಉಲ್ಲೇಖಿಸಲಾಗಿದೆ. ಅವು ವಿಷ್ಣುವಿನ ಭವಿಷ್ಯದ ಅವತಾರವನ್ನು ಉಲ್ಲೇಖಿಸುತ್ತವೆ. ಮತ್ತೊಂದೆಡೆ, ಇಸ್ಲಾಂ ಕೇವಲ 1,400 ವರ್ಷಗಳ ಹಿಂದೆ ಹುಟ್ಟಿಕೊಂಡಿತು. ನಾನು ಇಸ್ಲಾಂಗಿಂತ ಕನಿಷ್ಠ 2,000 ವರ್ಷ ಹಳೆಯದಾದ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.

ಈ ವಿಷಯಗಳ ಪುರಾವೆಗಳು ಶತಮಾನಗಳಿಂದಲೂ ಅಸ್ತಿತ್ವದಲ್ಲಿವೆ ಎಂದು ಮುಖ್ಯಮಂತ್ರಿ ಹೇಳಿದರು. 1526ರಲ್ಲಿ ಸಂಭಾಲ್‌ನಲ್ಲಿ ವಿಷ್ಣುವಿನ ದೇವಾಲಯವನ್ನು ಕೆಡವಲಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಅದಾದ ಎರಡು ವರ್ಷಗಳ ನಂತರ, 1528ರಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ಕೆಡವಲಾಯಿತು. ಆರ್‌ಎಸ್‌ಎಸ್ ಸಂಯೋಜಿತ ವಾರಪತ್ರಿಕೆ 'ಆರ್ಗನೈಸರ್' ಲಖನೌದಲ್ಲಿ ಆಯೋಜಿಸಿದ್ದ 'ಮಂಥನ: ಕುಂಭ ಮತ್ತು ಮೀರಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂ ಕೃತ್ಯಗಳನ್ನು ಒಬ್ಬರೇ ಮಾಡಿದ್ದಾರೆ ಎಂದು ಹೇಳಿದರು. ಜಗತ್ತಿನ ಪ್ರತಿಯೊಂದು ಧರ್ಮ ಮತ್ತು ಪೂಜಾ ವಿಧಾನವು ಕೆಲವು ಉತ್ತಮ ಗುಣಗಳನ್ನು ಹೊಂದಿದೆ ಎಂದು ಆದಿತ್ಯನಾಥ್ ಹೇಳಿದರು. ಯಾರೊಬ್ಬರ ನಂಬಿಕೆಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಮತ್ತು ಅವರ ನಂಬಿಕೆಗಳನ್ನು ಹತ್ತಿಕ್ಕುವುದು ಸ್ವೀಕಾರಾರ್ಹವಲ್ಲ ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು.

ಕಳೆದ ನವೆಂಬರ್‌ನಲ್ಲಿ ನ್ಯಾಯಾಲಯದ ಆದೇಶದ ನಂತರ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದಂತೆ ಸಂಭಾಲ್‌ನಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಮಸೀದಿಯನ್ನು ಪಾಳುಬಿದ್ದ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ. ಸಂಭಾಲ್ ಒಂದು "ಐತಿಹಾಸಿಕ ಸತ್ಯ"ವನ್ನು ಪ್ರತಿನಿಧಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ನಾನು ಒಬ್ಬ ಯೋಗಿ. ನಾನು ಪ್ರತಿಯೊಂದು ಪಂಗಡ, ಸಮುದಾಯ ಮತ್ತು ಪೂಜಾ ವಿಧಾನವನ್ನು ಗೌರವಿಸುತ್ತೇನೆ. ನೀವು ಗೋರಖನಾಥ ಪೀಠಕ್ಕೆ ಹೋದರೆ, ಅಲ್ಲಿ ಯಾರಿಗೂ ಯಾವುದೇ ತಾರತಮ್ಯವಿಲ್ಲ ಎಂದು ನೀವು ನೋಡುತ್ತೀರಿ. ಎಲ್ಲಾ ಜಾತಿಗಳು, ಪ್ರದೇಶಗಳು ಮತ್ತು ಪಂಗಡಗಳ ಜನರು ಒಟ್ಟಿಗೆ ಕುಳಿತು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರೆ. ನಮ್ಮ ಪೂಜ್ಯ ಸಂತರು, ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ, ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ ಮತ್ತು ಸಮಾನ ಗೌರವವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಅದಕ್ಕಾಗಿಯೇ ಉಪನಿಷತ್ತುಗಳಲ್ಲಿ ವ್ಯಕ್ತವಾಗಿರುವ ಭಾರತದ ವೈದಿಕ ಸಂಪ್ರದಾಯದ ಚೈತನ್ಯವು ನಮ್ಮಲ್ಲಿ ಆಳವಾಗಿ ಬೇರೂರಿದೆ ಎಂದು ನಾನು ಹೇಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರತಿಯೊಂದು ಪೂಜಾ ವಿಧಾನವು ಸನಾತನ ಧರ್ಮಕ್ಕೆ ಸಂಬಂಧಿಸಿರಲಿ ಅಥವಾ ಜಗತ್ತಿನ ಯಾವುದೇ ಇತರ ಧರ್ಮಕ್ಕೆ ಸಂಬಂಧಿಸಿರಲಿ, ಅದರಲ್ಲಿ ಕೆಲವು ಅಂತರ್ಗತ ಒಳ್ಳೆಯತನವಿದೆ. ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ಅನುಸರಿಸುತ್ತಾರೆ. ವಿಪಕ್ಷಗಳು ಮತ್ತು ವಿಮರ್ಶಕರ ಕಡೆಗೆ ಬೆರಳು ತೋರಿಸಿದ ಸಿಎಂ, ಈ ಜನರು ಮೊದಲು ಧರ್ಮಗ್ರಂಥಗಳನ್ನು ಓದಲಿ. ಆ ನಂತರವೇ ಅವುಗಳ ಬಗ್ಗೆ ಚರ್ಚೆಗೆ ನನಗೆ ಸವಾಲು ಹಾಕಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT