ಈರೋಡ್: ಇಲ್ಲಿಗೆ ಸಮೀಪ ಆ್ಯಸಿಡ್ ಟ್ಯಾಂಕರ್ ಲಾರಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೈವಕ್ಕಲ್‌ನ 45 ವರ್ಷದ ಯುವೆಂದವೇಲ್ ಎಂಬುವವರು ಲಾರಿ ಮತ್ತು ಬಸ್‌ಗಳನ್ನು ಸ್ವಚ್ಛಗೊಳಿಸಲು ಚಿಟೋಡ್ ಬಳಿ ಸರ್ವಿಸ್ ಸ್ಟೇಷನ್ ಅನ್ನು ನಡೆಸುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ ಯಾರೋ ಅಲ್ಲಿಗೆ ಆ್ಯಸಿಡ್ ಟ್ಯಾಂಕರ್ ಲಾರಿಯನ್ನು ಸ್ವಚ್ಛಗೊಳಿಸಲು ತಂದಿದ್ದರು. ಭವಾನಿ ಬಳಿಯ ರಾಮನಾಥಪುರದ 52 ವರ್ಷದ ಚೆಲ್ಲಾಪ್ಪನ್, ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಟ್ಯಾಂಕರ್ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 30 ನಿಮಿಷ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡ ನಂತರ, ತೀವ್ರವಾದ ವಾಸನೆ ಮತ್ತು ಕಲೆಗಳ ತೀವ್ರತೆಯಿಂದಾಗಿ ಅವರು ಪ್ರಜ್ಞೆ ತಪ್ಪಿದ್ದಾರೆ.
ಇದನ್ನು ಗಮನಿಸಿದ ಸರ್ವಿಸ್ ಸ್ಟೇಷನ್‌ನ ಮಾಲೀಕ ಯುವೆಂದವೇಲ್, ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸದೆಯೇ ಮೂರ್ಛೆ ಹೋದ ಚಂದ್ರನ್ ಅವರನ್ನು ಟ್ಯಾಂಕರ್‌ನಿಂದ ಸ್ಥಳಾಂತರಿಸಿದ್ದಾರೆ. ಬಳಿಕ ಅವರೂ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಸರ್ವಿಸ್ ಸ್ಟೇಷನ್‌ನ ಸಿಬ್ಬಂದಿ ಮತ್ತು ಸಾರ್ವಜನಿಕರು ಅವರನ್ನು ಭವಾನಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆಗಾಗಲೇ, ಯುವೇಂದವೇಲ್ ಮತ್ತು ಚಂದ್ರನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಚೆಲ್ಲಪ್ಪನ್ ಎಂಬುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಚಿಟೋಡೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿದ್ದಾರೆ.