ದೇಶ

ಚೆನಾಬ್ ನದಿ ನೀರಿಗೆ ಬ್ರೇಕ್: 'ನನ್ನ 75 ವರ್ಷಗಳ ಜೀವನದಲ್ಲಿ ಇದೇ ಮೊದಲು'; ಮೋದಿ ಬೆಂಬಲಕ್ಕೆ ನಿಂತ ಸ್ಥಳೀಯರು! Video

ಮೊದಲು 25-30 ಅಡಿ ಎತ್ತರದಲ್ಲಿ ಚೆನಾಬ್ ನದಿ ಹರಿಯುತ್ತಿತ್ತು, ಆದರೆ ಈಗ ಇಲ್ಲಿ ಕೇವಲ 1.5-2 ಅಡಿ ನೀರು ಇದೆ. ಸಿಂಧೂ ಜಲ ಒಪ್ಪಂದ ಸ್ಥಗಿತಕ್ಕೆ ಪ್ರಧಾನಿ ಮೋದಿಯವರ ನಿರ್ಧಾರವೇ ಇದಕ್ಕೆ ಕಾರಣ.

ಅಖ್ನೂರ್​: ಬಾಗ್ಲಿಹಾರ್ ಮತ್ತು ಸಲಾಲ್ ಡ್ಯಾಂ ಗೇಟ್ ಕ್ಲೋಸ್ ಆದ ನಂತರ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಚೆನಾಬ್ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ನೀರಿಲ್ಲದೆ ಚೆನಾಬ್ ನದಿ ಖಾಲಿ ಖಾಲಿಯಾಗಿದ್ದು, ಸ್ಥಳೀಯರು ಓಡಾಡುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನ ಜೊತೆಗಿನ ಸಿಂಧೂ ಜಲ ಒಪ್ಪಂದ ರದ್ದು ಕಾರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಸ್ಥಳೀಯರೊಬ್ಬರು, ಪಾಕಿಸ್ತಾನಕ್ಕೆ ಒಂದು ಹನಿ ನೀರು ಕೂಡ ನೀಡುವುದನ್ನು ಬಯಸುವುದಿಲ್ಲ ಎಂದು ಎಚ್ಚರಿಸಿದರು.

ಮೊದಲು 25-30 ಅಡಿ ಎತ್ತರದಲ್ಲಿ ಚೆನಾಬ್ ನದಿ ಹರಿಯುತ್ತಿತ್ತು, ಆದರೆ ಈಗ ಇಲ್ಲಿ ಕೇವಲ 1.5-2 ಅಡಿ ನೀರು ಇದೆ. ಸಿಂಧೂ ಜಲ ಒಪ್ಪಂದ ಸ್ಥಗಿತಕ್ಕೆ ಪ್ರಧಾನಿ ಮೋದಿಯವರ ನಿರ್ಧಾರವೇ ಇದಕ್ಕೆ ಕಾರಣ. ಪಾಕಿಸ್ತಾನಕ್ಕೆ ಒಂದೇ ಒಂದು ಹನಿ ನೀರನ್ನೂ ನೀಡುವುದು ನಮಗೆ ಇಷ್ಟವಿಲ್ಲ. ನಾವೆಲ್ಲರೂ ಪ್ರಧಾನಿ ಮೋದಿಯವರೊಂದಿಗೆ ನಿಂತಿದ್ದೇವೆ ಎಂದರು.

ಚೆನಾಬ್ ನದಿಯ ನೀರಿನ ಮಟ್ಟದಲ್ಲಿ ತೀವ್ರ ಬದಲಾವಣೆಯ ಬಗ್ಗೆ ಮತ್ತೊಬ್ಬ ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ. “ನನ್ನ 75 ವರ್ಷಗಳ ಜೀವನದಲ್ಲಿ ಇದೇ ಮೊದಲ ಬಾರಿಗೆ ಚೆನಾಬ್‌ನಲ್ಲಿ ಇಷ್ಟು ಕಡಿಮೆ ಪ್ರಮಾಣದ ನೀರು ಕಡಿಮೆಯಾಗಿರುವುದನ್ನು ನೋಡುತ್ತಿದ್ದೇನೆ. ಈ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಪಾಕಿಸ್ತಾನ ವಿರುದ್ಧ ಜಲಾಸ್ತ್ರ ಪ್ರಯೋಗಿಸಿದೆ. 1960 ರಲ್ಲಿ ಎರಡೂ ದೇಶಗಳ ನಡುವೆ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್