ಸಾಂದರ್ಭಿಕ ಚಿತ್ರ  
ದೇಶ

ಜಮ್ಮು-ಕಾಶ್ಮೀರದ ಬುದ್ಗಾಮ್: ಭಯೋತ್ಪಾದಕರ ಇಬ್ಬರು ಸಹಚರರ ಬಂಧನ; ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೊನ್ನೆ ಭಾನುವಾರ ರಾತ್ರಿ ಭದ್ರತಾ ಪಡೆಗಳು ಭಯೋತ್ಪಾದಕ ಅಡಗುತಾಣವನ್ನು ಭೇದಿಸಿ, ಸುಧಾರಿತ ಸ್ಫೋಟಕ ಸಾಧನಗಳು (IEDs) ಮತ್ತು ಎರಡು ವೈರ್‌ಲೆಸ್ ಸೆಟ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.

ಬುದ್ಗಾಮ್: ಕಳೆದ ಏಪ್ರಿಲ್ 22 ರಂದು 26 ಜನರ ಪ್ರಾಣವನ್ನು ಬಲಿ ಪಡೆದ ಮಾರಕ ಪಹಲ್ಗಾಮ್ ದಾಳಿಯ ನಂತರ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದೆ. ಶ್ರೀನಗರದ ಹೊರವಲಯದಲ್ಲಿರುವ ಬುಚ್ಪೋರಾ ಪಟ್ಟಣದಲ್ಲಿ ನಡೆದ ನಾಕಾ ತಪಾಸಣೆ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದೆ.

ಭದ್ರತಾ ಪಡೆಗಳು ಅವರ ಬಳಿಯಿಂದ ಒಂದು ಪಿಸ್ತೂಲ್, ಒಂದು ಗ್ರೆನೇಡ್ ಮತ್ತು 15 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಭಯೋತ್ಪಾದಕ ಅಡಗುತಾಣವನ್ನು ಭೇದಿಸಲಾಗಿದೆ

ಜಮ್ಮು- ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೊನ್ನೆ ಭಾನುವಾರ ರಾತ್ರಿ ಭದ್ರತಾ ಪಡೆಗಳು ಭಯೋತ್ಪಾದಕ ಅಡಗುತಾಣವನ್ನು ಭೇದಿಸಿ, ಸುಧಾರಿತ ಸ್ಫೋಟಕ ಸಾಧನಗಳು (IEDs) ಮತ್ತು ಎರಡು ವೈರ್‌ಲೆಸ್ ಸೆಟ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ. ಪೂಂಚ್ ಜಿಲ್ಲೆಯ ಸುರನ್‌ಕೋಟ್ ಸೆಕ್ಟರ್‌ನಲ್ಲಿರುವ ಹರಿ ಮರೋಟೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಗುಂಪು (SOG) ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.

ಐದು ಸಿದ್ಧ-ಬಳಕೆಯ ಸುಧಾರಿತ ಸ್ಫೋಟಕ ಸಾಧನಗಳು (IEDಗಳು) ಭದ್ರತಾ ಪಡೆಗಳ ನಿಯಂತ್ರಿತ ಸ್ಫೋಟದಲ್ಲಿ ಸುರಕ್ಷಿತವಾಗಿ ನಾಶವಾದವು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಐಇಡಿಗಳು ಪತ್ತೆಯಾಗಿದ್ದು, ಗಡಿ ಪ್ರದೇಶದಲ್ಲಿ ದಾಳಿ ನಡೆಸುವ ಸಂಚಿನ ಭಾಗವೆಂದು ನಂಬಲಾಗಿದೆ. ಎರಡು ಸಾಧನಗಳನ್ನು ಉಕ್ಕಿನ ಬಕೆಟ್‌ಗಳಲ್ಲಿ, ಉಳಿದ ಮೂರು ಸಾಧನಗಳನ್ನು ಟಿಫಿನ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗಿತ್ತು.

ಇದಲ್ಲದೆ, ಎರಡು ವೈರ್‌ಲೆಸ್ ಸೆಟ್‌ಗಳು, ಯೂರಿಯಾ ಹೊಂದಿರುವ ಐದು ಪ್ಯಾಕೆಟ್‌ಗಳು, ಒಂದು ಐದು ಲೀಟರ್ ಗ್ಯಾಸ್ ಸಿಲಿಂಡರ್, ಒಂದು ಬೈನಾಕ್ಯುಲರ್, ಮೂರು ಉಣ್ಣೆಯ ಕ್ಯಾಪ್‌ಗಳು, ಮೂರು ಕಂಬಳಿಗಳು ಮತ್ತು ಕೆಲವು ಪ್ಯಾಂಟ್‌ಗಳು ಮತ್ತು ಪಾತ್ರೆಗಳನ್ನು ಅಡಗುತಾಣದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕ ಅಡಗುತಾಣವನ್ನು ಪತ್ತೆಹಚ್ಚಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಇರಾನಿಯನ್ನರು ಸಾಯುತ್ತಿದ್ದಾಗ ನೀವೆಲ್ಲಿದ್ರಿ..: 'ಶಾಂತಿ-ಸಂಧಾನ' ವ್ಯಂಗ್ಯ ಮಾಡಿದ ನಟ Boman Irani ಚಳಿಬಿಡಿಸಿದ ನಟಿ Mandana Karimi!

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

SCROLL FOR NEXT