ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ 
ದೇಶ

ಪಹಲ್ಗಾಮ್ ಉಗ್ರ ದಾಳಿಗೆ ಭಾರತ ಪ್ರತಿಕ್ರಿಯೆ ನೀಡಿದೆಯಷ್ಟೇ; ಪ್ರತಿಯೊಂದು ದುಸ್ಸಾಹಕ್ಕೂ ಪಾಕಿಸ್ತಾನವೇ ಹೊಣೆ!

ವಿಶೇಷ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಆಪರೇಷನ್ ಸಿಂಧೂರ್ ಭಾರತದ ಕಡೆಯಿಂದ ಉಲ್ಬಣಗೊಂಡಿಲ್ಲ, ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿದೆ. ಇದನ್ನು ನಿಜವಾದ ಉಲ್ಬಣವೆಂದು ಪರಿಗಣಿಸಬೇಕು ಎಂದು ಒತ್ತಿ ಹೇಳಿದರು.

ನವದೆಹಲಿ: ಭಾರತದಿಂದ ಉದ್ವಿಗ್ನತೆ ಉಲ್ಬಣಗೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರು ಪುನರುಚ್ಚರಿಸಿದ್ದು, ಇಲ್ಲಿಯವರೆಗೂ ಪಾಕಿಸ್ತಾನದಿಂದ ಉಂಟಾದ ಗುಂಡಿನ ದಾಳಿ ನಿಲ್ಲಿಸಲು ಭಾರತೀಯ ಸೇನಾ ಪಡೆಗಳು ಪ್ರತಿಕ್ರಿಯಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ವಿಶೇಷ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಆಪರೇಷನ್ ಸಿಂಧೂರ್ ಭಾರತದ ಕಡೆಯಿಂದ ಉಲ್ಬಣಗೊಂಡಿಲ್ಲ, ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿದೆ. ಇದನ್ನು ನಿಜವಾದ ಉಲ್ಬಣವೆಂದು ಪರಿಗಣಿಸಬೇಕು ಎಂದು ಒತ್ತಿ ಹೇಳಿದರು.

ಲಾಹೋರ್‌ನಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ ಭಾರತದ ಇತ್ತೀಚಿನ ವೈಮಾನಿಕ ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡ ನೆರೆಯ ರಾಷ್ಟ್ರದ ಕ್ಷಿಪಣಿ ದಾಳಿಗೆ ಪ್ರತ್ಯುತ್ತರ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು

ಪಾಕ್ ಡ್ರೋನ್, ಕ್ಷಿಪಣಿ ದಾಳಿ ವಿಫಲ: ಮೇ 07-08 ರ ರಾತ್ರಿ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ಬಳಸಿಕೊಂಡು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಮತ್ತು ಭುಜ್, ಉತ್ತರಲೈ, ಮತ್ತು ಭುಜ್, ಉತ್ತರಲೈ, ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಅನೇಕ ಸೇನಾ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿದೆ. ಇದನ್ನು UAS ಗ್ರೀಡ್ ಇಂಟಿಗ್ರೇಟೆಡ್ ಕೌಂಟರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ನಾಶಪಡಿಸಲಾಗಿದೆ. ಪಾಕಿಸ್ತಾನದ ದಾಳಿಯನ್ನು ಸಾಬೀತುಪಡಿಸುವ ಹಲವಾರು ಸ್ಥಳಗಳಿಂದ ಅವಶೇಷಗಳನ್ನು ಈಗ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.

ಉದ್ವಿಗ್ನತೆ ಉಲ್ಬಣ ಕುರಿತ ಭಾರತದ ನಿಲುವನ್ನು ಪುನರುಚ್ಚರಿಸಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, "ಪಾಕಿಸ್ತಾನದಿಂದ ಮಾರ್ಟರ್ ಮತ್ತು ಫಿರಂಗಿ ಗುಂಡಿನ ದಾಳಿಯನ್ನು ನಿಲ್ಲಿಸಲು ಭಾರತದಿಂದ ಪ್ರತಿಕ್ರಿಯೆ ನೀಡಲಾಗಿದೆ. ಪಾಕ್ ಮಿಲಿಟರಿಂದ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಭಾರತೀಯ ಸಶಸ್ತ್ರ ಪಡೆಗಳು ತಮ್ಮ ನಿಲುವಿಗೆ ಬದ್ಧವಾಗಿವೆ ಎಂದು ತಿಳಿಸಿದರು.

ಸಿಂಧೂ ಜಲ ಒಪ್ಪಂದ ಕುರಿತು ಹಲವು ಬಾರಿ ಸೂಚನೆ:

ಸಿಂಧೂ ಜಲ ಒಪ್ಪಂದವನ್ನು ತೀರ್ಮಾನಿಸಿದ ಸಂದರ್ಭಗಳಲ್ಲಿ ಮೂಲಭೂತ ಬದಲಾವಣೆಯಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಭಾರತವು ಪಾಕಿಸ್ತಾನ ಸರ್ಕಾರದೊಂದಿಗೆ ಸಂವಹನ ನಡೆಸುತ್ತಿದೆ. ಒಪ್ಪಂದದ ಮಾರ್ಪಾಡು ಕುರಿತು ಚರ್ಚಿಸಲು ಮಾತುಕತೆಗೆ ವಿನಂತಿಸಿ ಹಲವು ಬಾರಿ ಸೂಚನೆಗಳನ್ನು ಕಳುಹಿಸಿದ್ದೇವೆ. ಪಾಕಿಸ್ತಾನ ನಮ್ಮ ಮೇಲೆ ಅನೇಕ ಬಾರಿ ಯುದ್ಧ ಮಾಡಿದ್ದರೂ ಭಾರತ 6 ದಶಕಗಳಿಗೂ ಹೆಚ್ಚು ಕಾಲ ಒಪ್ಪಂದವನ್ನು ಗೌರವಿಸಿದೆ ಎಂದು ವಿಕ್ರಮ್ ಮಿಸ್ರಿ ತಿಳಿಸಿದರು.

ಪಾಕಿಸ್ತಾನವು ಒಪ್ಪಂದವನ್ನು ಉಲ್ಲಂಘಿಸಿ, ಉದ್ದೇಶಪೂರ್ವಕವಾಗಿ ಭಾರತದಲ್ಲಿ ಕಾನೂನು ತಡೆಗಳನ್ನು ಸೃಷ್ಟಿಸುತ್ತಿದೆ. ಪಶ್ಚಿಮದ ನದಿಗಳ ಮೇಲೆ ಕಾನೂನುಬದ್ಧ ಹಕ್ಕನ್ನು ಚಲಾಯಿಸುತ್ತಿದೆ. ಹೀಗೆ ಹಲವು ಪ್ರಚೋದನೆಗಳ ನಂತರವೂ ನಾವು ಕಳೆದ 65 ವರ್ಷಗಳಿಂದ ಒಪ್ಪಂದಕ್ಕೆ ಬದ್ಧರಾಗಿರುದ್ದೇವು. ಈಗ ಪರಿಸ್ಥಿತಿ ಬದಲಾಗಿದೆ. ಈ ಒಪ್ಪಂದವು 50 ಮತ್ತು 60 ರ ದಶಕದ ಎಂಜಿನಿಯರಿಂಗ್ ತಂತ್ರಗಳನ್ನು ಆಧರಿಸಿದೆ... ತಾಂತ್ರಿಕ ಬದಲಾವಣೆಗಳು ಮತ್ತು ಪ್ರಗತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT