ಸಾಂದರ್ಭಿಕ ಚಿತ್ರ 
ದೇಶ

ಭಾರತ- ಪಾಕ್ ಉದ್ವಿಗ್ನತೆ: ಮೇ 15ರವರೆಗೆ ದೇಶಾದ್ಯಂತ 24 ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಹಾರಾಟ ಬಂದ್!

ಏರ್ ಇಂಡಿಯಾ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಪಾಕ್ ಬೆದರಿಕೆ ಪೀಡಿತ ಸ್ಥಳಗಳಿಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಿದ್ದು, ಪ್ರಯಾಣಿಕರಿಗೆ ಮರು ಪಾವತಿಯ ಆಫರ್ ನೀಡಿವೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನಮಿಲಿಟರಿ ಸಂಘರ್ಷದಿಂದಾಗಿ, ಶ್ರೀನಗರ ಮತ್ತು ಚಂಡೀಗಢ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ 24 ವಿಮಾನ ನಿಲ್ದಾಣಗಳಲ್ಲಿ ಮೇ 15 ರವರೆಗೆ ನಾಗರಿಕ ವಿಮಾನ ಹಾರಾಟ ಬಂದ್ ಮಾಡಲಾಗಿದೆ.

ಏರ್ ಇಂಡಿಯಾ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಪಾಕ್ ಬೆದರಿಕೆ ಪೀಡಿತ ಸ್ಥಳಗಳಿಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಿದ್ದು, ಪ್ರಯಾಣಿಕರಿಗೆ ಮರು ಪಾವತಿಯ ಆಫರ್ ನೀಡಿವೆ.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಮೇ 10 ರವರೆಗೆ ನಾಗರಿಕ ವಿಮಾನಗಳಿಗಾಗಿ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಹೊಸ ಆದೇಶದ ನಂತರ ಮೇ 15 ರವರೆಗೆ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಕಾರಣ ತಮ್ಮ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಶುಕ್ರವಾರ ತಿಳಿಸಿವೆ.

ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್‌ಗಢ್, ಪಟಿಯಾಲ, ಶಿಮ್ಲಾ, ಧರ್ಮಶಾಲಾ, ಮತ್ತು ಬಟಿಂಡಾ, ಜೈಸಲ್ಮೇರ್, ಜೋಧ್‌ಪುರ, ಲೇಹ್, ಬಿಕಾನೇರ್, ಪಠಾಣ್‌ಕೋಟ್, ಜಮ್ಮು, ಜಾಮ್‌ನಗರ್ ಮತ್ತು ಭುಜ್ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

ನಾಗರಿಕ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಚಂಡೀಗಢ, ಭುಜ್, ಜಾಮ್‌ನಗರ್ ಮತ್ತು ರಾಜ್‌ಕೋಟ್‌ಗೆ ಮೇ 15 ರವರೆಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಪೋಸ್ಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಒಡಿಶಾ 'ಕೈ' ಶಾಸಕರಿಗೆ' ಟ್ರಬಲ್ ಶೂಟರ್ ಡಿಕೆಶಿ ಆತಿಥ್ಯ: 'ಆಪರೇಷನ್ ಕಮಲ' ತಡೆಗೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮ; ಕಾಂಗ್ರೆಸ್ ಸಮರ್ಥನೆ

ಒಂದೇ ಸೂರಿನಡಿ ರಾಮ್-ರಹೀಮ್: ದ್ವೇಷ ಹರಡುವವರ ಮಧ್ಯೆ ಮುಸ್ಲಿಮರಿಗಾಗಿ ‘ಇಫ್ತಾರ್ ಕೂಟ’ ಆಯೋಜಿಸುತ್ತಿರುವ ಹಿಂದೂ ಮಹಿಳೆ..!

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

SCROLL FOR NEXT