ದೇಶ

ಪಾಕ್‌ನ ಬಲಿಷ್ಠ Fatah-II ಮತ್ತು Abdali ಬ್ಯಾಲಿಸ್ಟಿಕ್ ಕ್ಷಿಪಣಿ ಧ್ವಂಸ? ಭಾರತದ ಪರಾಕ್ರಮ; Video

ಭಾರತವು ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು.

ನವದೆಹಲಿ: ಕಳೆದ ತಿಂಗಳು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಬಲಿಯಾಗಿದ್ದರು. ಈ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ನಡೆಸಿತ್ತು. ಈ ದಾಳಿಯ ನಂತರ, ಭಾರತವು ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು. ಇದರಿಂದ ಕೆರಳಿದ ಪಾಕಿಸ್ತಾನಿ ಸೇನೆಯು ಕಳೆದ ಮೂರು ದಿನಗಳಿಂದ ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡಲು ಪ್ರಾರಂಭಿಸಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಎಲ್ಲಾ ಯೋಜನೆಗಳನ್ನು ವಿಫಲಗೊಳಿಸಿತು ಮತ್ತು ಅವರ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುತ್ತಿದೆ.

ಇದೀಗ ಪಾಕಿಸ್ತಾನ ಮೇ 10ರಂದು ಪಾಕಿಸ್ತಾನದ ಫತಾಹ್-2 ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದೆ. ಪಾಕಿಸ್ತಾನ ಈ ಕ್ಷಿಪಣಿಯನ್ನು ಇರಾನ್‌ನಿಂದ ಖರೀದಿಸಿದೆ. ಇದರ ವ್ಯಾಪ್ತಿಯು 400 ಕಿಲೋಮೀಟರ್‌ಗಳವರೆಗೆ ಇದೆ. ಇದು ಫತಾಹ್-2 ಕ್ಷಿಪಣಿಯ ನವೀಕರಿಸಿದ ಆವೃತ್ತಿಯಾಗಿದ್ದು, ಇದು ಅತ್ಯಾಧುನಿಕ ಮಾರ್ಗದರ್ಶಿ ರಾಕೆಟ್‌ಗೆ ಹೋಲಿಸಬಹುದಾಗಿದೆ. ಈ ಕ್ಷಿಪಣಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ. ಈ ಕ್ಷಿಪಣಿಯನ್ನು ದೆಹಲಿಯನ್ನು ಗುರಿಯಾಗಿಸಿ ಉಡಾಯಿಸಲಾಗಿತ್ತು. ಆದರೆ ಇದನ್ನು ಹರಿಯಾಣದ ಸಿರ್ಸಾ ಬಳಿ ಆಗಸದಲ್ಲೇ ಭಾರತೀಯ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ.

ಮತ್ತೊಂದೆಡೆ ಅಬ್ದಾಲಿ ಕ್ಷಿಪಣಿಯನ್ನು ಪಾಕಿಸ್ತಾನ ಭಾರತದ ಮೇಲೆ ಪ್ರಯೋಗ ಮಾಡಿದೆ. ಪಾಕಿಸ್ತಾನದಲ್ಲಿ ಈ ಕ್ಷಿಪಣಿಯನ್ನು ಹತ್ಫ್-II ಎಂದೂ ಕರೆಯುತ್ತಾರೆ. ಇದು ಅಲ್ಪ-ಶ್ರೇಣಿಯ ಏರ್ ಟು ಏರ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಪಾಕಿಸ್ತಾನದ ಖಂಡಾಂತರ ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಇದು ಪಾಕಿಸ್ತಾನ ಸೇನೆಯ ಕಾರ್ಯತಂತ್ರದ ಪಡೆಗಳಿಗೆ ಪ್ರಮುಖವಾದ ಕಾರ್ಯತಂತ್ರದ ಅಸ್ತ್ರವಾಗಿದೆ. ಇದನ್ನು ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಆಯೋಗ (SUPARCO) ಮತ್ತು ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (DESTO) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಮೇ 9 ಮತ್ತು 10 ರ ರಾತ್ರಿ, ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ಭಾರತದ ಮೇಲೆ ದಾಳಿ ಮಾಡಿತ್ತು. ಆದರೆ ಭಾರತವು ಎಲ್ಲಾ ದಾಳಿಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಿತು. ಈ ದಾಳಿಗಳ ನಡುವೆ, ಪಾಕಿಸ್ತಾನದ ಮತ್ತೊಂದು ಕ್ಷಿಪಣಿಯ ಹೆಸರು ಬೆಳಕಿಗೆ ಬಂದಿದೆ. ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆಯು ಅಬ್ದಾಲಿ ಕ್ಷಿಪಣಿಯನ್ನು ಗಾಳಿಯಲ್ಲಿಯೇ ನಾಶಪಡಿಸಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ದಾಳಿಯಲ್ಲಿ ಅಲ್ಪ ವ್ಯಾಪ್ತಿಯ ಕ್ಷಿಪಣಿಯನ್ನು ಬಳಸ ಧ್ವಂಸಗೈಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ; ಇರಾನ್‌ಗೆ ಮುಖಭಂಗ; Video

'ಒಂದು ವೇಳೆ ಬದುಕಿದ್ದರೆ, ಹುಡುಕಿ ಕೊಲ್ಲುತ್ತೇವೆ': ಬೆಂಜಮಿನ್ ನೆತನ್ಯಾಹು ಸಾವಿನ ವದಂತಿಗಳ ನಡುವೆ ಇರಾನ್ ಎಚ್ಚರಿಕೆ!

ಯುದ್ಧ: ಮೊದಲ ಬಾರಿಗೆ Dancing Missile ಉಡಾಯಿಸಿದ Iran; 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!

ಬಾಲಿವುಡ್ ನಟಿ ಮಧು ಮಲ್ಹೋತ್ರಾ ನಿಧನ

Reels ಗೀಳಿಗೆ ಮತ್ತೊಂದು ಬಲಿ: Delhi–Mumbai Expresswayನಲ್ಲಿ ಕ್ಯಾಂಟರ್ ಢಿಕ್ಕಿ, ಯುವಕ ಸಾವು! Video

SCROLL FOR NEXT