ನವದೆಹಲಿ: ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಖಡಕ್ ಸೂಚನೆ ನೀಡುವ ಮೂಲಕ ಸಿಂಧೂ ನದಿ ವಿಚಾರದಲ್ಲಿ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ
ಆಪರೇಷನ್ ಸಿಂಧೂರ್ ನಂತರ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪ್ರತಿದಾಳಿ ಮಾಡಿರುವುದಾಗಿ ತಿಳಿಸಿದರು.
ಭಾರತ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದರೂ, 25 ಪ್ರವಾಸಿಗರು ಮತ್ತು ಕಾಶ್ಮೀರಿ ವ್ಯಕ್ತಿಯನ್ನು ರಕ್ತದಲ್ಲಿ ಹತ್ಯೆಗೈದ ಭೀಕರ ದಾಳಿಯ ನಂತರ ತೆಗೆದುಕೊಂಡ ಸಿಂಧೂ ಜಲ ಒಪ್ಪಂದದ ಮೇಲಿನ ಹಿಡಿತವನ್ನು ತೆಗೆದುಹಾಕುವ ಯಾವುದೇ ಯೋಜನೆ ಇಲ್ಲ ಎಂದು ನೀರು ಮತ್ತು ರಕ್ತದ ಉಲ್ಲೇಖದ ಮೂಲಕ ಸ್ಪಷ್ಪಪಡಿಸಿದರು.
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ, ನೀರು ಮತ್ತು ರಕ್ತ ಕೂಡ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯನ್ನು ಆಪರೇಷನ್ ಸಿಂಧೂರ್ ಮೂಲಕ ನೀಡಲಾಗಿದೆ. ದೇಶವು ತನ್ನ ನಿಯಮಗಳ ಮೇಲೆ ಉಗ್ರವಾದಕ್ಕೆ ಪ್ರತಿಕ್ರಿಯಿಸುತ್ತದೆ. ಯಾವುದೇ ರೀತಿಯ ಪರಮಾಣು ಬ್ಲ್ಯಾಕ್‌ಮೇಲ್ ತಂತ್ರವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ನಂತರ ಪಾಕಿಸ್ತಾನವಿರುದ್ಧ ಕೆಲವೊಂದು ಪ್ರಮುಖ ರಾಜತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಅದರಲ್ಲಿ ಪ್ರಮುಖವಾಗಿ 1960ರಲ್ಲಿ ಮಾಡಿಕೊಂಡ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಪಡಿಸಲಾಯಿತು. ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲೂ ಈ ಒಪ್ಪಂದವನ್ನು ರದ್ದು ಮಾಡಿರಲಿಲ್ಲ.