ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿಯಲ್ಲಿಂದು ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಶೇ.50 ರಷ್ಟು ಹೆಚ್ಚಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಸಮರ್ಪಿತ ನಗರ ಪರಿವರ್ತನೆ ಮಿಷನ್ (Urban transformation mission) ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಿಎಂ ಎಂ.ಕೆ. ಸ್ಟಾಲಿನ್, ನವದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಶೇ. 50 ರಷ್ಟು ನ್ಯಾಯಯುತ ಪಾಲನ್ನು ಕೇಳಿದ್ದೇವೆ. ಪ್ರಸ್ತುತ ನೀಡಲಾಗಿರುವ ಶೇ. 41 ರಷ್ಟು ಭರವಸೆಯಲ್ಲಿ ಶೇ. 33.16 ರಷ್ಟು ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ತಮಿಳುನಾಡು ದೇಶದಲ್ಲಿ ಹೆಚ್ಚು ನಗರೀಕರಣಗೊಂಡ ರಾಜ್ಯವಾಗಿರುವುದರಿಂದ "ಅಮೃತ್ 2.0 ಯೋಜನೆಯಂತೆ ಸಮರ್ಪಿತ ನಗರ ಪರಿವರ್ತನೆ ಮಿಷನ್ ( urban transformation mission) ಅಗತ್ಯವನ್ನು ಒತ್ತಿ ಹೇಳಿದ್ದೇನೆ. ರಾಷ್ಟ್ರೀಯ ಬದ್ಧತೆ ಮತ್ತು ಪ್ರಾದೇಶಿಕ ಹೆಮ್ಮೆಗಾಗಿ ಇಂಗ್ಲಿಷ್ ಹೆಸರುಗಳೊಂದಿಗೆ ಕಾವೇರಿ, ವೈಗೈ ಮತ್ತು ತಾಮಿರಬರಣಿ ನದಿಗಳಿಗೆ ಕ್ಲೀನ್ ಗಂಗಾ ಮಾದರಿಯ ಯೋಜನೆಯನ್ನು ಒತ್ತಾಯಿಸಿರುವುದಾಗಿ ಸ್ಟಾಲಿನ್ ಹೇಳಿದ್ದಾರೆ