ಮೃತ ಮಾಜಿ ಕ್ರಿಕೆಟಿಗ ರಾಜೇಶ್ ಬಾನಿಕ್ 
ದೇಶ

ರಸ್ತೆ ಅಪಘಾತದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸಾವು!, ಆಗಿದ್ದೇನು?

ಅಕ್ಟೋಬರ್ 31 ರ ರಾತ್ರಿ ಪಶ್ಚಿಮ ತ್ರಿಪುರಾದ ಆನಂದನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜೇಶ್ ಗಂಭೀರವಾಗಿ ಗಾಯಗೊಂಡಿದ್ದರು.

ತ್ರಿಪುರ: ಭಾರತ ತಂಡದ ಪರ ಅಂಡರ್ 15 ಕ್ರಿಕೆಟ್ ತಂಡದಲ್ಲಿ ಆಡಿದ್ದ ತ್ರಿಪುರದ ಮಾಜಿ ಆಲ್​ರೌಂಡರ್ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 31 ರ ರಾತ್ರಿ ಪಶ್ಚಿಮ ತ್ರಿಪುರಾದ ಆನಂದನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜೇಶ್ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಅವರನ್ನು ಅಗರ್ತಲಾದ ಜಿಬಿಪಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ರಾಜೇಶ್ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಯಾರು ರಾಜೇಶ್ ಬಾನಿಕ್

ಬಾನಿಕ್ ಈ ಹಿಂದೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಅಂಬಾಟಿ ರಾಯುಡು ಜೊತೆ ಕಣಕ್ಕಿಳಿದಿದ್ದರು.

2002-03ರಲ್ಲಿ ತ್ರಿಪುರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ರಾಜೇಶ್ ಬಾನಿಕ್ 42 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 6 ಅರ್ಧಶತಕಗಳೊಂದಿಗೆ 1469 ರನ್ ಕಲೆಹಾಕಿದ್ದರು.

ಹಾಗೆಯೇ ಲಿಸ್ಟ್ ಎ ಕ್ರಿಕೆಟ್​ನಲ್ಲಿ 24 ಪಂದ್ಯಗಳನ್ನಾಡಿದ್ದ ಅವರು 1 ಶತಕದೊಂದಿಗೆ 378 ರನ್ ಕಲೆಹಾಕಿದ್ದರು. ಅಲ್ಲದೆ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು 18 ಟಿ20 ಪಂದ್ಯಗಳನ್ನಾಡಿರುವ ರಾಜೇಶ್ ಬಾನಿಕ್ 203 ರನ್​ ಕಲೆಹಾಕಿದ್ದರು.

ದೇಶೀಯ ಕ್ರಿಕೆಟ್​​ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ನುರಿತ ಲೆಗ್ ಬ್ರೇಕ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ರಾಜೇಶ್ ಬಾನಿಕ್ ಈ ಹಿಂದೆ ಕಾಸ್ಟ್‌ಕಟರ್ ವರ್ಲ್ಡ್ ಚಾಲೆಂಜ್ ಟೂರ್ನಿಗೆ ಆಯ್ಕೆಯಾಗಿದ್ದರು. ಈ ಪಂದ್ಯಾವಳಿಯಲ್ಲಿ ಬಾನಿಕ್ ಭಾರತದ ಮಾಜಿ ಕ್ರಿಕೆಟಿಗರಾದ ಅಂಬಟಿ ರಾಯುಡು ಮತ್ತು ಇರ್ಫಾನ್ ಪಠಾಣ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ಭೀಕರ ದುರಂತ: ಪ್ರಯಾಣಿಕ ಬಸ್ ಗೆ ಟ್ರಕ್ ಢಿಕ್ಕಿ, 18 ಮಂದಿ ಸಾವು

ಮಹಿಳಾ ವಿಶ್ವಕಪ್ ಫೈನಲ್: ದ.ಆಫ್ರಿಕಾದಿಂದ ಗೆಲುವು ಕಸಿದ ಅದ್ಭುತ ಕ್ಯಾಚ್...! Video

Cricket: ವಿಶ್ವ ಚಾಂಪಿಯನ್ ಭಾರತ ವನಿತೆಯರ ತಂಡಕ್ಕೆ ಬಹುಮಾನ ಘೋಷಿಸಿದ BCCI, ಮೊತ್ತ ಎಷ್ಟು ಗೊತ್ತಾ?

Video: ಟ್ರೋಫಿ ಸ್ವೀಕಾರ ವೇಳೆ ಕಾಲಿಗೆರಗಿದ ಟೀಂ ಇಂಡಿಯಾ ನಾಯಕಿ Harmanpreet Kaur, ಜಯ್ ಶಾ ಪ್ರತಿಕ್ರಿಯೆಗೆ ವ್ಯಾಪಕ ಮೆಚ್ಚುಗೆ!

ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: ಕನಿಷ್ಟ 7 ಸಾವು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು

SCROLL FOR NEXT