ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಮತ್ತು ಮುಖ್ಯ ತರಬೇತುದಾರ ಅಮೋಲ್ ಮುಜುಂದಾರ್ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.
ಮಹಿಳಾ ವಿಶ್ವಕಪ್ ಚಾಂಪಿಯನ್ ಗಳಿಗೆ ಆತಿಥ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ, ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತೋರಿದ ಅದ್ಬುತ ಪ್ರದರ್ಶನಕ್ಕೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಅಭಿನಂದಿಸಿದ್ದು, ಅವರೊಂದಿಗೆ ಸಂವಾದ ನಡೆಸಿದ್ದಾರೆ.
ಸತತ ಮೂರು ಸೋಲುಗಳನ್ನು ಅನುಭವಿಸಿದ ನಂತರ ಭಾರತ ಮಹಿಳಾ ತಂಡದ ಕಂಬ್ಯಾಕ್ ನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 2017ರ ವಿಶ್ವಕಪ್ ಬಳಿಕ ಪ್ರಧಾನಿ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡ ನಾಯಕಿ ಹರ್ಮನ್ ಪ್ರೀತ್ ಕೌರ್, ಅಂದು ಟ್ರೋಪಿ ಇಲ್ಲದೆ ಬಂದಿದ್ದೆವು. ಆದರೆ ಈಗ ಟ್ರೋಫಿ ಗೆದ್ದು ಪ್ರಧಾನಿ ಭೇಟಿಯಾಗಿದ್ದೇವೆ.ಹೀಗೆ ಭೇಟಿಯಾಗುವುದಾಗಿ ಆಶಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಅವರ ಮಾತುಗಳು ಸದಾ ಸ್ಪೂರ್ತಿದಾಯಕವಾಗಿವೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಉಪ ನಾಯಕಿ ಸ್ಮೃತಿ ಮಂಧಾನ ಹೇಳಿದ್ದಾರೆ.
ದೀಪ್ತಿ ಶರ್ಮಾರ 'ವಿಶೇಷ ಶಕ್ತಿ'ಯ ಗುಣಗಾನ: ದೀಪ್ತಿ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಜೈ ಶ್ರೀ ರಾಮ್' ಎಂದು ಬರೆದುಕೊಂಡದ್ದು ಮತ್ತು ಅವರ ತೋಳಿನ ಮೇಲೆ ಭಗವಾನ್ ಹನುಮಾನ್ ಅವರ ಹಚ್ಚೆ ಇದ್ದ ಬಗ್ಗೆ ಪ್ರಧಾನಿ ಚರ್ಚಿಸಿದ್ದಾರೆ. ಅದು ಅವರಿಗೆ ಶಕ್ತಿ ನೀಡಿದೆ ಎಂದಿದ್ದಾರೆ.