ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇಂದು ತಮ್ಮ ಪತ್ನಿ ರಾಬ್ರಿ ದೇವಿ, ಪುತ್ರ ಹಾಗೂ ಇಂಡಿಯಾ ಬ್ಲಾಕ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಂದಿಗೆ ಲಾಲು ಪ್ರಸಾದ್ ಯಾದವ್ ಅವರು ಮತ ಚಲಾಯಿಸಿದ್ದು, ಆಡಳಿತದಲ್ಲಿ ಬದಲಾವಣೆ ತರಬೇಕೆಂದು ಕರೆ ನೀಡಿದ್ದಾರೆ.
'ರೋಟಿ'ಯನ್ನು ನಿರಂತರವಾಗಿ 'ತವಾ'ದ ಮೇಲೆ ತಿರುಗಿಸಬೇಕು. ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ. ಹಾಗೆಯೇ ನಿತೀಶ್ ಕುಮಾರ್ ಸರ್ಕಾರವನ್ನು ಬದಲಾಯಿಸಬೇಕು ಎಂದು ಹೇಳಿದರು.
ತವಾ ಮೇಲೆ 'ರೋಟಿ'ಯನ್ನು ತಿರುಗಿಸಬೇಕು. ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ ಎಂದು ರಾಜ್ಯದಲ್ಲಿ ಸರ್ಕಾರ ಬದಲಾವಣೆಗೆ ಕರೆ ನೀಡುವ ಸಂದೇಶದೊಂದಿಗೆ ಲಾಲು ಪ್ರಸಾದ್ ಅವರು ಎಕ್ಸ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
"ರೋಟಿಯನ್ನು 'ತವಾ'ದ ಮೇಲೆ ತಿರುಗಿಸಬೇಕು. ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ. 20 ವರ್ಷಗಳು ತುಂಬಾ ಆಯಿತು! ಈಗ, ಹೊಸ ಬಿಹಾರವನ್ನು ನಿರ್ಮಿಸಲು ತೇಜಸ್ವಿ ಸರ್ಕಾರ ಅಗತ್ಯ" ಎಂದು ಅವರು ಹೇಳಿದ್ದಾರೆ.